Categories: Featured

ಉಡುಪಿ: ಐತಿಹಾಸಿಕ ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಸಜ್ಜಾದ ಶ್ರೀ ಕೃಷ್ಣನೂರು -Vishwanews24

ಉಡುಪಿ: ಐತಿಹಾಸಿಕ ಅದಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಕೃಷ್ಣನೂರು ಸಜ್ಜಾಗಿದೆ. ನಗರವೇ ನವ ವಧುವಂತೆ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಗುಂಡಿಬಿದ್ದ ರಸ್ತೆಗಳಿಗೆ ಡಾಂಬಾರು ಬಿದ್ದಿದೆ. ರಸ್ತೆಗಳು ಕಸಮುಕ್ತವಾಗಿವೆ. ಸ್ವಾಗತ ಗೋಪುರಗಳು, ಕಮಾನುಗಳು ಪರ್ಯಾಯಕ್ಕೆ ಆಮಂತ್ರಣ ನೀಡುತ್ತಿವೆ.

ಪ್ಲಾಸ್ಟಿಕ್ ಬಳಕೆ ಇಲ್ಲ

ಅದಮಾರು ಮಠದ ಈಶಪ್ರಿಯ ತೀರ್ಥರ ಸಂಕಲ್ಪದಂತೆ ಪರಿಸರ ಕಾಳಜಿಗೆ ಒತ್ತು ನೀಡಲಾಗಿದ್ದು, ಗೋಪುರ ಹಾಗೂ ಕಮಾನುಗಳ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಕೆ ಮಾಡಿಲ್ಲ. ಬದಲಿಗೆ ಬಟ್ಟೆಯ ಬ್ಯಾನರ್‌ಗಳು ಹಾಗೂ ಮರದ ಉಪಕರಣಗಳನ್ನು ಬಳಸಲಾಗಿದೆ. ಕರಾವಳಿಯ ಸಂಸ್ಕೃತಿ, ಜಾನಪದ ಸೊಗಡು ಹಾಗೂ ತುಳುನಾಡ ಕಲಾ ಶ್ರೀಮಂತಿಕೆಯನ್ನು ಗೋಪುರಗಳ ಮೇಲೆ ಸುಂದರವಾಗಿ ಚಿತ್ರಿಸಲಾಗಿದೆ.

ಜೋಡುಕಟ್ಟೆ, ಕಲ್ಪನಾ, ಅಂಬಾಗಿಲು, ಬನ್ನಂಜೆ, ಕಡಿಯಾಳಿ, ಕಲ್ಸಂಕ, ಮಣಿಪಾಲ–ಉಡುಪಿ ಮುಖ್ಯರಸ್ತೆ, ಕೋರ್ಟ್ ರಸ್ತೆ ಹೀಗೆ, ಎಲ್ಲಿ ನೋಡಿದರೂ ಮಂಟಪ ಹಾಗೂ ಕಮಾನುಗಳು ರಾರಾಜಿಸುತ್ತಿವೆ.

ಗೂಡುದೀಪ ವಿಶೇಷ

ರಥಬೀದಿಯಿಂದ ಜೋಡುಕಟ್ಟೆಯವರೆಗೂ ಈ ಬಾರಿ 800 ಗೂಡುದೀಪಗಳನ್ನು ತೂಗು ಹಾಕಲಾಗುತ್ತಿದೆ. ಎರಡು ದಿನಗಳಲ್ಲಿ ಗೂಡುದೀಪಗಳ ಅಳವಡಿಕೆ ಪೂರ್ಣಗೊಳ್ಳಲಿದ್ದು, ಇಡೀ ನಗರ ಕಂಗೊಳಿಸಲಿದೆ ಎನ್ನುತ್ತಾರೆ ಶ್ರೀಕೃಷ್ಣಸೇವಾ ಬಳಗದ ಗೋವಿಂದರಾಜ್‌.

ರಥಬೀದಿಯಲ್ಲಿ ರಂಗು ತುಂಬಿಕೊಂಡಿದೆ. ಕೃಷ್ಣನ ದೇವಸ್ಥಾನ, ಮಧ್ವಸರೋವರ, ಅನಂತೇಶ್ವರ, ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ಅಷ್ಠಮಠಗಳು ವಿದ್ಯುತ್ ದೀಪಾಲಂಕಾರಗಳಿಂದ ಮಿಂಚುತ್ತಿವೆ. ರಥಬೀದಿಯ ಇಕ್ಕೆಲಗಳಲ್ಲೂ ದೀಪಾಲಂಕಾರ ಮಾಡಲಾಗಿದ್ದು ಆಕರ್ಷಣೀಯವಾಗಿದೆ.

ಕಮಾನುಗಳಲ್ಲಿ ಗುರುಸ್ಮರಣೆ

ಅದಮಾರು ಮಠದ ಗುರು ಪರಂಪರೆಯನ್ನು ಸ್ಮರಿಸಲು ಮಠದ 32 ಯತಿಗಳ ಹೆಸರನ್ನು 32 ಮಂಟಪಗಳಲ್ಲಿ ಅಚ್ಚೊತ್ತಲಾಗಿದೆ. ನಗರದ ಪ್ರಮುಖ ಹಾಗೂ ಆಯಕಟ್ಟಿನ ಜಾಗಗಳಲ್ಲಿ 42 ದೊಡ್ಡ ಹಾಗೂ ಸಣ್ಣ ಕಮಾನುಗಳನ್ನು ಶ್ರೀ ಕೃಷ್ಣಸೇವಾ ಬಳಗ ನಿರ್ಮಿಸಿದೆ.

ಕಣ್ಮನ ಸೆಳೆವ ಕಾಷ್ಠ ಶಿಲ್ಪ

ಕಾಷ್ಠ ಶಿಲ್ಪ ಸೊಬಗಿನಿಂದ ಅದಮಾರು ಮಠ ಕಣ್ಮನ ಸೆಳೆಯುತ್ತಿದೆ. ಮಠದ ಪ್ರವೇಶದ್ವಾರ, ಒಳಾವರಣ, ಪಟ್ಟದ ದೇವರ ಗುಡಿಗಳಲ್ಲಿ ಕಾಷ್ಠ ಶಿಲ್ಪಗಳ ವೈಭವ ಎದ್ದು ಕಾಣುತ್ತಿದ್ದು, ಸಾಗುವಾನಿ ಮರದ ತೊಲೆಗಳಲ್ಲಿ ಮೂಡಿರುವ ಕಲಾತ್ಮಕ ಕೆತ್ತನೆ ಅರೆ ಕ್ಷಣ ಹಿಡಿದು ನಿಲ್ಲಿಸುವಂತಿದೆ. ಕಂಬಗಳು, ಕಿಟಕಿ, ಕುರ್ಚಿಗಳಿಗೆ ಪಾಲಿಷ್ ಮಾಡಲಾಗಿದ್ದು ಫಳಫಳನೆ ಹೊಳೆಯುತ್ತಿವೆ.

ಭಾವಿ ಪರ್ಯಾಯ ಮಠಕ್ಕೆ ರಂಗು

ಭಾವಿ ಪರ್ಯಾಯ ಅದಮಾರು ಮಠ ಸುಣ್ಣ ಬಣ್ಣಗಳಿಂದ ಸಿಂಗಾರವಾಗಿದೆ. ಮಠದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಸಾಂಪ್ರದಾಯಿಕ ವಿನ್ಯಾಸಕ್ಕೆ ದಕ್ಕೆಯಾದಂತೆ ಜೀರ್ಣೋದ್ಧಾರ ಮಾಡಲಾಗಿದೆ. ಮಣ್ಣಿನ ಗೋಡೆಗಳಿಗೆ ಬಣ್ಣ ಬಳಿದು ಅಂದವನ್ನು ಹೆಚ್ಚಿಸಲಾಗಿದೆ. ನೂರಾರು ವರ್ಷಗಳಷ್ಟು ಹಳೆಯ ಮರದ ಕಂಬಗಳಿಗೆ ಪಾಲಿಷ್‌ ಮಾಡಲಾಗಿದ್ದು, ಗಮನ ಸೆಳೆಯುತ್ತಿವೆ.

ಮಠಕ್ಕೆ ಹೊಸದಾಗಿ ವೈರಿಂಗ್ ಮಾಡಿಸಲಾಗಿದ್ದು, ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಪರ್ಯಾಯದ ಅವಧಿಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಭೇಟಿನೀಡುವ ಹಿನ್ನೆಲೆಯಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

18ರಂದು ಸರ್ವಜ್ಞ ಪೀಠಾರೋಹಣ

ಅದಮಾರು ಮಠದ ಪರ್ಯಾಯ ಇದೇ ಜ.18ರಿಂದ ಆರಂಭವಾಗಿ ಜ.17, 2022ಕ್ಕೆ ಮುಕ್ತಾಯವಾಗಲಿದೆ. ಪರ್ಯಾಯದ ಪೂರ್ವಭಾವಿಯಾಗಿ ಈಗಾಗಲೇ ಅದಮಾರು ಮಠದ ಈಶಪ್ರಿಯ ತೀರ್ಥರು ಲೋಕಸಂಚಾರ ಮುಗಿಸಿ ಪುರಪ್ರವೇಶ ಮಾಡಿದ್ದಾರೆ. 18ರಂದು ಪರ್ಯಾಯ ಪೀಠಾರೋಹಣ ನೆರವೇರಲಿದ್ದು, ಅಂದು ಬೆಳಗಿನ ಜಾವ 1.20ಕ್ಕೆ ಈಶಪ್ರಿಯ ತೀರ್ಥರು ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. 1.50ಕ್ಕೆ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದೇವರ ಪೂಜೆ ನೆರವೇರಿಸಿ, 4.50ಕ್ಕೆ ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿ, ಬಳಿಕ ಅನಂತೇಶ್ವರ, ಚಂದ್ರಮೌಳೇಶ್ವರನ ದರ್ಶನ ಪಡೆಯಲಿದ್ದಾರೆ. 5.30ಕ್ಕೆ ಕೃಷ್ಣಮಠ ಪ್ರವೇಶಿಸುವ ಯತಿಗಳು, 5.57ಕ್ಕೆ ಅಕ್ಷಯಪಾತ್ರೆ ಸ್ವೀಕರಿಸಿ ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. 10ಕ್ಕೆ ಮಹಾಪೂಜೆ ಬಳಿಕ, ಅನ್ನ ಸಂತರ್ಪಣೆ ಹಾಗೂ ಮಧ್ಯಾಹ್ನ 2.30ಕ್ಕೆ ರಾಜಾಂಗಣದ ನರಸಿಂಹ ವೇದಿಕೆಯಲ್ಲಿ ಪರ್ಯಾಯ ದರ್ಬಾರ್ ನಡೆಯಲಿದೆ.

₹11 ಕೋಟಿ ಅನುದಾನ

ಪರ್ಯಾಯ ಮಹೋತ್ಸವಕ್ಕೆ ರಾಜ್ಯ ಸರ್ಕಾರ ₹ 3 ಕೋಟಿ, ಜಿಲ್ಲಾಡಳಿತ, ನಗರಸಭೆಯಿಂದ ಒಟ್ಟು ₹ 11 ಕೋಟಿ ಅನುದಾನ ನೀಡಲಾಗಿದ್ದು, ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಪರ್ಯಾಯಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಮೊಬೈಲ್‌ ಶೌಚಾಲಯಗಳ ನಿರ್ಮಾಣ ಹಾಗೂ ಸಂಚಾರ ವ್ಯವಸ್ಥೆ, ರಸ್ತೆಗಳ ದುರಸ್ತಿ, ದಾರಿ ದೀಪಗಳನ್ನು ರಿಪೇರಿ ಮಾಡಿಸಲಾಗಿದೆ. ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ನಗರದ 12 ಸ್ಥಳಗಳಲ್ಲಿ 30ಕ್ಕಿಂತ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago