Featured

ಉಡುಪಿ: ಉಭಯ ಜಿಲ್ಲೆಗಳಲ್ಲಿ 3.21 ಲಕ್ಷ ಫ‌ಲಾನುಭವಿಗಳಿಗೆ ಪಿಂಚಣಿ ಲಾಭ – Vishwanews24

ಉಡುಪಿ: ಉಭಯ ಜಿಲ್ಲೆಗಳಲ್ಲಿ 3.21 ಲಕ್ಷ ಫ‌ಲಾನುಭವಿಗಳಿಗೆ ಪಿಂಚಣಿ ಲಾಭ

ಉಡುಪಿ: ಸಾಮಾಜಿಕ ಭದ್ರತೆ ಮಾಸಿಕ ಪಿಂಚಣಿ ಯೋಜನೆಯಡಿ ಉಭಯ ಜಿಲ್ಲೆಗಳಲ್ಲಿ 3.21 ಲಕ್ಷಕ್ಕೂ ಅಧಿಕ ಫ‌ಲಾನುಭವಿಗಳು ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಮೊದಲಾದ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನವನ್ನು 29,504 ಮಂದಿ ಪಡೆದರೆ, ದ.ಕ. ಜಿಲ್ಲೆಯಲ್ಲಿ 33,273 ಮಂದಿ ಪಡೆಯುತ್ತಿದ್ದಾರೆ. ವಿಧವಾವೇತನವನ್ನು ಉಡುಪಿಯಲ್ಲಿ 35,575 ಮಂದಿ ಹಾಗೂ ದ.ಕ.ದಲ್ಲಿ 48,478 ಫ‌ಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಉಡುಪಿಯಲ್ಲಿ 65,357, ದ.ಕ.ದಲ್ಲಿ 63,531 ಮಂದಿ ಪಿಂಚಣಿ ಪಡೆಯುತ್ತಿದ್ದಾರೆ.

ಉಡುಪಿಯಲ್ಲಿ 12,537 ಹಾಗೂ ದ.ಕ.ದಲ್ಲಿ 17,719 ಮಂದಿ ಅಂಗವಿಕರಲ ವೇತನ ಪಡೆಯುತ್ತಿದ್ದಾರೆ. ಮನಸ್ವಿನಿ ಯೋಜನೆಯಡಿ ಉಡುಪಿಯಲ್ಲಿ 3,999 ಹಾಗೂ ದ.ಕ.ದಲ್ಲಿ 6,176, ಮೈತ್ರಿ ಯೋಜನೆಯಡಿ ಉಡುಪಿಯಲ್ಲಿ 27, ದ.ಕ.ದಲ್ಲಿ 15 ಹಾಗೂ ಉಡುಪಿಯಲ್ಲಿ 1,469, ದ.ಕ.ದಲ್ಲಿ 3,717 ಎಂಡೋಸೆಲ್ಫಾನ್‌ ಸಂತ್ರಸ್ತರು ಮಾಸಾಶನ ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ವಿವಿಧ ಯೋಜನೆಯಡಿ ಉಡುಪಿಯ 1,48,479 ಹಾಗೂ ದ.ಕ.ದ 1,72,938 ಮಂದಿ ಪಿಂಚಣಿ ಪಡೆಯುತ್ತಿದ್ದಾರೆ.

ಆಯಸಿಡ್‌ ದಾಳಿಗೆ ಒಳಗಾಗಿರುವ ಮಹಿಳೆಯರಿಗೂ ಸರಕಾರದಿಂದ ಮಾಸಾಶನ ನೀಡಲಾಗುತ್ತಿದೆ. ಉಡುಪಿ ಯಲ್ಲಿ ಯಾರೂ ಇಲ್ಲ, ದ.ಕ.ದಲ್ಲಿ ಒಬ್ಬರು ಮಾಸಾಶನ ಪಡೆಯುತ್ತಿದ್ದಾರೆ. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿ ಕೊಂಡ ರೈತರ ಪತ್ನಿಯರಿಗೂ ಮಾಸಾಶನ ನೀಡಲಾಗುತ್ತದೆ. ಆ ರೀತಿಯಲ್ಲಿ ಉಡುಪಿಯ 11 ಹಾಗೂ ದ.ಕ.ದ 28 ಫ‌ಲಾನುಭವಿಗಳು ಸರಕಾರದಿಂದ ಪಿಂಚಣಿ ಪಡೆಯುತ್ತಿದ್ದಾರೆ.

ಒಟ್ಟಾರೆ ಯಾಗಿ ಬೆಳಗಾವಿ ಜಿಲ್ಲೆ ಯಲ್ಲಿ ರಾಜ್ಯದಲ್ಲೇ ಗರಿಷ್ಠ ಸಂಖ್ಯೆಯ(7,27,698) ಹಾಗೂ ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ (57,005) ಫ‌ಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ.

ನೇರ ವರ್ಗಾವಣೆ
ಸರಕಾರದ ಬಹುತೇಕ ಎಲ್ಲ ಯೋಜನೆಯ ಪಿಂಚಣಿಯನ್ನು ಫ‌ಲಾನು ಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಫ‌ಲಾನು ಭವಿಗಳು ನೀಡುವ ಬ್ಯಾಂಕ್‌ ಖಾತೆಗೆ ನೇರವಾಗಿ ಪ್ರತೀ ತಿಂಗಳು ಹಣ ವರ್ಗಾವಣೆ ಮಾಡಲಾಗುತ್ತದೆ. ವೃದ್ಧಾಪ್ಯ ವೇತನ ಸೇರಿದಂತೆ ಕೆಲವು ಪಿಂಚಣಿ ಸೌಲಭ್ಯ ಬರುವಾಗ ವಿಳಂಬವಾಗುವುದೂ ಇದೆ. ಫ‌ಲಾನುಭವಿಗಳು ಎರಡು ಮೂರು ತಿಂಗಳು ಕಾಯಬೇಕಾಗುತ್ತದೆ.

Vishwa News 24

Recent Posts

ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆ ಭೀಕರ ರಸ್ತೆ ಅಪಘಾತ :  11 ಮಂದಿ ಸಾವು – vishwanews24

ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆಭೀಕರ ರಸ್ತೆ ಅಪಘಾತ :  11 ಮಂದಿ ಸಾವು ಥಾಣೆ: ವ್ಯಾನ್ ಹಾಗೂ…

2 hours ago

ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು – vishwanews24

ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು ಮೀನುಗಳ ಕೊರತೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕರಾವಳಿಯ ಮೀನುಗಾರರು ಮಂಗಳೂರು(ದಕ್ಷಿಣ ಕನ್ನಡ):…

3 hours ago

ಹಿರಿಯ ಶಾಸಕರು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ : ಪರಮೇಶ್ವರ್ – vishwanews24

ಹಿರಿಯ ಶಾಸಕರು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ : ಪರಮೇಶ್ವರ್ ಬೆಂಗಳೂರು: ಅದೇನು ಗ್ಯಾಂಬ್ಲಿಂಗ್ ಅಲ್ಲ, ಹಿರಿಯ ಶಾಸಕರು ಸಚಿವ…

4 hours ago

ಕಾರ್ಕಳ : ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ – 82.37 ಕೋಟಿ ರೂ.ನೆರವಿಗೆ ಸರಕಾರಕ್ಕೆ ಮನವಿ: ಡಾ.ಎಂಎನ್‌ಆರ್ – vishwanews24

ಕಾರ್ಕಳ : ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ: ಡಾ.ಎಂ.ಎನ್.ರಾಜೇಂದ್ರಕುಮಾರ್ 82.37 ಕೋಟಿ ರೂ.ನೆರವಿಗೆ ಸರಕಾರಕ್ಕೆ ಮನವಿ: ಡಾ.ಎಂಎನ್‌ಆರ್ ಕಾರ್ಕಳ: ಕಾರ್ಕಳದ…

4 hours ago

ಮೂಡುಬಿದಿರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ; ಎಂಟು ದನಗಳ ರಕ್ಷಣೆ – vishwanews24

ಮೂಡುಬಿದಿರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ; ಎಂಟು ದನಗಳ ರಕ್ಷಣೆ, ಎರಡು ವಾಹನ ವಶ ಮೂಡುಬಿದಿರೆ: ಅತ್ಯಂತ ಹಿಂಸಾತ್ಮಕವಾಗಿ ಹಾಗೂ…

5 hours ago

ರಾಜ್ಯದ ಹಲವೆಡೆ ಇಂದು, ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ : ಹವಾಮಾನ ಇಲಾಖೆ – vishwanews24

ರಾಜ್ಯದ ಹಲವೆಡೆ ಇಂದು, ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ : ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹಲವೆಡೆ ಇಂದು…

5 hours ago