ಉಡುಪಿ: ಕ್ರೇನ್ ಅಪಘಾತ ಪ್ರಕರಣ : ಚಾಲಕನಿಗೆ  1 ವರ್ಷ 5 ತಿಂಗಳು ಶಿಕ್ಷೆ ಹಾಗೂ ಮೂರು ಸಾವಿರ ರೂಪಾಯಿ ದಂಡ – Vishwanews24

ಉಡುಪಿ: ಅತಿವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಕ್ರೇನ್‌ ಚಲಾಯಿಸಿ ಬೈಕ್‌ ಹಾಗೂ ಟೆಂಪೋ ಟ್ರಾವೆಲರ್‌ಗೆ ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಮತ್ತೋರ್ವರಿಗೆ ಗಂಭೀರ ಗಾಯವಾದ ಪ್ರಕರಣಕ್ಕೆ ಸಂಬಂಧಿಸಿ ಕ್ರೇನ್‌ ಚಾಲಕ ಪಾಣೆಮಂಗಳೂರು ಗುಡ್ಡೆಯಂಗಡಿ ಹೌಸ್‌ನ ರೋಹಿತ್‌ನಿಗೆ ಉಡುಪಿಯ ಹೆಚ್ಚುವರಿ ಜೆ.ಎಂ.ಎಫ್‌.ಸಿ. ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಎಂ.ಎಸ್‌. ಅವರು 1 ವರ್ಷ 5 ತಿಂಗಳು ಸಾದಾ ಶಿಕ್ಷೆ ಹಾಗೂ ಮೂರು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

2015 ರಲ್ಲಿ ರೋಹಿತ್‌ ತನ್ನ ಕ್ರೇನ್‌ ಅನ್ನು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಚಲಾವಣೆ ಮಾಡುತ್ತಿದ್ದ ಸಂದರ್ಭದಲ್ಲಿ ಉಡುಪು ಸಮೀಪದ ಸಂತಕಟ್ಟೆ ಎಂಬಲ್ಲಿ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿ ಬೈಕ್‌ ಹಾಗೂ ಅದರ ಹಿಂದೆ ಇದ್ದ ಟೆಂಪೋ ಟ್ರಾವೆಲರ್‌ಗೆ ಡಿಕ್ಕಿಯಾಗಿತ್ತು.

ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರನಾಗಿದ್ದ ಪ್ರದೀಪ್‌ ಅಚಾರ್ಯ ಹಾಗೂ ಅವನ ತಂಗಿ ಪವಿತ್ರಾ ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ಪವಿತ್ರಾ ಅವರು ಆಸ್ಪತ್ರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಬೈಕಿನ ಹಿಂದಿನಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್‌ ತೀರ್ಥಹಳ್ಳಿಯ ಡಿ.ಕೆ. ಇಬ್ರಾಹಿಂ ಎಂಬವರಿಗೆ ಸೇರಿದ್ದಾಗಿದ್ದು ಅದಕ್ಕೂ ಹಾನಿಯಾಗಿತ್ತು. ಆಗಿನ ಸಿಐ ಶ್ರೀಕಾಂತ್‌ ಕೆ ಅವರು ಈ ಪ್ರಕರಣದ ತನಿಖೆಯನ್ನು ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಮೇಲಿನ ಅಪರಾಧ ಸಾಬೀತಾಗಿದೆ ಎಂದು ನಿರ್ಧರಿಸಿ ಶಿಕ್ಷೆ ವಿಧಿಸಿದೆ. ಸರಕಾರದ ಪರವಾಗಿ ಮಮ್ತಾಜ್‌ ವಾದ ಮಂಡಿಸಿದ್ದರು.

Vishwa News 24

Recent Posts

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

53 minutes ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

57 minutes ago

ಮಂಗಳೂರಿನಲ್ಲಿ ಹಜ್ ಭವನ, ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯ ಒದಗಿಸುವಂತೆ ಎಸ್‌ಡಿಪಿಐ ಆಗ್ರಹ – vishwanews24

ಮಂಗಳೂರಿನಲ್ಲಿ ಹಜ್ ಭವನ, ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯ ಒದಗಿಸುವಂತೆ ಎಸ್‌ಡಿಪಿಐ ಆಗ್ರಹ ಮಂಗಳೂರು: ಮಂಗಳೂರಿನಲ್ಲಿ ಹಜ್ ಭವನ…

1 hour ago

ಕಟಪಾಡಿ : ಶೀಘ್ರ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಮುಕ್ತ – vishwanews24

ಕಟಪಾಡಿ : ಶೀಘ್ರ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಮುಕ್ತ ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಕಾಮಗಾರಿ ವೇಗದಲ್ಲಿ ನಡೆಯುತಿದ್ದು,…

2 hours ago

ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ ; ಶೀಘ್ರವೇ ಅಧಿಕೃತ ಉದ್ಘಾಟನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ – vishwanews24

ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ ; ಶೀಘ್ರವೇ ಅಧಿಕೃತ ಉದ್ಘಾಟನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ…

2 hours ago

ಈಸ್ಟರ್ ಪ್ರಯುಕ್ತ ಯಶವಂತಪುರ-ಮಡಗಾಂವ್ ಮಧ್ಯೆ ವಿಶೇಷ ರೈಲು – vishwanews24

ಈಸ್ಟರ್ ಪ್ರಯುಕ್ತ ಯಶವಂತಪುರ-ಮಡಗಾಂವ್ ಮಧ್ಯೆ ವಿಶೇಷ ರೈಲು ಉಡುಪಿ: ಮುಂಬರುವ ಗುಡ್‌ಫ್ರೈಡೇ ಹಾಗೂ ಈಸ್ಟರ್ ಪ್ರಯುಕ್ತ ಜನರ ವಿಶೇಷ ಒತ್ತಡವನ್ನು…

2 hours ago