Featured

ಉಡುಪಿ : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ – ಚಾಲಕ ಅಪಾಯದಿಂದ ಪಾರು – Vishwanews24

ಉಡುಪಿ : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ :  ಸಂಪೂರ್ಣ ಸುಟ್ಟು ಭಸ್ಮವಾದ ಕಾರು  – ಚಾಲಕ ಅಪಾಯದಿಂದ ಪಾರು

ಉಡುಪಿ : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಇಂದ್ರಾಳಿಯಲ್ಲಿ ಇಂದು ನಸುಕಿನ ವೇಳೆ 1:30ರ ಸುಮಾರಿಗೆ ನಡೆದಿದೆ.

ಕಾರು ಕಿನ್ನಿ ಮುಲ್ಕಿಯ ಮುರಳಿಧರ್ ಎಂಬವರಿಗೆ ಸೇರಿದ್ದಾಗಿದ್ದು, ಅವರು ನಿನ್ನೆ ರಾತ್ರಿ ಕೋಲ ಮುಗಿಸಿ ತನ್ನ ರಿಟ್ಸ್ ಕಾರಿನಲ್ಲಿ ಮಣಿಪಾಲ ಕಡೆಯಿಂದ ಉಡುಪಿ ಕಡೆ ಬರುತ್ತಿದ್ದರು. ಈ ವೇಳೆ ಕಾರಿನ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನಿಂದ ಇಳಿದ ಮುರಳಿಧರ್ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದರು. ಆದರೆ ಬೆಂಕಿಯು ಇಡೀ ಕಾರಿಗೆ ವಿಸ್ತರಿಸಿದ್ದು, ಕೂಡಲೇ ಇವರು ಕಾರಿನಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಬೆಂಕಿಯಿಂದ ಇಡೀ ಕಾರು ಹೊತ್ತಿ ಭಸ್ಮ ವಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಇದರಿಂದ ಲಕ್ಷಾಂತರ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

 

Vishwa News 24

Recent Posts

ಉಡುಪಿ : ಮಲಬಾರ್ ಗೋಲ್ಡ್‌ನಲ್ಲಿ ‘ನಾಯ್ರಾ’ ನೂತನ ಸಂಗ್ರಹ ಅನಾವರಣ -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಲ್ಲಿ ‘ನಾಯ್ರಾ’ ನೂತನ ಸಂಗ್ರಹ ಅನಾವರಣ ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ…

1 hour ago

ಪಡುಬಿದ್ರಿ : ವ್ಯಕ್ತಿ ನಾಪತ್ತೆ -vishwanews24

 ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ : ಕಾಪು ತಾಲೂಕು ಪಡುಬಿದ್ರಿ ಬೇಂಗ್ರೆ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸಮಾಡಿಕೊಂಡಿದ್ದ ಕೂಲಿ…

1 hour ago

ಕಾರ್ಕಳದಲ್ಲಿ ಕಾಂಗ್ರೆಸ್ ಪ್ರತಿಭಟನೆ: ಸುನಿಲ್ ಕುಮಾರ್ ರಾಜೀನಾಮೆಗೆ ಆಗ್ರಹ ; ಕಚೇರಿಗೆ ಮುತ್ತಿಗೆ ಯತ್ನ  -vishwanews24

ಕಾರ್ಕಳದಲ್ಲಿ ಕಾಂಗ್ರೆಸ್ ಪ್ರತಿಭಟನೆ: ಸುನಿಲ್ ಕುಮಾರ್ ರಾಜೀನಾಮೆಗೆ ಆಗ್ರಹ ; ಕಚೇರಿಗೆ ಮುತ್ತಿಗೆ ಯತ್ನ  ಕಾರ್ಕಳ: ಸಚಿವ ನಾಗೇಂದ್ರ ರಾಜೀನಾಮೆ…

2 hours ago

ಅಯೋಧ್ಯೆ ರಾಮಮಂದಿರದ ಸಿಇಓ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರಾ ನೇಮಕ -vishwanews24

ಅಯೋಧ್ಯೆ ರಾಮಮಂದಿರದ ಸಿಇಓ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರಾ ನೇಮಕ ಲಕ್ನೋ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ…

2 hours ago

ರಾಹುಲ್ ಗಾಂಧಿಯನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಸಂಚು ಮಾಡಿದೆ : ಸಿದ್ದರಾಮಯ್ಯ -vishwanews24

ರಾಹುಲ್ ಗಾಂಧಿಯನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಸಂಚು ಮಾಡಿದೆ : ಸಿದ್ದರಾಮಯ್ಯ ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ…

2 hours ago

ಕುಂದಾಪುರ: ಗಂಗೊಳ್ಳಿಯಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆ; 6 ಮೀನುಗಾರರ ರಕ್ಷಣೆ -vishwanews24

ಕುಂದಾಪುರ: ಗಂಗೊಳ್ಳಿಯಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆ; 6 ಮೀನುಗಾರರ ರಕ್ಷಣೆ ಕುಂದಾಪುರ : ಮೀನುಗಾರಿಕೆಗೆ ತೆರಳುತ್ತಿದ್ದ ಮೀನುಗಾರಿಕಾ ಬೋಟ್‌ವೊಂದು…

3 hours ago