Featured

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ -vishwanews24

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ

ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ ಹಾಗೂ ಹೆಚ್ಚುವರಿ ರಶ್‌ ತಡೆಯಲು 16 ವಿಶೇಷ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೇ ನಿರ್ಧರಿಸಿದೆ. ಆ. 15ರಂದು ವಿಶೇಷ ರೈಲು ಬುಕ್ಕಿಂಗ್‌ ಸೇವೆ ಶುರುವಾಗಿದೆ.

ರೈಲು ಸಂಖ್ಯೆ 09013 ಮುಂಬಯಿ ಸೆಂಟ್ರಲ್‌-ತೋಕೂರು ಸಾಪ್ತಾಹಿಕ ವಿಶೇಷ ರೈಲು ಸೆ. 8ರಂದು ಮುಂಬಯಿಂದ ಹೊರಡಲಿದೆ. ರೈಲು ಸಂಖ್ಯೆ 09014 ತೋಕೂರು-ಮುಂಬಯಿ ಸೆಂಟ್ರಲ್‌ ಸಾಪ್ತಾಹಿಕ ವಿಶೇಷ ರೈಲು ಸೆ. 9ರಂದು ತೋಕೂರು ರೈಲು ನಿಲ್ದಾಣದಿಂದ ಹೊರಟು ಮಾರನೇ ದಿನ ಮುಂಬಯಿ ತಲುಪಲಿದೆ.

ಉಳಿದಂತೆ 15 ವಿಶೇಷ ರೈಲುಗಳು ಮುಂಬಯಿ ಸೆಂಟ್ರಲ್‌-ಸಾವಂತವಾಡಿ ರೋಡ್‌, ಬಾಂದ್ರಾ -ರತ್ನಗಿರಿ, ವಡೋದರ ಜಂಕ್ಷನ್‌-ರತ್ನಗಿರಿ, ವಿಶ್ವಾಮಿತ್ರಿ-ರತ್ನಗಿರಿ, ಉಧ್ನಾ ಜಂಕ್ಷನ್‌-ರತ್ನಗಿರಿ, ವಲ್ಸಾಡ್‌-ರತ್ನಗಿರಿ ನಡುವೆ ಸಂಚರಿಸಲಿದೆ.

ರೈಲುಗಳ ನಿಲ್ದಾಣಗಳ ವಿವರ ಹಾಗೂ ಆಗಮನ-ನಿರ್ಗಮನ ಸಮಯವು www.enquiry.indianrail.gov.in. ನಲ್ಲಿ ಲಭ್ಯವಿದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.

ಹೆಚ್ಚುವರಿ ಬೋಗಿ ಸೇರ್ಪಡೆ

ಬೆಂಗಳೂರು-ಕಾರವಾರ ಮಧ್ಯೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲಿಗೆ (16595 / 16596) ಒಂದು ತಿಂಗಳ ಅವಧಿಗೆ 5 ಹೆಚ್ಚುವರಿ ಬೋಗಿ ಜೋಡಣೆಯಾಗಲಿದೆ. ಪ್ರಸ್ತುತ 14 ಬೋಗಿಯೊಂದಿಗೆ ಸಂಚಾರ ಮಾಡುತ್ತಿರುವ ಪಂಚಗಂಗಾ ಎಕ್ಸ್‌ ಪ್ರಸ್‌ ರೈಲು ಸೆ. 2ರಿಂದ ಅ. 1ರ ವರೆಗೆ 2 ಎಸಿ, 1 ಸ್ಲಿàಪರ್‌ ಹಾಗೂ 2 ಜನರಲ್‌ ಹೆಚ್ಚುವರಿ ಬೋಗಿಯೊಂದಿಗೆ ಸಂಚಾರ ಮಾಡಲಿದೆ. ಇದು ಹಬ್ಬದ ದಿನಗಳಲ್ಲಿ ಕರಾವಳಿಗೆ ಬಂದು ಹೋಗುವವರಿಗೆ ಹೆಚ್ಚು ಅನುಕೂಲವಾಗಲಿದೆ.

Vishwa News 24

Recent Posts

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ -vishwanews24

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…

14 minutes ago

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ -vishwanews24

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…

19 minutes ago

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

1 day ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

1 day ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago