ಕೋಟ: ಬ್ರಹ್ಮಾವರ ತಾಲೂಕಿನ ಕೋಟೆತಟ್ಟು ಬಾರಿಕೆರೆ ಕೊರಗ ಸಮುದಾಯದ ವ್ಯಕ್ತಿಯೊಬ್ಬರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿದ್ದಾಗ ಕೋಟ ಪೊಲೀಸರು ಭೇಟಿ ನೀಡಿ ಲಾಠಿ ಪ್ರಹಾರ ನಡೆಸಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ದೂರು ಹಾಗೂ ಪ್ರತಿದೂರುಗಳು ದಾಖಲಾಗಿವೆ.
ಜಯರಾಮ ನಾಯ್ಕ ಎಲ್ (27) ಇವರು ಕೋಟ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡಿಕೊಂಡಿದ್ದು, ಡಿ.27ರಂದು ಇವರನ್ನು ಠಾಣಾ ಮೀಸಲು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ಕರ್ತವ್ಯ ಮುಗಿಸಿ ವಿಶ್ರಾಂತಿಯಲ್ಲಿರುವ ಸಂದರ್ಭ ಠಾಣಾ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ ಪಿ ಅವರು ರಾತ್ರಿ 10.45ರ ಸುಮಾರಿಗೆ ಕರೆ ಮಾಡಿ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಎನ್ನುವವರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ಏರು ಧ್ವನಿಯಲ್ಲಿ ಡಿಜೆ ಸೌಂಡ್ ಹಾಕಿ, ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 30-50 ಜನ ಮಧ್ಯ ಸೇವನೆ ಮಾಡಿ ಕೇಕೆ ಹಾಕುತ್ತಾ, ನೃತ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ಧಾರೆ.
ಬಳಿಕ ಜಯರಾಮ ನಾಯ್ಕ ಅವರು ಇಲಾಖಾ ಜೀಪಿನಲ್ಲಿ ಪಿಎಸ್‌ಐ ಸಂತೋಷ್ ಅವರೊಂದಿಗೆ ರಾತ್ರಿ 11.10ರ ಸುಮಾರಿಗೆ ಸ್ಥಳಕ್ಕೆ ಹೋದಾಗ ರಾಜೇಶ್, ಸುದರ್ಶನ್, ಗಣೇಶ ಬಾರ್ಕೂರು, ಸಚಿನ್, ಗಿರೀಶ್, ನಾಗೇಂದ್ರ ಪುತ್ರನ್, ನಾಗರಾಜ ಪುತ್ರನ್ ಮತ್ತು ಇತರರು ಡಿಜೆ ಸೌಂಡ್ ಅನ್ನು ಜೋರಾಗಿ ಹಾಕಿಕೊಂಡು ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ಅವರು ಪಿಎಸ್ ಅವರಲ್ಲಿ ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು, ಡಿಜೆ ಸೌಂಡನ್ನು ಮೆಲ್ಲನೆ ಇಡುವಂತೆ 112 ಗೆ ಮಾಹಿತಿ ನೀಡಿದ್ದು, 112 ಸಿಬ್ಬಂದಿಯವರು ಸ್ಥಳಕ್ಕೆ ಬಂದಾಗ ಅವರಲ್ಲಿಯೂ ಸಹ ಆರೋಪಿತರು ಉಡಾಫೆಯಿಂದ ಮಾತನಾಡಿದ್ಧಾರೆ ಎಂದಿದ್ಧಾರೆ. ಈ ವೇಳೆ ಪಿಎಸ್‌ಐ ಅವರು ಡಿಜೆ ಸೌಂಡನ್ನು ಕಡಿಮೆ ಮಾಡುವಂತೆ ತಿಳಿಸಿದಾಗ, ಆರೋಪಿತರು ಗುಂಪು ಕಟ್ಟಿಕೊಂಡು, ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಪಿಎಸ್‌ಐ ಅವರ ಬಳಿ ಬಂದು, ನೀವು ಏನು ಮಾಡುತ್ತೀರಾ ನಾವು ಡಿಜೆ ಸೌಂಡನ್ನು ಬಂದ್ ಮಾಡುವುದಿಲ್ಲ ಎಂದು ಉಡಾಫೆಯಿಂದ ಮಾತನಾಡಿ, ಸಮವಸ್ತ್ರದಲ್ಲಿದ್ದ ಪಿಎಸ್‌ಐ ಅವರನ್ನು ದೂಡಿದ್ದಾರೆ. ಈ ವೇಳೆ ಜಯರಾಮ ನಾಯ್ಕ ಅವರು ಡಿಜೆ ಅನ್ನು ಬಂದ್ ಮಾಡಲು ಹೋದಾಗ ಆರೋಪಿತರು ಜಯರಾಮ ನಾಯ್ಕ ಅವರನ್ನು ಸುತ್ತುವರಿದು ದೊಣ್ಣೆಯಿಂದ ಕೈಗೆ ಹೊಡೆದು, ಸಮವಸ್ತ್ರವನ್ನು ಹರಿದು ಹಾಕಿ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ಧಾರೆ ಎಂದು ಪೊಲೀಸ್ ಸಿಬ್ಬಂದಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಜೇಶ್ ಎಂಬವರು ನೀಡಿದ ದೂರಿನಲ್ಲಿ, ಡಿ.27ರಂದು ರಾತ್ರಿ 10 ರ ಸುಮಾರಿಗೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂತೋಷ್ ಬಿ ಪಿ, ಹೆಚ್.ಸಿ ರಾಮಣ್ಣ, ಹೆಚ್.ಸಿ ಅಶೋಕ್ ಶೆಟ್ಟಿ, ಮಂಜುನಾಥ ಮತ್ತು ಇತರ ಸಿಬ್ಬಂದಿಯವರು ಮೆಹೆಂದಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನುಗ್ಗಿ, ಲಾಠಿಯಿಂದ ಗಣೇಶ ಬಾರ್ಕೂರು ಎಂಬರಿಗೆ ಹೊಡೆದು, ಹಲ್ಲೆ ನಡೆಸಿ ಜೀಪಿಗೆ ತುಂಬುತ್ತಿದ್ದಂತೆ ಹಿರಿಯ ಮಹಿಳೆಯರು ಮನವಿ ಮಾಡಿಕೊಂಡರೂ ಸ್ಪಂದಿಸದೇ, ಲಕ್ಷ್ಮೀ ಎಂಬರಿಗೆ ಲಾಠಿಯಿಂದ ಹಲ್ಲೆ ನಡೆಸಿ, ಸುದರ್ಶನ, ಗಿರೀಶ ಮತ್ತು ಸಚಿನ್ ಎಂಬುವವರನ್ನು ಜೀಪಿಗೆ ತುಂಬಿ ಠಾಣೆಗೆ ಕರೆದುಕೊಂಡು ಹೋಗಿರುವುದಲ್ಲದೇ, ಠಾಣೆಯಲ್ಲಿ ಎಲ್ಲರನ್ನೂ ವಿವಸ್ತ್ರಗೊಳಿಸಿ ಸೆಲ್ ಒಳಗೆ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಕೋಟ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈಸ್ಟರ್ ಪ್ರಯುಕ್ತ ಯಶವಂತಪುರ-ಮಡಗಾಂವ್ ಮಧ್ಯೆ ವಿಶೇಷ ರೈಲು ಉಡುಪಿ: ಮುಂಬರುವ ಗುಡ್‌ಫ್ರೈಡೇ ಹಾಗೂ ಈಸ್ಟರ್ ಪ್ರಯುಕ್ತ ಜನರ ವಿಶೇಷ ಒತ್ತಡವನ್ನು…
ಉಡುಪಿ: ಏ.1ರಂದು ಪಿಂಕ್ ಸೂಪರ್ ಮೂನ್ ವೀಕ್ಷಣೆಗೆ ಅವಕಾಶ ಉಡುಪಿ: ಆಕಾಶಕಾಯದಲ್ಲಿ ದಿನವೂ ಬೆಳ್ಳಗೆ ಗೋಚರಿಸುವ ಚಂದ್ರ ಏ.1ರಂದು ಸಂಜೆ…
ಜನಗಣತಿ: ಆನ್ ಲೈನ್ ನಲ್ಲಿ ಮನೆ ಲಿಂಕ್ ಮಾಡಲು ತಹಸೀಲ್ದಾರ್ ಕರೆ ಮಂಗಳೂರು: ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ…
ಮಂಗಳೂರು : 2025ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಮಂಗಳೂರು : ಕರ್ನಾಟಕ…
ಮಂಗಳೂರು: ಕಟ್ಟಡದ 12ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಂಗಳೂರು: ನಗರದ ಅತ್ತಾವರದಲ್ಲಿರುವ ಕಾಸ ಗ್ರ್ಯಾಂಡ್ ಕಟ್ಟಡದಲ್ಲಿ 12ನೇ ಮಹಡಿಯಿಂದ…
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…