Featured

ಉಡುಪಿ : ಕಾಂಗ್ರೆಸ್ ಸರಕಾರದ “ಗೋಕಳ್ಳರಿಗೆ ಸಹಕರಿಸುವ’ ನೀತಿಗೆ ವಿಶ್ವ ಹಿಂದೂ ಪರಿಷದ್ ಆಕ್ರೋಶ – vishwanews24

ಉಡುಪಿ : ಕಾಂಗ್ರೆಸ್ ಸರಕಾರದ “ಗೋಕಳ್ಳರಿಗೆ ಸಹಕರಿಸುವ’ ನೀತಿಗೆ ವಿಶ್ವ ಹಿಂದೂ ಪರಿಷದ್ ಆಕ್ರೋಶ

ಉಡುಪಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರಕಾರ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಹಿಂದೂ ಸಮಾಜಕ್ಕೆ ತೀವ್ರ ರೀತಿಯ ಕಿರುಕುಳ ಕೊಡುತ್ತ ಬಂದಿದ್ದು ಅದರ ಮುಂದುವರಿದ ಭಾಗವಾಗಿ ಇದೇ ತಿಂಗಳ 8ನೇ ತಾರೀಕಿಗೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಹಿಂದೂ ಸಮಾಜಕ್ಕೆ ಅತ್ಯಂತ ಪೂಜನೀಯವಾದ ಗೋವಂಶವನ್ನು ಹಿಂಸಾತ್ಮಕವಾಗಿ ಕಳ್ಳಸಾಗಾಟ ಮಾಡುವಾಗ ಪೊಲೀಸರು ವಶಪಡಿಸಿದ ಸಾಗಾಟ ವಾಹನಗಳನ್ನು ಸುಲಭದಲ್ಲಿ ಹಿಂತಿರುಗಿಸುವಂತೆ ಮಾಡಲು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ. 2020ನ್ನು ಸಡಿಲುಗೊಳಿಸಿ ತಿದ್ದುಪಡಿ ತರಲು ಕ್ಯಾಬಿನೆಟ್ ಸಭೆಯಲ್ಲಿ ಪಾಸ್ ಮಾಡಿದೆ ಎಂದು ಮಾಧ್ಯಮಗಳ ವರದಿ ಮೂಲಕ ತಿಳಿದುಬಂದಿದ್ದು ಗೋವುಗಳಿಗೆ ಹಿಂಸೆ ಹೆಚ್ಚಾಗುವ ಸಾಧ್ಯತೆ ಇರುವ ಈ ತಿದ್ದುಪಡಿಯನ್ನು ವಿಶ್ವ ಹಿಂದು ಪರಿಷದ್ ಹಿಂದು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸುತಿದ್ದು ತಿದ್ದುಪಡಿಯನ್ನು ತಕ್ಷಣ ಹಿಂದಕ್ಕೆ ಪಡೆಯ ಬೇಕೆಂದು ಕರ್ನಾಟಕ ದಕ್ಷಿಣ ಪ್ರಾಂತ್ಯದ ಗೋ ರಕ್ಷಾ ಪ್ರಮುಖರಾದ ಸುನೀಲ್ ಕೆ.ಆರ್ ಆಗ್ರಹಿಸಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಯಿದೆ ಯ ಸೆಕ್ಷನ್ 8ರ ಪ್ರಕಾರ ಪ್ರಸ್ತುತ ಅಕ್ರಮ ಗೋಸಾಗಾಟದ ವಾಹನವನ್ನು ಪೊಲೀಸರು ವಶಪಡಿಸಿದಾಗ ವಾಹನದ ಮೌಲ್ಯದಷ್ಟು ಬ್ಯಾಂಕ್ ಗ್ಯಾರಂಟಿಯನ್ನು ಕೊಟ್ಟೇ ತಾತ್ಕಾಲಿಕವಾಗಿ ಹಿಂಪಡೆಯಲು ಅವಕಾಶವಿದೆ. ಅಂದರೆ ಈಗ ವಶಪಡಿಸಿದ ವಾಹನದ ಮಾರುಕಟ್ಟೆ ಮೌಲ್ಯವು ರೂಪಾಯಿ 5 ಲಕ್ಷ ಇದ್ದರೆ ರೂಪಾಯಿ 5 ಲಕ್ಷದ ಬ್ಯಾಂಕ್ ಗ್ಯಾರಂಟಿಯನ್ನು ಪ್ರಸ್ತುತಪಡಿಸಿ ವಾಹನವನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಲು ಅವಕಾಶವಿದೆ. ಪ್ರಕರಣದ ಅಪರಾಧ ಸಾಬೀತಾದಲ್ಲಿ ವಾಹನವನ್ನು ವಾಪನ್ ತಂದು ಸರಕಾರಕ್ಕೆ ಮುಟ್ಟುಗೋಲು ಹಾಕಬೇಕಾಗುತ್ತದೆ. ಇದಕ್ಕೆ ತಪ್ಪಿದಲ್ಲಿ ಬ್ಯಾಂಕ್ ಗ್ಯಾರಂಟಿಯ ಹಣವನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲಾಗುತ್ತದೆ. ಈಗ ಇರುವ ಕಾಯಿದೆ ಸಾಕಷ್ಟು ಪರಿಣಾಮಕಾರಿಯಾಗಿದ್ದು, ಬ್ಯಾಂಕ್ ಗ್ಯಾರಂಟಿ ತೆಗೆದು ಕೊಳ್ಳುವ ಶರತ್ತಿನಿಂದಾಗಿ ಸಾಕಷ್ಟು ಅಕ್ರಮ ಗೋ ಸಾಗಾಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಸಾವಿರಾರು ಗೋವಂಶಗಳ ರಕ್ಷಣೆಗೆ ಕಾರಣವಾಗಿದೆ.

ಇದರಲ್ಲಿ ಗೋ ಕಳ್ಳ ಸಾಗಾಟಗಾರರಿಗೆ ಬ್ಯಾಂಕ್ ಗ್ಯಾರಂಟಿಯನ್ನು ಕೊಡಲು ಕಷ್ಟವಾಗುತ್ತದೆಎಂಬ ಅಸಂಭದ್ದ ನೆಪ ಒಡ್ಡಿ. ಅಂತಹಆರೋಪಿಗಳ ಮೇಲಿನ ಕನಿಕರದಿಂದ ಕಾಂಗ್ರೆಸ್ ಸರಕಾರವು ಈ ಸೆಕ್ಷನ್ನಲ್ಲಿ ಇರುವ ಬ್ಯಾಂಕ್ ಗ್ಯಾರಂಟಿಯ ಶರತ್ತನ್ನು ಹಿಂಪಡೆದು ಕೇವಲ indemnitybond ಕೊಟ್ಟರೆ ಸಾಕೆಂದು ತಿದ್ದುಪಡಿ ತರುತ್ತಿದೆ. ಸರಕಾರಕ್ಕೆ ಗೋ ಕಳ್ಳ ಸಾಗಾಟಗಾರರ ಮೇಲೆ ಇಷ್ಟೊಂದು ಪ್ರೀತಿ ಯಾಕೆ ? ಇದು ಅಕ್ರಮ ಸಾಗಾಟಗಾರರಿಗೆ ಸರಕಾರವು “ಗೋಕಳ್ಳಸಾಗಣೇದಾರರೊಂದಿಗಿದೆ ನಾವಿದ್ದೇವೆ” ಎಂದು ಪರೋಕ್ಷವಾಗಿ ಸಂದೇಶ ಕೊಡುವ ಉದ್ದೇಶದಂತೆ ಕಾಣುತಿದ್ದು ಇನ್ನಷ್ಟು ಹಿಂಸಾತ್ಮಕ ರೀತಿಯಲ್ಲಿ ಗೋಸಾಗಾಟ ಹೆಚ್ಚಾಗಲಿದ್ದು ತಮಗೆ ಪೂಜನೀಯವಾಗಿರುವ ಗೋವುಗಳಿಗೆ ಹಿಂಸೆ ಆಗುವುದನ್ನು ನೋಡಿದವರ ಧಾರ್ಮಿಕ ಭಾವನೆಗೆ ಧಕ್ಕೆ ಬಂದು ಆಕ್ರೋಶ ಹೆಚ್ಚಿಸಲಿದೆ. ಈ ತಿದ್ದುಪಡಿಯ ಮೂಲಕ ಜನರನ್ನು ಉದ್ವಿಘ್ನಗೊಳಿಸುವಂತೆ ಸರಕಾರವೇ ಪ್ರಚೋದನೆ ನೀಡಿದಂತಾಗಿದೆ. ಸರಕಾರದ ಈ ನಡೆ ಧಾರ್ಮಿಕ ಭಾವನೆಗೆ ಪ್ರಚೋದನೆ ನೀಡುತ್ತಿದೆ. ಈ ತಿದ್ದುಪಡಿಯನ್ನು ತಕ್ಷಣ ಹಿಂದೆ ಪಡೆಯಲು ಒತ್ತಾಯಿಸಿ ವಿವಿಧ ಹಿಂದೂ ಸಂಘಟನೆಗಳ ನೇತ್ರತ್ವದಲ್ಲಿ ಹಿಂದೂ ಸಮಾಜವಿಡೀ ದಿನಾಂಕ 08-12-2025ನೇ ಸೋಮವಾರ ರಾಜ್ಯಾದ್ಯಾಂತ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago