ಉಡುಪಿ : ಖಾಸಗಿ ಆಸ್ಪತ್ರೆಯ ವೈದ್ಯರ ನಕಲಿ ಸಹಿ ಬಳಸಿ, ನಕಲಿ ಬಿಲ್, ಡಿಸ್ಚಾರ್ಚ್ ಸಮ್ಮರಿಯನ್ನು ಸೃಷ್ಟಿಸಿ ವಿದೇಶದ ಇನ್ಸೂ ಕಂಪನಿಗೆ ಸಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ.
ಆರೋಪಿಯಾದ ಜಹೀನಾಬ್ ಮುಜಾಫರ್ ಇವರು ಸಿ.ಎಸ್.ಐ ಲಾಂಬೋರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ 2019, ಆಗಸ್ಟ್ 03 ರಂದು ಹೊರರೋಗಿಯಾಗಿ ಚಿಕಿತ್ಸೆಯನ್ನು ಪಡೆದಿದ್ದು ನಂತರ ಯಾವುದೇ ಚಿಕಿತ್ಸೆಯನ್ನು ಪಡೆದಿರುವುದಿಲ್ಲ. 2ನೇ ಆರೋಪಿತ ಮುಜಾಫರ್ ಅಲಿ ಮೊಹಮ್ಮದ್ ಶರೀಫ್, 3ನೇ ಆರೋಪಿ ಲುಭ್ನಾ ಬಾನು ಮತ್ತು 4ನೇ ಆರೋಪಿ ಪುರ್ಕಾನ್ ಮುಜಾಫರ್ ರವರು ಒಟ್ಟಿಗೆ ಸೇರಿಕೊಂಡು ಡಾಕ್ಟರ್ ರವರ ನಕಲಿ ಸಹಿಯನ್ನು ಬಳಸಿ ನಕಲು ಬಿಲ್ಲುಗಳು ಮತ್ತು ಡಿಸ್ಚಾರ್ಚ್ ಸಮ್ಮರಿಯನ್ನು ವಿದೇಶದ ಕಂಪನಿ Bhoopa Arabia for Co-operative Insurance Company ಗೆ ಸಲ್ಲಿಸಿದ್ದು, ಇನ್ಸುರೆನ್ಸ್ ಕಂಪನಿಯವರು ಬಿಲ್ಲುಗಳ ಮತ್ತು ಡಿಸ್ಚಾರ್ಚ್ ಸಮ್ಮರಿಗಳ ನೈಜತೆಯನ್ನು ತಿಳಿಯಲು ಆಸ್ಪತ್ರೆಗೆ ಕಳುಹಿಸಿದ್ದು, ಆರೋಪಿಗಳು ಮೋಸ ಮಾಡುವ ಉದ್ದೇಶದಿಂದ ಫೋರ್ಜರಿಯನ್ನು ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಈ ಕುರಿತು ಆಸ್ಪತ್ರೆಯ ಆಡಳಿತ ಅಧಿಕಾರಿ ದೀನಾ ಪ್ರಭಾವತಿ ಇವರು ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…