Featured

ಉಡುಪಿ : ಕ್ರಿಸ್ಮಸ್‌ ಆಚರಣೆ ನಮ್ಮಲ್ಲಿ ಮಾನವೀಯತೆ ಜೀವಂತಗೊಳಿಸಲಿ : ಬಿಷಪ್‌ ಜೆರಾಲ್ಡ್‌ ಲೋಬೊ – Vishwanews24

ಸ್ವರ್ಗ ಭುವಿಗಳಿಗೆ ಮಹದಾನಂದವನ್ನು ತಂದ ಸುದಿನವೇ ಕ್ರಿಸ್‍ಮಸ್ ..

ಕ್ರಿಸ್ಮಸ್‌ ಆಚರಣೆ ನಮ್ಮಲ್ಲಿ ಮಾನವೀಯತೆ ಜೀವಂತಗೊಳಿಸಲಿ  ..

ಉಡುಪಿ ಧರ್ಮಾಧ್ಯಕ್ಷ ಬಿಷಪ್‌ ಜೆರಾಲ್ಡ್‌ ಐಸಾಕ್‌ ಲೋಬೊ..

ಉಡುಪಿ: ಕ್ರಿಸ್ತರ ಜನನದ ಕ್ರಿಸ್‍ಮಸ್ ಹಬ್ಬದ ಆಚರಣೆಯು ನಮ್ಮಲ್ಲಿ ಮಾನವೀಯತೆಯನ್ನು ಜೀವಂತಗೊಳಿಸಬೇಕು. ಮನುಷ್ಯನಿಗೆ ಮಾನವೀಯತೆಯು ಮರೀಚಿಕೆಯಾಗದೆ ಸ್ವಾತಂತ್ರ್ಯ, ಶಾಂತಿ, ಭಾವೈಕ್ಯತೆ, ಕ್ಷಮೆ, ಪ್ರೀತಿ, ಸಹನೆ, ಸಂಯಮ ಮತ್ತು ನೈತಿಕತೆಯನ್ನು ತನ್ನ ಉಸಿರಾಗಿಸಬೇಕಿದೆ ಎಂದು ಉಡುಪಿ ಕಥೊಲಿಕ್‌ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್‌ ಐಸಾಕ್‌ ಲೋಬೊ ಹೇಳಿದ್ದಾರೆ.

ಅವರು ತಮ್ಮ ಕ್ರಿಸ್ಮಸ್‌ ಸಂದೇಶದಲ್ಲಿ ಸ್ವರ್ಗ ಭುವಿಗಳಿಗೆ ಮಹದಾನಂದವನ್ನು ತಂದ ಸುದಿನವೇ ಕ್ರಿಸ್‍ಮಸ್. ದೇವಪುತ್ರ ಈ ಲೋಕದಲ್ಲಿ ಮುಗ್ಧ ಮಗುವಾಗಿ ಜನಿಸಿ, ಪಾಪವೊಂದನ್ನು ಬಿಟ್ಟು ಇನ್ನೆಲ್ಲದರಲ್ಲಿಯೂ ನಮ್ಮಂತೆಯೇ ಆಗಬಯಸಿದ ಯೇಸುಸ್ವಾಮಿ ಬಡವರಿಗೆ ಆಶಾಕಿರಣವಾಗಿ, ದುಃಖಿತರಿಗೆ ಸಾಂತ್ವನವಾಗಿ, ದೀನ ದಲಿತರ ಸಂಗಾತಿಯಾಗಿ, ನೊಂದವರ ಭರವಸೆಯಾಗಿ, ಬಹಿಷ್ಕೃತರ ಗೆಳೆಯನಾಗಿ ಬಂದರು.

ಕಳೆದೆರಡು ವರ್ಷಗಳಿಂದ ಇಡೀ ವಿಶ್ವವೇ ಕೊರೋನ ಸೋಂಕಿನ ಅಟ್ಟಹಾಸಕ್ಕೆ ನಲುಗಿಹೋಗಿದೆ. ಸಾವಿರಾರು ಜನರು ಈ ಸೋಂಕಿಗೆ ಒಳಗಾಗಿದ್ದಾರೆ. ಲಕ್ಷಾಂತರ ಕುಟುಂಬಗಳು ನಿರುದ್ಯೋಗ ಹಾಗೂ ಬಡತನಕ್ಕೆ ಬಲಿಯಾಗಿವೆ. ಬಸವಳಿದ ಈ ಲೋಕಕ್ಕೆ ಹೊಸ ಜೀವವನ್ನು ನೀಡುವ ಅಗತ್ಯವಿದೆ. ಕ್ರಿಸ್ತರ ಜನನದ ಕ್ರಿಸ್‍ಮಸ್ ಹಬ್ಬದ ಆಚರಣೆಯು ನಮ್ಮಲ್ಲಿ ಮಾನವೀಯತೆಯನ್ನು ಜೀವಂತಗೊಳಿಸಬೇಕು. ಮನುಷ್ಯನಿಗೆ ಮಾನವೀಯತೆಯು ಮರೀಚಿಕೆಯಾಗದೆ ಸ್ವಾತಂತ್ರ್ಯ, ಶಾಂತಿ, ಭಾವೈಕ್ಯತೆ, ಕ್ಷಮೆ, ಪ್ರೀತಿ, ಸಹನೆ, ಸಂಯಮ ಮತ್ತು ನೈತಿಕತೆಯನ್ನು ತನ್ನ ಉಸಿರಾಗಿಸಬೇಕಿದೆ.

ಕ್ರಿಸ್‍ಮಸ್ ಶಾಂತಿ-ಪ್ರೀತಿಯ ಉತ್ಸವ. ಈ ಉತ್ಸವವನ್ನು ಯೋಗ್ಯವಾಗಿ ಆಚರಿಸಲು ಶಕ್ತರಲ್ಲದ ಸಾವಿರಾರು ಜನರು ಮತ್ತು ಕುಟುಂಬಗಳು ನಮ್ಮ ನೆರೆಹೊರೆಯಲ್ಲಿವೆ. ಕ್ರಿಸ್‍ಮಸ್‍ನ ಭಾವವಾದ ಶಾಂತಿ, ಪ್ರೀತಿಯು ಹಂಚಿಕೊಳ್ಳುವುದರಲ್ಲಿ ಕಂಡುಬರಬೇಕು. ನಮ್ಮಲ್ಲಿ ಇರುವ ಸಂಪನ್ಮೂಲಗಳನ್ನು ಇಲ್ಲದವರೊಡನೆ ಕಿಂಚಿತ್ತಾದರೂ ಹಂಚಿಕೊಂಡರೆ ಕ್ರಿಸ್‍ಮಸ್‍ನ ಮೂಲ ಅರ್ಥವು ನಮಗೆ ಸ್ಪಷ್ಟವಾಗಬಹುದು. ‘ಶಾಂತಿ ದೇವನೊಲಿದ ಮನುಜರಿಗೆ’ ಎಂಬ ದೇವದೂತರ ಹಾಡು ನಮಗೆ ಅರ್ಥಪೂರ್ಣವಾಗಿ ಕೇಳಿಸಲಿ. ಈ ವರ್ಷದ ಕ್ರಿಸ್‍ಮಸ್ ನಮಗೆ ಸೋಂಕಿನ ಭೀತಿಯಿಂದ, ಅನಾರೋಗ್ಯದಿಂದ, ನಿರಾಶೆ-ದುಖಗಳಿಂದ ಬಿಡುಗಡೆಗೊಳಿಸಿ ಸ್ವರ್ಗದ ಶಾಂತಿ ಪ್ರೀತಿಯಿಂದ ನಮ್ಮನ್ನು ತುಂಬಲಿ. ಸಮಸ್ತ ಸಹೋದರ ಸಹೋದರಿಯರಿಗೆ ಕ್ರಿಸ್‍ಮಸ್ ಹಬ್ಬದ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇನೆ ಎಂದು ಹೇಳಿದ್ದಾರೆ.

 

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

3 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

4 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

4 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

4 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

4 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

4 days ago