ಉಡುಪಿ: ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿಗೆ ಉಡುಪಿಯ ಪುಸಿದ್ಧ ಛಾಯಾಗ್ರಾಹಕ ಫೋಕಸ್ ರಾಘು (ರಾಘವೇಂದ್ರ ಕೊಡಂಗಳ) ಆಯ್ಕೆಯಾಗಿದ್ದಾರೆ.
ಉಡುಪಿಯ ಕೊಡಂಗಳ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಬೆಳೆದ ರಾಘವೇಂದ್ರ ಕೊಡಂಗಳ ಇಂದು ಫೋಕಸ್ ರಾಘು ಎಂಬ ಹೆಸರಿನಲ್ಲಿ ಪುಸಿದ್ಧರು. ಛಾಯಾಗ್ರಹಣ ಕ್ಷೇತ್ರದಲ್ಲಿ ಮುನ್ನೂರಕ್ಕೂ ಹೆಚ್ಚು ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿ ಪಡೆದವರು. 25 ಕ್ಕೂ ಹೆಚ್ಚು ದೇಶಗಳ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನಗಳಿಸಿ ಫ್ರಾನ್ಸ್ ದೇಶ ಕೊಡಮಾಡುವ EFIAP ಮತ್ತು ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಫಿ ಕೊಡಮಾಡುವ EFIP ಡಿಸ್ಟಿಂಕ್ಷನ್ ಗಳಿಸಿರುತ್ತಾರೆ. ಇದು ಹಳ್ಳಿ ಯುವಕನ ಜಾಗತಿಕ ಮಟ್ಟದ ಸಾಧನೆ.
ಇದನ್ನೂ ಓದಿ:
ಮದುವೆ ಛಾಯಾಗ್ರಹಣದಲ್ಲಿ ವಿನೂತನ ಪುಯೋಗಗಳೊಂದಿಗೆ ಸೈ ಎನ್ನಿಸುವ ಫೋಕಸ್ ರಾಘು ಅತ್ಯದ್ಭುತ ಪ್ರಿವೆಡ್ಡಿಂಗ್ ಫೋಟೋ ಶೂಟ್ಗಳ ಮೂಲಕ ಎಲ್ಲರ ಮನೆಮಾತಾಗಿದ್ದಾರೆ. ಅದರ ಜೊತೆಗೆ ತನ್ನ ಹವ್ಯಾಸವಾಗಿ ರೂಢಿಸಿಕೊಂಡ ಪುವಾಸ, ಚಾರಣದಿಂದಾಗಿ ಅವರ ಫೋಟೋಗಳು ವಿಶ್ವವಿಖ್ಯಾತಿಗಳಿಸಿವೆ.
ರಾಘು ಅವರ ಸಾಧನೆಗಳನ್ನು ಗುರುತಿಸಿ ಕರ್ನಾಟಕ ರಾಜ್ಯಕ್ಕೆ Nikon Influencer ಆಗಿ ನೇಮಕ ಮಾಡಿ ಹಳ್ಳಿ ಪ್ರತಿಭೆಯ ಪರಿಶ್ರಮಕ್ಕೆ ದೊಡ್ಡ ಗೌರವವನ್ನು ನೀಡಿದೆ. ಗ್ರಾಮೀಣ ಬದುಕನ್ನು ಎತ್ತಿ ಹಿಡಿಯುವ ನೆರಳು ಬೆಳಕಿನ ಪಿಕ್ಟೋರಿಯಲ್ ಛಾಯಾಚಿತ್ರ ಫೋಕಸ್ ರಾಘು ಅವರ ಪ್ರೀತಿಯ ಕ್ಷೇತ್ರ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…