Featured

ಉಡುಪಿ: ಕರ್ತವ್ಯ ನಿರತ ರೈಲ್ವೇ ಸಿಬ್ಬಂದಿಗೆ ನಿಂದಿಸಿ, ಜೀವ ಬೆದರಿಕೆ ; ಆರೋಪಿ ವಶಕ್ಕೆ – VIshwanews24

ಉಡುಪಿ: ಕರ್ತವ್ಯ ನಿರತ ರೈಲ್ವೇ ಸಿಬ್ಬಂದಿಗೆ ನಿಂದಿಸಿ, ಜೀವ ಬೆದರಿಕೆ- ಆರೋಪಿ ವಶಕ್ಕೆ

ಉಡುಪಿ : ಮಂಗಳೂರು ಸೆಂಟ್ರಲ್ ನ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ಜನರಲ್ ಕೋಚ್‌ನಲ್ಲಿ ಕರ್ತವ್ಯ ನಿರತ ರೈಲ್ವೇ ಪೊಲೀಸ್ ಸಿಬ್ಬಂದಿಯನ್ನು ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

ಸಮೀರ್ ಬಿವಾಜೆ ಶಿಂದು ಬಂಧಿತ ಆರೋಪಿಯಾಗಿದ್ದಾನೆ . ಕೊಂಕಣ ರೈಲ್ವೆಯಲ್ಲಿ ಕಾನ್‌ಸ್ಟೆಬಲ್ ಆಗಿ ಝೋನಾ ಪಿಂಟೋ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲಿನ ಜನರಲ್ ಕೋಚ್‌ನಲ್ಲಿ ಕೆಲವರು ಗಲಾಟೆ ಮಾಡುತ್ತಿರುವ ಬಗ್ಗೆ ಕರೆ ಬಂದಿತ್ತು. ಝೋನಾ ಮತ್ತು ಕಾನ್‌ಸ್ಟೆಬಲ್ ಶ್ರೀಕಾಂತ್ ಅವರೊಂದಿಗೆ ಕಂಪಾರ್ಟ್‌ಮೆಂಟ್ ಬಳಿ ಹೋದಾಗ, ಕರ್ತವ್ಯ ನಿರತ ಟಿಟಿಇ ಹಾಗೂ ಸಾರ್ವಜನಿಕರು, ಗಲಾಟೆ ಮಾಡುತ್ತಿದ್ದ ಸಮೀರ್‌ನನ್ನು ಹಿಡಿದುಕೊಂಡಿದ್ದರು.

ಸಮೀರ್ ಅವರು ಟಿಟಿಇ ನೀಡಿದ್ದ ಮೆಮೊವನ್ನು ಹರಿದು ಬಿಸಾಕಿ ಝೋನಾ ಪಿಂಟೋ ಮತ್ತು ಅವರ ಸಹೋದ್ಯೋಗಿ ಶ್ರೀಕಾಂತ್ ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಮೀರ್‌ನನ್ನು ನಿಲ್ದಾಣದಲ್ಲಿರುವ ರೈಲ್ವೆ ನಿರೀಕ್ಷಕರ ಕಚೇರಿಗೆ ಕರೆದೊಯ್ದಾಗ, ಇನ್‌ಸ್ಪೆಕ್ಟರ್‌ಗೂ ಬೆದರಿಕೆ ಹಾಕಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Vishwa News 24

Recent Posts

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ – vishwanews24

ಉಡುಪಿ : ಅಕ್ಕ ಕೆಫೆ ನಿರ್ವಹಣೆ ;  ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…

3 days ago

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ – vishwanews24

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ,  ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…

3 days ago

ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ – vishwanews24

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…

4 days ago

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ – vishwanews24

ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…

4 days ago

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…

4 days ago

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…

4 days ago