Featured

ಉಡುಪಿ: ಚಿನ್ನ ಖರೀದಿ ಸಂಸ್ಥೆಗೆ ಆರು‌ ಲಕ್ಷ ರೂಪಾಯಿ ವಂಚನೆ – vishwanews24

ಉಡುಪಿ: ಸಾಲದ ಅಡಮಾನ ಚಿನ್ನ ಖರೀದಿ ಸಂಸ್ಥೆಗೆ ವಂಚಿಸಿದ ಆರೋಪಿಗಳು

RTGS ಮೂಲಕ 6 ಲಕ್ಷ ಮುಂಗಡ ಹಣ ವರ್ಗಾಹಿಸಿ ವಂಚನೆ

ಉಡುಪಿ: ಚಿನ್ನ ಖರೀದಿ ಸಂಸ್ಥೆಗೆ ಆರು‌ ಲಕ್ಷ ರೂಪಾಯಿ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ.

ದೂರುದಾರ ಕಾರ್ತಿಕ (32), ಮಂಡ್ಯ ಜಿಲ್ಲೆ ಇವರು ಮೈಸೂರಿನಲ್ಲಿ ಧನ ಗಣಪತಿ ಗೋಲ್ಟ್‌ & ಡೈಮಂಡ್‌ ಪೈನಾನ್ಸ್‌ ನಲ್ಲಿ ಫೀಲ್ಡ್‌ ಆಫೀಸರ್‌ ಆಗಿ ಕೆಲಸ ಮಾಡಿಕೊಂಡಿದ್ದಾರೆ.

ಕೆಲಸ ಮಾಡುವ ಸಂಸ್ಥೆಯು ಸಾರ್ವಜನಿಕರ ಚಿನ್ನದ ಸಾಲಗಳನ್ನು ಪಡೆದು ಚಿನ್ನ ಬಿಡಿಸಿ ಕೊಳ್ಳಲು ಸಾದ್ಯವಾಗದ ಚಿನ್ನವನ್ನು ಗ್ರಾಹಕರ ಪರವಾಗಿ ಬಿಡಿಸಿಕೊಂಡು ನೆರವಾಗಿ ಚಿನ್ನವನ್ನು ಖರೀದಿ ಮಾಡುವ ವ್ಯವಹಾರವನ್ನು ಮಾಡುತ್ತದೆ. ಜನವರಿ 2 ರಂದು ಕಂಪನಿಯ ಮ್ಯಾನೇಜರ್‌ ಅಭಿ ಮತ್ತು ಕಂಪನಿಯಲ್ಲಿ ಪೀಲ್ಡ್‌ ಆಫೀಸರ್‌ ಕೆಲಸ ಮಾಡಿ ಕೊಂಡಿರುವ ಕವನ್ ಎಂಬುವವರಲ್ಲಿ ಉಡುಪಿಯಿಂದ ಅಭ್ಬಾಸ್‌ ಎಂಬುವವರು ಕಛೇರಿಗೆ ಪೋನ್‌ ಮಾಡಿ ಉಡುಪಿಯಲ್ಲಿ ಸೊಸೈಟಿಯಲ್ಲಿ ಚಿನ್ನವನ್ನು ಅಡವಿಟ್ಟಿರುತ್ತಾರೆ. ಉಡುಪಿಗೆ ಹೋಗಿ ಚಿನ್ನವನ್ನು ಸೊಸೈಟಿಯಿಂದ ಬಿಡಿಸಿಕೊಂಡು ಬರುವಂತೆ ಕಳುಹಿಸಿರುತ್ತಾರೆ.

ಕಳುಹಿಸಿದ ನಂತರ ದೂರುದಾರರು ಅಬ್ಬಾಸ್‌ ಎಂಬುವವರನ್ನು 03/01/2025 ರಂದು ಕಾಪು ತಾಲೂಕು ಉಚ್ಚಿಲ ಬಳಿ ಮಧ್ಯಾಹ್ನ 02:00 ಗಂಟೆಗೆ ಭೇಟಿ ಮಾಡಿ ಚಿನ್ನವನ್ನು ಸೊಸೈಟಿಯಿಂದ ಬಿಡಿಸುವ ಬಗ್ಗೆ ಮಾತನಾಡಿ ಕೊಂಡು ಬೆಳಪು ವ್ಯವಸಾಯ ಸಹಕಾರಿ ಸಂಘ, ಉಡುಪಿಯ ಗುರುನಿತ್ಯಾನಂದ ಕೋ ಆಪರೇಟಿವ್‌ ಸೊಸೈಟಿ ಲಿಮಿಡೆಟ್‌ ಮತ್ತು ಕುಂದಾಪುರ ವ್ಯವಸಾಯ ಸಹಕಾರಿ ಸಂಘ ಹಾಗೂ ಮೂರ್ತೆದಾರರ ಸಹಕಾರಿ ಸಂಘ ಈ ಬ್ಯಾಂಕ್‌ ಗಳಲ್ಲಿ ಚಿನ್ನ ಅಡವಿಟ್ಟಿರುವ ಬಗ್ಗೆ ಖಚಿತಪಡಿಸಿಕೊಂಡು ಅಬ್ಬಾಸ್‌ ನ ಕುಂದಾಪುರ ಫೆಡರಲ್‌ ಬ್ಯಾಂಕ್‌ ನ ಖಾತೆ ಗೆ RTGS ಮೂಲಕ ಮುಂಗಡ ಹಣವನ್ನು 6 ಲಕ್ಷ ರೂಪಾಯಿ ಹಣವನ್ನು ವರ್ಗಾಹಿಸಿರುವುದಾಗಿದೆ. ನಂತರ ಜನವರಿ 4 ರಂದು ದೂರುದಾರ ಕಾರ್ತಿಕ್ ಅವರು ಬೆಳಪು ವ್ಯವಸಾಯ ಸಹಕಾರಿ ಸಂಘದಲ್ಲಿ ಆರೋಪಿತರಾದ ಮೊಹಮ್ಮದ್‌ ಹನೀಫ್‌ ಮತ್ತು ಹೆಸರು ಗೊತ್ತಿಲ್ಲದ ವ್ಯಕ್ತಿ ಹಾಜರಾತಿಯಲ್ಲಿ 44 ಗ್ರಾಮ್‌ ಮತ್ತು ಉಡುಪಿಯ ಗುರುನಿತ್ಯಾನಂದ ಕೋ ಆಪರೇಟಿವ್‌ ಸೊಸೈಟಿ ಲಿಮಿಡೆಟ್‌ ನಲ್ಲಿ ಆರೋಪಿತರಾದ ಮೊಹಮ್ಮದ್‌ ಯಾಸೀನ್‌ ಹಾಜರಾತಿಯಲ್ಲಿ 16 ಗ್ರಾಮ್‌ ಹಾಗೂ ಮೂರ್ತೆದಾರರ ಸಹಕಾರಿ ಸಂಘ ಸಂತೆಕಟ್ಟೆ ಯಲ್ಲಿ ಆರೋಪಿತರಾದ ಮೊಹಮ್ಮದ್‌ ಯಾಸೀನ್‌ ಹಾಜರಾತಿಯಲ್ಲಿ 32 ಗ್ರಾಮ್‌ ಚಿನ್ನವನ್ನು ಬಿಡಿಸಿಕೊಂಡಿರುದ್ದಾರೆ.

ನಂತರ ಆರೋಪಿಯು ಕುಂದಾಪುರದಲ್ಲಿಯೂ ಚಿನ್ನ ಬಿಡಿಸಲು ಹೋಗುವ ಎಂದು ದೂರುದಾರರನ್ನು ಉಡುಪಿ ಬಸ್‌ ನಿಲ್ದಾಣಕ್ಕೆ ಬರಲು ಹೇಳಿ ದೂರುದಾರ ಕಾರ್ತಿಕ್ ಅವರನ್ನು ಕಾಯಿಸಿ ನಂತರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಾರ್ತಿಕ್ ತಾನು ಬಿಡಿಸಿದ ಚಿನ್ನದ ಅಸಲಿಯತ್ತು ಬಗ್ಗೆ ಬ್ಯಾಂಕ್‌ ಸಿಬ್ಬಂದಿಯವರಲ್ಲಿ ವಿಚಾರಿಸಿರುತ್ತಾರೆ.ಆದರೂ ಈ ಬಗ್ಗೆ ಸಂಶಯಗೊಂಡು ತಾನು ಬಿಡಿಸಿದ ಚಿನ್ನದ ಅಸಲಿಯತ್ತು ಬಗ್ಗೆ ತಿಳಿದುಕೊಳ್ಳಲು ಉಡುಪಿಯ ಚಿನ್ನ ಟೇಸ್ಟಿಂಗ್‌ ಗೆ ಮಧ್ಯಾಹ್ನ 01:15 ಗಂಟೆಗೆ ಅಂಗಡಿಗೆ ಹೋಗಿ ಪರೀಕ್ಷಿಸಿದ್ದಲ್ಲಿ ತಾನು ಬ್ಯಾಂಕ್‌ ನಿಂದ ಬಿಡಿಸಿದ ಚಿನ್ನದ ಆಭರಣಗಳು ನಕಲಿ ಎಂದು ತಿಳಿದು ಬಂದಿರುತ್ತದೆ. ಆರೋಪಿಗಳು ಸೊಸೈಟಿಯಲ್ಲಿ ಚಿನ್ನವನ್ನು ಅಡವಿರಿಸಿರುವುದಾಗಿ ಹೇಳಿ ಚಿನ್ನ ಬಿಡಿಸಲು ಹಣ ವಿಲ್ಲ ಎಂದು ಹೇಳಿ ದೂರುದಾರರಿಗೆ ನಕಲಿ ಚಿನ್ನ ನೀಡಿ ಪಿರ್ಯಾದಿದಾರರ ಸಂಸ್ಥೆಗೆ 6 ಲಕ್ಷ ರೂಪಾಯಿ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 5/2025, ಕಲಂ: 318(4), 318(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Vishwa News 24

Recent Posts

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

16 hours ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

16 hours ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

16 hours ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

19 hours ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

20 hours ago

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ – vishwanews24

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…

20 hours ago