ಉಡುಪಿ : ಕೋವಿಡ್ ಲಸಿಕೆ ಪಡೆದರೆ ಯಾವುದೇ ಕಾರಣಕ್ಕೂ ಆಯಸ್ಕಾಂತೀಯ ಶಕ್ತಿ ಬರುವುದಿಲ್ಲ : ಜಿಲ್ಲಾಧಿಕಾರಿ ಸ್ಪಷ್ಟನೆ -Vishwanews24
ಉಡುಪಿ: ಕೋವಿಡ್ ಲಸಿಕೆ ಪಡೆದರೆ ದೇಹಕ್ಕೆ ಅಯಸ್ಕಾಂತೀಯ ಶಕ್ತಿ ಬರುತ್ತದೆಯೇ?
ಉಡುಪಿಯ ಪಿಪಿಸಿ ಬಳಿಯ ವ್ಯಕ್ತಿಯೊಬ್ಬರ ಮೈಯಲ್ಲಿ ವಸ್ತುಗಳು ಅಂಟುತ್ತಿರುವ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ನಾನು ಕೆಲ ದಿನಗಳ ಹಿಂದೆ ಕೋವಿಡ್ ಲಸಿಕೆ ಪಡೆದಿದ್ದರು. ಲಸಿಕೆ ಪಡೆದವರಿಗೆ ಆಯಸ್ಕಾಂತದ ಶಕ್ತಿ ಬರುವ ಬಗ್ಗೆ ವಿಡಿಯೋ ನೋಡಿದ್ದ ಅವರು ತಾನೂ ಪ್ರಯೋಗ ಮಾಡಿದಾಗ ತನ್ನ ಮೈಯಲ್ಲಿ ಸೌಟು, ತಟ್ಟೆ, ಲೋಟಗಳು ಅಂಟಿದ್ದವು. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಜಿಲ್ಲಾಧಿಕಾರಿ ಸ್ಪಷ್ಟನೆ; ಆಯಸ್ಕಾಂತ ಶಕ್ತಿಯ ಬಗ್ಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಕೋವಿಡ್ ಲಸಿಕೆ ಪಡೆದರೆ ಯಾವುದೇ ಕಾರಣಕ್ಕೂ ಆಯಸ್ಕಾಂತೀಯ ಶಕ್ತಿ ಬರುವುದಿಲ್ಲ. ಆ ವ್ಯಕ್ತಿಯನ್ನು ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಅವರ ಹಣೆ, ಭುಜ, ಬೆನ್ನು, ಹೊಟ್ಟೆ ಮತ್ತು ಮೊಣಕೈ ಭಾಗದಲ್ಲಿ ಅವರಿಗೆ ಆಯಸ್ಕಾಂತೀಯ ಲಕ್ಷಣಗಳು ಇರುವ ಬಗ್ಗೆ ಕಂಡುಬಂದಿದೆ. ಅವರಿಗೆ ಇತರ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಲಸಿಕೆಯ ಕಾರಣದಿಂದ ಈ ತರಹದ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ ಎಂದು ಡಿಸಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…