ಉಡುಪಿ: ಪೋಲಿಸರಿಂದ ಕಾಪು ಶಾಸಕರು ಮಾಮುಲೂ ಪಡೆಯುತ್ತಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೆಸರಿನಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದ್ದು ಹೇಳಿಕೆ ನಿಜವೇ ಆಗಿದ್ದರೆ ಅವರ ಮನೆಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಬೆದರಿಕೆ ಹಾಕಿದ್ದಾರೆ.
ಅವರು ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಸೊಕರೆಯವರು ಇದಕ್ಕೆ ಸ್ಪಷ್ಟೀಕರಣ ನೀಡಬೇಕು ಇಲ್ಲವಾದಲ್ಲಿ ಸೊರಕೆಯವರು ಸಭೆ ಮಾಡುವ ಎಲ್ಲಾ ಕಡೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತಾರೆ ಎಂದರು.
ಸೊರಕೆಯವರು ಕಳೆದ ಕೆಲವು ತಿಂಗಳುಗಳಿಂದ ಕಾಪುವಿನಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದಾರೆ ಸಂತೋಷ ಆದರೆ ರಾಜಕೀಯಕ್ಕೂ ಇತಿ ಮಿತಿ ಇದೆ ಎಂದ ಕುಯಿಲಾಡಿದ ಇತ್ತೀಚೆಗೆ ಉದ್ಘಾಟನಾ ಸಮಾರಂಭಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ತಂದು ಪ್ರತಿಭಟನೆಗಳನ್ನು ನಡೆಸುತ್ತಾ ಇದ್ದಾರೆ. ಸೊರಕೆಯವರ ಕಾಲದಲ್ಲಿ ಆದ ಕಾಮಾಗಾರಿ ಎಂದು ಯಾರು ಕೂಡಾ ಅಲ್ಲಗಳೆಯುತ್ತಿಲ್ಲ. ಓರ್ವ ಶಾಸಕನ ಕಾಲದಲ್ಲಿ ಯೋಜನೆಯ ಶಂಕು ಸ್ಥಾಪನೆ ಆದರೆ ಮತ್ತೋರ್ವ ಶಾಸಕನ ಕಾಲದಲ್ಲಿ ಅದು ಉದ್ಘಾಟನೆಗೊಳ್ಳುತ್ತದೆ ಇದರ ಕುರಿತು ಸ್ವಲ್ಪವಾದರೂ ಕಾಮನ್ ಸೆನ್ಸ್ ಮಾಜಿ ಶಾಸಕರಿಗೆ ಇರಬೇಕು. ಅದನ್ನು ಬಿಟ್ಟು ತಮ್ಮ ಚೇಲಾಗಳನ್ನು, ಕಾಂಗ್ರೆಸ್ ಫುಡಾರಿಗಳನ್ನು ತಂದು ಪ್ರತಿಭಟನೆ ನಡೆಸುವುದು ಸರಿಯಲ್ಲ. ನಮಗೆ ಇವುಗಳನ್ನು ಯಾವ ರೀತಿಯಲ್ಲಿ ಮಟ್ಟ ಹಾಕಬೇಕು ಎಂದು ಗೊತ್ತಿದೆ ಎಂದರು.
ಸೊರಕೆಯವರಿಗೆ ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇದೆ ಇಂತಹ ಘಟನೆಗಳು ಕೇವಲ ಕಾಪುವಿನಲ್ಲಿ ಮಾತ್ರ ನಡೆಯುತ್ತಿದೆ. ಸೊರಕೆಯವರು ಶಾಸಕರಾಗಿದ್ದಾಗ ಲಾಲಾಜಿ ಮೆಂಡನ್ ಕಾಲದ ಹಲವು ಕಾಮಗಾರಿಗಳ ಉದ್ಘಾಟನೆ ಆಗಿದೆ. ಆದರೆ ಈ ಯಾವ ಕಾರ್ಯಕ್ರಮಗಳಿಗೂ ಲಾಲಾಜಿ ಮೆಂಡನ್ ಅವರನ್ನು ಕರೆಯುವ ಸೌಜನ್ಯವನ್ನೂ ಸೊರಕೆಯವರು ತೋರಿಸಿಲ್ಲ ಎಂದರು.
ಸೊರಕೆಯವರಿಗೆ ಮೈಸೂರಿನ ಘಟನೆಯ ಬಗ್ಗೆ ಇಷ್ಟು ನೋವಾಗಿದ್ದು ಹೌದಾದರೆ ಹಿಂದೂ, ಕ್ರಿಶ್ಚಿಯನ್ನರ ಮಾರಣಹೋಮ ಮಾಡಿರುವ ಟಿಪ್ಪುವಿನ ಜಯಂತಿಯನ್ನು ಸಿದ್ದರಾಮಯ್ಯ ಸರಕಾರ ಆಚರಿಸಿದಾಗ ಸೊರಕೆಯವರು ಏಕೆ ಮಾತಾಡಿಲ್ಲ? ಸೊರಕೆಯವರ ಮೊಸಳೆ ಕಣ್ಣೀರಿಗೆ ಯಾವ ಹಿಂದೂ ಕೂಡಾ ಕರಗುವುದಿಲ್ಲ. ಸೊರಕೆಯವರಿಗೆ ಅಷ್ಟು ಪ್ರೀತಿ ಇದ್ದರೆ ಶ್ರೀರಾಮ ಮಂದಿರದ ಕುರಿತು ಅವರು ನೀಡಿರುವ ಹೇಳಿಕೆಯನ್ನು ಹಿಂಡಪಡೆಯಲಿ ಎಂದರು.
ಸೊರಕೆಯವರು ಕಾಲ ಬಂದ ಹಾಗೆ ವೇಷ ಬದಲು ಮಾಡುವುದು ಬೇಡ. ಕಾಂಗ್ರೆಸ್ ನವರು ರಾಮ ಮಂದಿರಕ್ಕೆ ಎಷ್ಟು ದುಡ್ಡು ನೀಡಿದ್ದಾರೆ ಅದರ ರಶೀದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಿ ಮೂರು ರಸ್ತೆಯಲ್ಲಿ ಸೇರಿಕೊಂಡು ಬೊಬ್ಬೆ ಹಾಕಿದ ಕೂಡಲೇ ಹಿಂದೂ ಕರಗುತ್ತಾನೆ ಎಂಬ ಭಾವನೆ ಬೇಡ. ಇನ್ನು ಮುಂದೆ ಎಲ್ಲಾ ಸಭೆಗೆ ಕೇಸರಿ ಶಾಲು ಹಾಕಿ ಬರಲಿ ನಾಯಿ ಬೊಗಳಿದರೆ ಸ್ವರ್ಗ ಲೋಕ ಹಾಳಾಗುವುದಿಲ್ಲೆ ಎಂಬುದು ಸೊರಕೆಯವರಿಗೆ ಗೊತ್ತಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…