ಉಡುಪಿ: ಕಾರಿನಲ್ಲಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಸೇತುವೆ ಬಳಿ ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದು, 20,11,900 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಕೋಟೆ ಗ್ರಾಮದ ಕಟಪಾಡಿ ಕಾಪು ನಿವಾಸಿ ಅಕ್ಬರ್ ಮುಹಮ್ಮದ್ ಬ್ಯಾರಿ (32) ಹಾಗೂ ಕಾಪು ಉಚ್ಚಿಲ ಬಡಾ ನಿವಾಸಿ ಎನ್.ಎಂ.ಮುಹಮ್ಮದ್ ಮುಕ್ದುಮ್ ಅಲಿ (28) ಬಂಧಿತರು.
ಕಾರ್ಯಾಚರಣೆ ವೇಳೆ 69.127 ಗ್ರಾಂ ತೂಕದ ಎಂಡಿಎಂಎ, ಆರು ಮೊಬೈಲ್ ಫೋನ್, 1,100 ರೂಪಾಯಿ ನಗದು, ಕಾರು, ಲೆನೊವೊ ಲ್ಯಾಪ್‌ಟಾಪ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಪೊಲೀಸರು ಅಂದಾಜು 20,11,900 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ಉಪವಿಭಾಗದ ಉಪಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ. ಹಾಗೂ ಉಡುಪಿ ನಗರ ಠಾಣೆಯ ಪ್ರಭಾರಿ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಡುಪಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕರಾದ ಪುನೀತ್ ಕುಮಾರ್ ಬಿ., ಸುರೇಶ್ ಕೆ., ಅಬ್ದುಲ್ ಬಶೀರ್, ಹೇಮಂತ್, ಆನಂದ್ ಮತ್ತು ಶಿವಕುಮಾರ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಪ್ರವೀಣ್, ರಾಘವೇಂದ್ರ, ಮಾಯಪ್ಪ, ಪ್ರಶಾಂತ್ ಭಾಗವಹಿಸಿದ್ದರು.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಮಗಳು ತಪ್ಪಿತಸ್ಥೆ ಎಂದು ಸಾಬೀತಾದರೆ ಅವಳನ್ನು ಗಲ್ಲಿಗೇರಿಸಿ : ಸಿಯಾ ಪೋಷಕರ ಆಕ್ರೋಶ ಮುಂಬೈ: ನನ್ನ ಮಗಳು ತಪ್ಪು…
ದರ್ಶನ್ ಪುತ್ರನಿದ್ದ ಕಾರು ಅಪಘಾತ : ವಿನೀಶ್ ವಾಹನ ಚಲಾಯಿಸಿಲ್ಲ: ವಿಜಯಲಕ್ಷ್ಮಿ ಸ್ಪಷ್ಟನೆ ಬೆಂಗಳೂರು: ನಟ ದರ್ಶನ್ ಅವರ ಪುತ್ರ…
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಧರ್ಮಸ್ಥಳ: ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ…
ಆಗುಂಬೆ ಘಾಟಿ : ಭಾರಿ ವಾಹನಗಳ ಸಂಚಾರ ನಿಷೇಧ ಉಡುಪಿ : ರಾಷ್ಟ್ರೀಯ ಹೆದ್ದಾರಿ 169ಎ ರ ತೀರ್ಥಹಳ್ಳಿ –…
ಉಡುಪಿ : ಗ್ಯಾರಂಟಿ ಯೋಜನೆಯ ಸೌಲಭ್ಯಗಳು ಅರ್ಹರಿಗೆ ತಲುಪಲು ಪರಿಣಾಮಕಾರಿ ಕೆಲಸ ಮಾಡಿ : ರಮೇಶ್ ಕಾಂಚನ್ ಉಡುಪಿ :…
ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…