ಉಡುಪಿ : ಸಣ್ಣ ಕೈಗಾರಿಕೆಗೆ ಒತ್ತು ಕೊಟ್ಟು ಮನಗೊಬ್ಬರಿಗೆ ಉದ್ಯೋಗ ನೀಡುವ ಯೋಜನೆಯನ್ನು ನೀಡುವ ಮಹದಾಸೆಯನ್ನು ಹೊಂದಿದ್ದೇನೆ ಅಂತಾ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಮಣಿಪಾಲ ಟೆಕ್ನಾಲಜಿ ಸಮೂಹ ಸಂಸ್ಥೆಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತಾಡಿದ ಅವರು ಕಾರ್ಮಿಕರೇ ಈ ದೇಶದ ನಿಜವಾದ ಸಂಪತ್ತು. ಇಡೀ ದೇಶದ ಸೆಕ್ಯೂರಿಟಿ ಕೀಲಿ ಇರೋದೇ ಕಾರ್ಮಿಕರ ಕೈಯಲ್ಲಿ. ಮಣಿಪಾಲದ ಗ್ರೂಫ್ ನ ತಾಂತ್ರಿಕ ಸಂಸ್ಥೆ ಗಳು ದೇಶದಲ್ಲಿ ಅಲ್ಲದೇ ಪ್ರಪಂಚದಾದ್ಯಂತ ಸುದ್ಧಿಯಲ್ಲಿದೆ. ಬಹಳಷ್ಟು ಮಂದಿಗೆ ಉದ್ಯೋಗ ವನ್ನು ನೀಡುವ ಕಾರ್ಯವನ್ನು ಮಾಡ್ತಾ ಬಂದಿದೆ.
ಕಾಪು ಕ್ಷೇತ್ರದಲ್ಲಿ ಕೂಡಾ ಮಣಿಪಾಲ ಸಮೂಹ ಸಂಸ್ಥೆ ಯಂತೆಯೇ ಸಣ್ಣ ಕೈಗಾರಿಕೆಯನ್ನು ಹುಟ್ಟು ಹಾಕಿ ಮನೆಗೊಂದು ಮಂದಿಗೆ ಉದ್ಯೋಗ ನೀಡುವ ಬ್ರಹತ್ ಯೋಜನೆಯನ್ನು ಮಾಡುವ ಕಾರ್ಯವನ್ನು ರೂಪಿಸುವ ಮಹದಾಸೆಯನ್ನು ಹೊಂದಿದ್ದೇನೆ. ಕಾಪು ಕ್ಷೇತ್ರಕ್ಕೆ ಐಡೆಂಟಿಟಿ ಇರಲಿಲ್ಲ. ಬೃಹತ್ ಕೈಗಾರಿಕೆಯಿಂದ ಜನಪಲ್ಲಟ ಆಗಿ ಮರುಭೂಮಿ ಆಗಿತ್ತು. ಕಾಪು ತಾಲೂಕನ್ನು, ಪುರಸಭೆಯನ್ನು ಮಾಡಿ ಎಲ್ಲಾ ಸೌಕರ್ಯವನ್ನು ಒದಗಿಸುವ ಕೆಲಸವನ್ನು ಮಾಡಿದ್ದೇನೆ. ಕಾಪುವಿನ ಎಲ್ಲಾ ಗ್ರಾಮಕ್ಕೂ ನೇರ ಸಂಪರ್ಕವನ್ನು ಕೊಡುವ ಯೋಜನೆ ಮುಂದಿನ ದಿನಗಳಲ್ಲಿ ನಡೆಯಲಿದೆ.ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪನೆ ಮೂಲಕ ಶೈಕ್ಷಣಿಕ ವಾಗಿ ಕಾಪು ಸ್ವಂತ ಕಾಲ ಮೇಲೆ ನಿಲ್ಲುವ ಯೋಜನೆಯನ್ನು ರೂಪಿಸಬೇಕಾಗಿದೆ ಅಂತಾ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಮಣಿಪಾಲ ಸಮೂಹ ಸಂಸ್ಥೆಯ ಯುನಿಟ್ 4 ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಶ್ರೀನಿವಾಸ, ನಿರ್ವಹಣಾ ವಿಭಾಗದ ವ್ಯವಸ್ಥಾಪಕ ಸತೀಶ್ ಪ್ರಭು, ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಅಲೆವೂರು, ದೇವು ಪೂಜಾರಿ, ಸುಶಾಂತ್,ಸಂದೇಶ್, ಪ್ರಕಾಶ್ ಯತೀಶ್ ಕುಮಾರ್, ಜಲ್ಲೇಶ್ ಶೆಟ್ಟಿ ಉಪಸ್ಥಿತರಿದ್ದರು
ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ ಅಮರಾವತಿ: ಇಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ…
ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ ಕರಾವಳಿ ಭಾಗದಲ್ಲಿ ಕರ್ನಾಟಕ…
ಬಿಟ್ ಕಾಯಿನ್ ಹಗರಣ : ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ ಬೆಂಗಳೂರು: ಬಿಟ್ ಕಾಯಿನ್…
ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳೂರು:ರಾಷ್ಟ್ರೀಯ ಹೆದ್ದಾರಿ-66ರ ವಿಸ್ತರಣೆಯ…
ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ಒಬ್ಬ ನಿರಪರಾಧಿ .. ನಾಗೇಂದ್ರ ಅವರ ವಿರುದ್ಧ ಬಿಜೆಪಿ ನಡೆದುಕೊಂಡ ರೀತಿ…
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಚಿನ್ನ-ಬೆಳ್ಳಿಯ ಪ್ರಭಾವಳಿ ಅರ್ಪಿಸಿದ ರಾಜೇಶ್ ಶೆಟ್ಟಿ ದಂಪತಿ ಮಂಗಳೂರು : ಶ್ರೀ ಕ್ಷೇತ್ರ ಕಟೀಲು…