ಉಡುಪಿ: ವಿಧಾನಸಭಾ ಚುನಾವಣೆ ಹಿನ್ನಲೆ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಉಡುಪಿಯಲ್ಲಿಯೂ ಅಭ್ಯರ್ಥಿಗಳು ಕೋಟಿ ಬೆಲೆಯ ಆಸ್ತಿಯನ್ನು ಹೊಂದಿದ್ದಾರೆ. ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಸಾದ್‌ರಾಜ್ ಕಾಂಚನ್ ಸಲ್ಲಿಸಿರುವ ನಾಮಪತ್ರದಲ್ಲಿ 33.64 ಕೋ.ರೂ. ಆಸ್ತಿ ಹಾಗೂ 6.16 ಕೋ.ರೂ. ಸಾಲವನ್ನು ತೋರಿಸಿದ್ದಾರೆ.
33.64 ಕೋ.ರೂ. ಆಸ್ತಿಯಲ್ಲಿ 24.08 ಚರಾಸ್ತಿ ಹಾಗೂ 9.56 ಕೋ. ರೂ. ಸ್ಥಿರಾಸ್ತಿ ಸೇರಿದೆ. ಅಪತ್ನಿ ಹೆಸರಿನಲ್ಲಿ 24.68 ಕೋ.ರೂ. ಚರಾಸ್ತಿ, 3.96 ಕೋ.ರೂ. ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಈಕ್ವಿಟಿ ಷೇರು ಇರುವುದನ್ನು ಉಲ್ಲೇಖೀಸಿದ್ದಾರೆ.
ಇನ್ನು ಕುಂದಾಪುರದ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವವರು 19 ಕೋಟಿ ಆಸ್ತಿ ಹೊಂದಿದ್ದು, ಕಿರಣ್ ಕೊಡ್ಗಿ ಅವರ ಹೆಸರಿನಲ್ಲಿ 9.32 ಕೋ.ರೂ.ಗಳ ಚರಾಸ್ತಿ, 9.88 ಕೋ.ರೂ. ಕೃಷಿ ಭೂಮಿ, ಕೃಷಿಯೇತರ ಭೂಮಿ ಇತ್ಯಾದಿ ಸೇರಿದ ಸ್ಥಿರಾಸ್ತಿ ಮೌಲ್ಯ, ತನ್ನ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 1.63 ಕೋ.ರೂ. ಸಾಲ ಇದೆ.
ಪತ್ನಿ ಹೇಮಾ ಕೊಡ್ಗಿ ಹೆಸರಿನಲ್ಲಿ 32.9 ಲಕ್ಷ ರೂ.ಚರಾಸ್ತಿ ಇದೆ. ಪಿತ್ರಾರ್ಜಿತವಾಗಿ ಬಂದ 33 ಎಕ್ರೆ ಕೃಷಿಭೂಮಿ, 1.75ಎಕರೆ ಕೃಷಿಯೇತರ ಭೂಮಿ, ಅಮಾಸೆಬೈಲಿನಲ್ಲಿ ವಾಣಿಜ್ಯ ಕಟ್ಟಡ, ಉಡುಪಿ ಹಾಗೂ ಮಂಗಳೂರಿನಲ್ಲಿ Flat ಹೊಂದಿದ್ದಾರೆ.
ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…
ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…
ಎಂಆರ್‌ಪಿಎಲ್ ದುರಂತ: ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…
ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…
ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ: ದಕ್ಷಿಣ ಕನ್ನಡ (ದ.ಕ)…