Featured

ಉಡುಪಿ :ಜನರ ಮನಸ್ಸನ್ನು ಬೇರೆ ಕಡೆ ಕೇಂದ್ರಿಕರಿಸಲು ಬಿಜೆಪಿಯವರು ಮಾಡುವ ಷಡ್ಯಂತ್ರಗಳಲ್ಲಿ ಹಿಜಾಬ್‌ ಕೂಡ ಒಂದು : ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ ಸಾಲ್ಯಾನ್‌ ಆಕ್ರೋಶ – Vishwanews24

ಉಡುಪಿ : ಜನರ ಮನಸ್ಸನ್ನು ಬೇರೆ ಕಡೆ ಕೇಂದ್ರಿಕರಿಸಲು ಬಿಜೆಪಿಯವರು ಮಾಡುವ ಷಡ್ಯಂತ್ರಗಳಲ್ಲಿ ಹಿಜಾಬ್‌ ಕೂಡ ಅದೇ ಪುಸ್ತಕದ ಒಂದು ಕಥೆ : ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ ಸಾಲ್ಯಾನ್‌ ಆಕ್ರೋಶ – Vishwanews24

ಉಡುಪಿ: ಹಿಜಾಬ್‌ ವಿಚಾರ ಬಿಜೆಪಿಗರ ವ್ಯವಸ್ಥಿತ ಹುನ್ನಾರವಾಗಿದೆ ಎಂದು ಕಾಪು ಯುವ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ ಸಾಲ್ಯಾನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯೋಜನೆಗಳು ಸಂಪೂರ್ಣ ವಿಫಲವಾದ ಜನರ ಮನಸ್ಸನ್ನು ಬೇರೆ ಕಡೆ ಕೇಂದ್ರಿಕರಿಸಲು ಬಿಜೆಪಿಯವರು ಮಾಡುವ ಷಡ್ಯಂತ್ರಗಳ ಹಲವಾರು ಆಗಿದ್ದು ಹಿಜಾಬ್‌ ಕೂಡ ಅದೇ ಪುಸ್ತಕದ ಒಂದು ಕಥೆಯಾಗಿದೆ. ಇತ್ತೀಚೆಗೆ ನಾರಾಯಣ ಗುರುಗಳ ಟ್ಯಾಬ್ಲೋ ವಿಚಾರವನ್ನು ಮರೆಮಾಚಲು ಹಿಜಾಬ್‌ ವಿಚಾರ ಮುಂದಿಟ್ಟು ಅವರ ರಾಜಕೀಯದ ದಾಳವಾಗಿ ಉಪಯೋಗಿಸುವುದು ನಿಜಕ್ಕೂ ಖಂಡನೀಯ. ವಿದ್ಯಾರ್ಥಿಗಳ ಜೀವನದಲ್ಲಿ ಓದಿನ ಬದಲು ಧರ್ಮದ ಅಮಲನ್ನು ಏರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ವ್ಯವಸ್ಥಿತ ಅಜೇಂಡಾ ಆಗಿದೆ. ಅಲ್ಲದೆ ವಿನಾಕಾರಣ ಕಾಂಗ್ರೆಸ್‌ ನಾಯಕರ ಮೇಲೆ ಆರೋಪ ಮಾಡುವ ಬಿಜೆಪಿಗರ ವರ್ತನೆ ಖಂಡನೀಯವಾಗಿದೆ.

ಕೇಂದ್ರ ಸರಕಾರದ ವಿಫಲ ಬಜೆಟ್‌ ನ ಮರೆಮಾಚಲು ಕೂಡ ಹಿಜಾಬ್‌ ವಿಚಾರವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತದೆ. ಸದಾ ಯುವಜನರ ಕುರಿತು ಮಾತನಾಡುವ ಮೋದಿಯವರ ಯುವ ಜನರ ಕಾಳಜಿ ಬಜೆಟ್‌ ಎಲ್ಲಿಯೂ ಕಾಣಿಸುತ್ತಿಲ್ಲ ಭಾಷಣಗಳಿಗೆ ಸೀಮಿತವಾಗಿರುವ ಮೋದಿಯವರ ಮಾತು ಬಿಜೆಪಿಗರು ಮನಸ್ಸನ್ನು ಬೇರೆ ಕಡೆ ವಿಕೇಂದ್ರಿಕರಿಸಲು ಹಿಜಾಬ್‌ ನಂತಹ ಅನಗತ್ಯ ವಿಷಯಗಳನ್ನು ಹುಟ್ಟು ಹಾಕಿ ಎತ್ತಿ ಹಿಡಿಯೋದು ಸರ್ವೆ ಸಾಮಾನ್ಯವಾಗಿದೆ. ಬಿಜೆಪಿಗರ ಇಂತಹ ಸಮಯಾನುಸಾರದ ಕಥೆಗಳನ್ನು ನಂಬಲು ಜನ ಇಲ್ಲಿ ಯಾರೂ ಮೂರ್ಖರಿಲ್ಲ. ವಿದ್ಯಾರ್ಥಿಗಳನ್ನು ಮುಂದೆ ಇಟ್ಟು ರಾಜಕೀಯವನ್ನು ಮಾಡುವುದನ್ನು ಬಿಟ್ಟು ನೀವೆ ಹುಟ್ಟಿಸಿದ ಹಿಜಾಬ್‌ ವಿಚಾರವನ್ನು ಸರಿಪಡಿಸಿ ಇಲ್ಲ ನಿಮ್ಮ ಸರಕಾರ ಕೊಟ್ಟಿರೋ ಆಶ್ವಾಸನೆಗೆಳನ್ನು ಈಡೇರಿಸಲಾಗದೆ ಬಿಜೆಪಿ ನಾಯಕರೂ ಕೂಡ ಹಿಜಾಬ್‌ ಹಾಕಿಕೊಂಡು ಓಡಾಡುವ ಸನ್ನಿವೇಶ ಬಂದೀತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

4 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

4 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

4 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

4 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

4 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

4 days ago