ಉಡುಪಿ : ಕರಾವಳಿ ಭಾಗದಲ್ಲಿ ಸೇನೆಗೆ ಸೇರಲು ಇಚ್ಚಿಸುವವರಿಗಾಗಿ ಉಡುಪಿ, ದ.ಕ ಹಾಗೂ ಉತ್ತರ ಕನ್ನಡದಲ್ಲಿ ಸೇನಾ ಆಯ್ಕೆ ಶಾಲೆಗಳನ್ನು ತೆಗೆಯಲಾಗುವುದು ಎಂದು ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಅವರು, ಸೇನೆಗೆ ಸೇರುವ ಆಸಕ್ತರಿಗಾಗಿ ಉಡುಪಿಯಲ್ಲಿ ಸ್ಥಾಪಿಸುವ ಸಂಸ್ಥೆಗೆ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಸಂಸ್ಥೆ, ದ.ಕ ಜಿಲ್ಲೆಯಲ್ಲಿ ರಾಣಿ ಅಬ್ಬಕ್ಕ ಸೇನಾ ಆಯ್ಕೆ ಸಂಸ್ಥೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂಜಾ ನಾಯ್ಕ್ ಸೇನಾ ಆಯ್ಕೆ ಸಂಸ್ಥೆ ಎಂಬ ಹೆಸರಿನಲ್ಲಿ ಮೂರು ಸೇನಾ ತರಬೇತಿ ಶಾಲೆಗಳನ್ನು ತೆರೆಯಲಾಗುವುದು ಎಂದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಜನಪರ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದ ಅವರು, ಕೇಂದ್ರ ಸರಕಾರ 8 ವರ್ಷಗಳಲ್ಲಿ ಸೇವಾ ಸುಶಾಸನ, ಬಡವರ ಕಲ್ಯಾಣ ,ಸೇವಾ ಯೋಜನೆ ಅಡಿಯಲ್ಲಿ ಅನೇಕ ಜನಪರ ಕಾರ್ಯಕ್ರಮ ಗಳನ್ನು ಹಮ್ಮಿ ಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನಿರ್ವಹಣೆ, ಅಭಿವೃದ್ಧಿ ಕಾರ್ಯಗಳು, ಸಾರ್ವಜನಿಕ ಸೇವೆಗಳು ಬಡವರಿಗಾಗಿ ರೂಪಿಸಿದ ಹತ್ತಾರು ಯೋಜನೆಗಳು ಬಿಜೆಪಿ ಕಾರ್ಯ ಕರ್ತರಿಗೆ ಹೆಮ್ಮೆ ಪಡುವಂತಹದ್ದಾಗಿದೆ ಎಂದರು.
ಕೇಂದ್ರ ಸರಕಾರ ರಾಜ್ಯದ ಅಭಿವೃದ್ಧಿಗೆ 1,29,776 ಕೋ ರೂ. ಅನುದಾನ ಮಂಜೂರು ಮಾಡಿತ್ತು. ಸುಮಾರು1.15 ಲಕ್ಷ ಕೋಟಿ ರೂ.ಗಳನ್ನು ವಿಮಾ ಯೋಜನೆ ಅಡಿಯಲ್ಲಿ ದೇಶದ ರೈತರು ಪಡೆದಿದ್ದಾರೆ. ರೈತರ ಬೆಲೆ ಸಾಗಾಣಿಕೆ ಗಾಗಿ ವಿಶೇಷ ರೈಲು ಸೇವೆ ನೀಡಲಾಗಿದೆ.
ಇದೇ ವೇಳೆ ಅವರು, ಇಂಧನ ಬೆಲೆ ಹೆಚ್ಚಾದಾಗ ಟೀಕೆ ಮಾಡುವವರು ಬೆಲೆ ಕಡಿಮೆ ಅದಾಗ ಸ್ವಾಗತ ಮಾಡುವುದಿಲ್ಲ ಎಂಬ ಆತಂಕ ವಿದೆ. ಬೆಲೆ ಏರಿಕೆ – ಇಳಿಕೆ ಸ್ವಾಭಾವಿಕ ವಾಗಿದ್ದು ಬೆಲೆಗಳನ್ನು ನಿಯಂತ್ರಣ ಮಾಡುವುದು ಸರಕಾರದ ಜವಾಬ್ದಾರಿ ಅದನ್ನು ಸರಕಾರ ಮಾಡುತ್ತದೆ ಎಂದರು. ಇದೇ ವೇಳೆ ಕಾರ್ಕಳದ ಬೋಳ ಗ್ರಾಮ ಪಂಚಾಯತ್ ನಲ್ಲಿ ನಾಥೂರಾಮ್ ಗೋಡ್ಸೆ ಹೆಸರಿನ ನಾಮ ಫಲಕ ಅಳವಡಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಇದು ಸರಕಾರದ ವೈಫಲ್ಯ ಅಲ್ಲ. ಅನಾಗರಿಕತೆ, ಹೇಡಿತನದ ಹೇಯ ಕೃತ್ಯ ಎಂದರು. ಹಾಗೂ ಇದಕ್ಕೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಅದನ್ನು ತೆರವುಗೊಳಿಸಲಾಗಿದೆ ಎಂದರು.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…