ಉಡುಪಿ: ಕೊರೊನಾ ಬಳಿಕ ಇದೇ ಮೊದಲ ಬಾರಿಗೆ ಮಲ್ಪೆ ಕಡಲತಡಿ ಉಡುಪಿಯಲ್ಲಿ ಫುಡ್ ಫೆಸ್ಟಿವಲ್ ಆಯೋಜಿಸಲಾಗಿದೆ. ಏಪ್ರಿಲ್ 10ರ ಭಾನುವಾರ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಉಡುಪಿಯ ‘ಸ್ಕೈಲೈಟ್ಸ್ ಇವೆಂಟ್ಸ್’ ತಂಡವು ಮಲ್ಪೆ ಬೀಚ್‌ನಲ್ಲಿ ‘ಕೋಸ್ಟಲ್ ಡೈನ್’ ಎಂಬ ಅನ್‌ಲಿಮಿಟೆಡ್ ಫುಡ್ ಫೆಸ್ಟಿವಲ್ ಆಯೋಜಿಸಿದೆ.
ಈ ಕಾರ್ಯಕ್ರಮದ ವಿಶೇಷತೆಯೆಂದರೆ ಕೇವಲ 399 ರೂಪಾಯಿಗೆ ಅನ್‌ಲಿಮಿಟೆಡ್ ಫುಡ್ ಅನ್ನು ಸವಿಯುವ ಅವಕಾಶ. ಸಸ್ಯಾಹಾರ, ಮಾಂಸಾಹಾರ, ಮೀನಿನ ಖಾದ್ಯ, ಚಿಕನ್ ಖಾದ್ಯ ಜೊತೆಗೆ ತುಳುನಾಡಿನ ಹಲವಾರು ಖಾದ್ಯಗಳನ್ನು ಕೇವಲ 399 ರೂಪಾಯಿ ಪಾವತಿಸುವ ಮೂಲಕ ನೀವು ಮನಸ್ಸೋ ಇಚ್ಛೆ ಬಾಯಿ ಚಪ್ಪರಿಸಬಹುದು.
ಖಾದ್ಯಗಳು ಮಾತ್ರವಲ್ಲದೇ ಸಂಗೀತ ರಸಸಂಜೆ, ತುಳು ಮತ್ತು ಕನ್ನಡ ಚಿತ್ರರಂಗದ ಕಲಾವಿದರು, ಮಗನೇ ಮಹಿಷ, ರಾಜ್ ಸೌಂಡ್ಸ್ & ಲೈಟ್ಸ್, ಜ್ಯೂಲಿಯಟ್, ವರ್ಣಪಟಲ ಸಿನಿಮಾ ತಂಡಗಳು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮನ್ನ ಮನೋರಂಜಿಸಲಿದ್ದಾರೆ.
ರಾಜಕೀಯ ಗಣ್ಯವ್ಯಕ್ತಿಗಳಿಂದ ಉದ್ಘಾಟನೆಗೊಳ್ಳಲಿರುವ ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಬರುವ ನಿರೀಕ್ಷೆಯಿದೆ. ಮೊದಲೇ ಟಿಕೆಟ್ ಕೊಂಡು ಬುಕಿಂಗ್ ಮಾಡಿಕೊಳ್ಳುವವರಿಗಾಗಿ ಟೇಬಲ್ ರಿಸರ್ವ್ ಮಾಡಲಾಗುವುದು. ಹತ್ತಕ್ಕಿಂತ ಹೆಚ್ಚು ಜನ ಆಗಮಿಸುವ ತಂಡಗಳಿಗೆ 10% ಡಿಸ್ಕೌಂಟ್ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…