ಉಡುಪಿ ಉತ್ಸವ : ದಿನೇ ದಿನೇ ಹೆಚ್ಚುತ್ತಿರುವ ಜನಾಕರ್ಷಣೆ,ಆದಿತ್ಯವಾರದ ಮಜಾ ಉಡುಪಿ ಉತ್ಸವದಲ್ಲಿ ಕಳೆಯಿರಿ
ಉಡುಪಿ: ಉಡುಪಿ ಕಲ್ಸಂಕ ರೋಯಲ್ ಗಾರ್ಡ್ ನಲ್ಲಿ ಆರಂಭಗೊಂಡಿರುವ ‘ಉಡುಪಿ ಉತ್ಸವ’ ದಿನದಿಂದ ದಿನಕ್ಕೆ ಜನಾಕರ್ಷಣೆ ಪಡೆಯುತ್ತಿದೆ. ಎಲ್ಲಾ ರೀತಿಯ ಶಾಪಿಂಗ್ ಜತೆಯಲ್ಲಿ ವೈವಿಧ್ಯಮಯ ಖಾದ್ಯಗಳನ್ನು ಸವಿಯುವ ಅವಕಾಶ ಇಲ್ಲಿದೆ. ಜನತೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದಾರೆ.
ಪ್ರತೀ ದಿನ ಸಂಜೆ 4 ಗಂಟೆಯಿಂದ 9ರವರೆಗೆ ತೆರೆದುಕೊಳ್ಳುತ್ತಿರುವ ಈ ಉತ್ಸವ ಕುಟುಂಬದ ಪರಿಪೂರ್ಣ ಬಯ ಕೆಯನ್ನು ಒಂದೇ ಸೂರಿನಡಿ ಪೂರೈಸುತ್ತಿದೆ. ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ಇಲೆಕ್ಟ್ರಾನಿಕ್ ಉಪಕರಣಗಳು, ಮಕ್ಕಳ ಆಟೋಟ ವಸ್ತುಗಳು, ಚಿತ್ತಾಪಹರಿಸುವ ವಿವಿಧ ರಾಜ್ಯಗಳ ಸಾಂಪ್ರಾದಾಯಿಕ ಆಧುನಿಕ ಶೈಲಿಯ ಬಟ್ಟೆ ಬರೆಗಳು, ಪುಸ್ತಕ, ವಸ್ತ್ರಮಳಿಗೆ ಹೀಗೆ ಎಲ್ಲ ಆವಶ್ಯಕತೆಗಳನ್ನು ಪೂರೈಸಲಾಗುತ್ತಿದೆ.
ಮನೋರಂಜನಾ ಪ್ರಿಯರಿಗಾಗಿ ವಿನ್ಯಾಸಗೊಂಡ ಇಟಾಲಿಯನ್ ಟೊರಾಟೊರಾ, ಕ್ಯಾಟರ್ ಪಿಲ್ಲರ್, ಜಂಪಿಂಗ್ ಫ್ರಾಗ್, ಡ್ಯಾಶಿಂಗ್ ಕಾಡು, ಟೈಟಾನಿಕ್, ಮೆರ‌್ರಿ ಕೊಲಂಬಸ್, 3ಡಿ ಶೋ, ಲಾಫಿಂಗ್ ಹೌಸ್ ಮೊದಲಾದ 20ಕ್ಕೂ ಅಧಿಕ ಅಮ್ಯೂಸ್‌ಮೆಂಟ್‌ಗಳು ಭರಪೂರ ಮನೋರಂಜನೆ ಒದ ಗಿಸುತ್ತಿವೆ. ಅಟೋಮೊಬೈಲ್ಸ್, ಹೋಂ ಅಪ್ಲೈನ್ಸ್‌ಸ್, ಹೆಲ್ತ್‌ಕೇರ್, ಫ್ಯಾಶನ್‌ವೇರ್ಸ್, ಗಾರ್ಮೆಂಟ್ಸ್, ಆಂಟಿಕ್, ಫಿಟ್ಟಿಂಗ್ಸ್, ಕಾರ್ಪೆಟ್ಸ್, ಆರ್ಟಿಫಿಶಯಲ್ ಆ್ಯಂಡ್ ಆ್ಯಂಟಿಕ್ ಜುವೆಲ್ಲರಿಸ್, ಹ್ಯಾಂಡ್‌ಲೂಮ್, ಹ್ಯಾಂಡಿಕ್ರಾಫ್ಟ್ ವಿಭಾ ಗಗಳಲ್ಲಿ ತಮಗಿಷ್ಟವಾದ ವಸ್ತುಗಳನ್ನು ಆರಿಸುವ ವಿಫುಲ ಆಯ್ಕೆಗಳಿವೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…