Featured

ಉಡುಪಿ : ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವಿವರ ಫಲಕ ಕಡ್ಡಾಯ: ಜಿಲ್ಲಾಧಿಕಾರಿ ಜಿ.ಜಗದೀಶ್ -Vishwanews24

ಉಡುಪಿ : ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವಿವರ ಫಲಕ ಕಡ್ಡಾಯ: ಜಿಲ್ಲಾಧಿಕಾರಿ ಜಿ.ಜಗದೀಶ್ -Vishwanews24

ಉಡುಪಿ : ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಕಾಯ್ದೆಯಡಿ ನೊಂದಾಯಿತವಾದ ಎಲ್ಲಾ ಆಸ್ಪತ್ರೆ, ಕ್ಲಿನಿಕ್‌ಗಳು, ತಮ್ಮಲ್ಲಿ ದೊರೆಯುವ ವಿವಿಧ ಚಿಕಿತ್ಸೆಗಳು, ಚಿಕಿತ್ಸೆಯ ದರಗಳು, ಚಿಕಿತ್ಸಾ ವಿಧಾನಗಳು (ಅಲೋಪತಿ, ಆಯುರ್ವೇದ ಇತ್ಯಾದಿ), ವೈದ್ಯರ ವಿವರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಇದು ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಮತ್ತು ಅವರ ಸಂಬAಧಿಕರಿಗೆ ಸ್ಪಷ್ಟವಾಗಿ ಗೋಚರಿಸುವಂತಿರಬೇಕು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಣಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆ.ಪಿ.ಎಂ.ಇ ಯಡಿ ನೊಂದಾಯಿತ ಆಸ್ಪತ್ರೆಗಳು, ತಮ್ಮ ಅನುಮತಿಯ ನವೀಕರಣಕ್ಕೆ ಬರುವ ಸಂದರ್ಭದಲ್ಲಿ, ಕಾಯ್ದೆಯಡಿಯಲ್ಲಿನ ಎಲ್ಲಾ ಷರತ್ತುಗಳನ್ನು ಪೂರೈಸಿರುವ ಕುರಿತು ಪರಿಶೀಲನೆ ನಡೆಸಿ, ಅನುಮತಿಯನ್ನು ನವೀಕರಿಸಬೇಕು. ಜಿಲ್ಲೆಯಲ್ಲಿ ಯಾವುದೇ ನಕಲಿ ವೈದ್ಯರು ಕ್ಲಿನಿಕ್‌ಗಳನ್ನು ತೆರೆದು ಚಿಕಿತ್ಸೆ ನೀಡದಂತೆ ಪರಿಶೀಲಿಸಿ, ನವೀಕರಣ ಮಾಡಿಸದ ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡಿ, ಅವರು ಹೊಸದಾಗಿ ಪರವಾನಿಗೆಗೆ ಅರ್ಜಿ ಸಲ್ಲಿಸಿದ್ದಲ್ಲಿ, ಪರವಾನಗಿ ನೀಡಲು ಕ್ರಮ ಕೈಗೊಳ್ಳಿ. ಖಾಸಗಿ ಆಸ್ಪತ್ರೆಗಳು ಕೆ.ಪಿ.ಎಂ.ಇ ಕಾಯ್ದೆಯ ಷರತ್ತುಗಳನ್ನು ಪಾಲಿಸುತ್ತಿರುವ ಕುರಿತಂತೆ, ಅನಿರೀಕ್ಷಿತ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದ ಕುರಿತಂತೆ, ಅನುಪಾತ ಪ್ರಮಾಣ 750 ಕ್ಕೂ ಕಡಿಮೆ ಇರುವ ಗ್ರಾಮ ಪಂಚಾಯತ್‌ಗಳನ್ನು ಪಟ್ಟಿ ಮಾಡಿ. ಈ ಗ್ರಾಮಗಳಲ್ಲಿ ಅನುಪಾತದ ವ್ಯತ್ಯಾಸಕ್ಕೆ ಸೂಕ್ತ ಕಾರಣಗಳ ಕುರಿತಂತೆ ಪರಿಶೀಲಿಸಿ, ಸ್ಕಾö್ಯನಿಂಗ್ ಸೆಂಟರ್‌ಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ, ಭ್ರೂಣ ಲಿಂಗ ಪತ್ತೆ ಕುರಿತು ಪರಿಶೀಲನೆ ನಡೆಸಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀರಾಮರಾವ್, ಆರೋಗ್ಯ ಇಲಾಖೆಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Vishwa News 24

Recent Posts

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ – ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ – vishwanews24

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ - ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ ಬೆಂಗಳೂರು:…

1 minute ago

ಉಡುಪಿ:  ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ! vishwanews24

ಉಡುಪಿ:  ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ! ಉಡುಪಿ: ಮಾಜಿ ಸಚಿವ ಮತ್ತು ಬಿಜೆಪಿ…

7 minutes ago

ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ –  ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ – vishwanews24

ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ -  ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ ಮಂಗಳೂರು: ಬೈಕಂಪಾಡಿ…

51 minutes ago

ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ – vishwanews24

ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರು ದುರ್ಮರಣ ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ…

2 hours ago

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

22 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

22 hours ago