Featured

ಉಡುಪಿ:  ಜಾಗ ಖರೀದಿಗೆ  ಹಣ ಪಡೆದು ಕರಾರು ಮಾಡಿ, ನೋಂದಣಿ ಮಾಡಿಸದೆ ವಂಚನೆ ; ಪ್ರಕರಣ ದಾಖಲು – vishwanews24

ಉಡುಪಿ:  ಜಾಗ ಖರೀದಿಗೆ  ಹಣ ಪಡೆದು ಕರಾರು ಮಾಡಿ, ನೋಂದಣಿ ಮಾಡಿಸದೆ ವಂಚನೆ ; ಪ್ರಕರಣ ದಾಖಲು

ಉಡುಪಿ: ಜಾಗದ ಖರೀದಿಗೆ ಮುಂಗಡ ಹಣ ಪಡೆದು ಕರಾರು ಮಾಡಿ, ನೋಂದಣಿ ಮಾಡಿಸದೆ ವಂಚನೆ ಮತ್ತು ಅಕ್ರಮ ಎಸಗಿದ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಬಲಪಾಡಿ ಪಂದುಬೆಟ್ಟು ನಿವಾಸಿ ಮನೋಹರ್‌ ಎಸ್‌. ಕಲ್ಮಾಡಿ ಇವರಿಗೆ ರಾಮಣ್ಣ ಪರಿಚಯಸ್ಥರಾಗಿದ್ದರು. ಶಿವಳ್ಳಿ ಗ್ರಾಮದ ತನ್ನ ಆಸ್ತಿ ಮಾರಾಟದ ಪ್ರಸ್ತಾವನೆಯನ್ನು ಅವರು ಮನೋಹರ್‌ ಮುಂದಿರಿಸಿದ್ದರು. ಈ ಬಗ್ಗೆ ಅವರಿಬ್ಬರು ಜಾಗ ನೋಡಿ ಬಂದಿದ್ದರು. ಜಾಗ ಮಾರಾಟಕ್ಕೆ ರಾಮಣ್ಣ ತನ್ನ ತಂಗಿಯರಾದ ಸುಮತಿ ಮತ್ತು ರಮಣಿ ಒಪ್ಪಿರುವುದಾಗಿ ಖರೀದಿದಾರರಲ್ಲಿ ತಿಳಿಸಿದ್ದರು.

2012ರ ಜ. 6ರಂದು ಕುಂಜಿಬೆಟ್ಟಿನ ಆಫೀಸ್‌ನಲ್ಲಿ ಅಗ್ರಿಮೆಂಟ್‌ಗೆ ಸಹಿ ಹಾಕಿಸಿ ಮುಂಗಡವಾಗಿ ರಾಮಣ್ಣರಿಗೆ 10 ಲಕ್ಷ ರೂ. ಹಾಗೂ ತಲಾ 2 ಲಕ್ಷ ರೂ.ಗಳನ್ನು ಸುಮತಿ ಮತ್ತು ರಮಣಿ ಅವರ ಮನೆಗೆ ಹೋಗಿ ಮನೋಹರ್‌ ನೀಡಿದ್ದರು. 3 ತಿಂಗಳ ಅನಂತರ ಸುಮತಿ ಶೆಟ್ಟಿಯವರ ಮಗ ಆ ಆಸ್ತಿಯಲ್ಲಿ ಭಾಗ ಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ರಾಮಣ್ಣರಲ್ಲಿ ಕೇಳಿದಾಗ ಎಲ್ಲ ದಾಖಲಾತಿ ಸರಿಪಡಿಸುವುದು ಮತ್ತು ಪ್ರಕರಣ ವಾಪಸ್‌ ತೆಗೆದುಕೊಳ್ಳುವುದಾಗಿ ಹೇಳಿದ್ದರು.

ಜಾಗದ ನೋಂದಣಿ ಬಗ್ಗೆ ಪ್ರಸ್ತಾವಿಸಿದಾಗ ರಾಮಣ್ಣ ನೋಂದಣಿಗೆ ದಿನ ಮುಂದೂಡುತ್ತಿದ್ದರು. ಇದರಿಂದ ಬೇಸತ್ತು ಖರೀದಿದಾರರು ರಾಮಣ್ಣ ಮತ್ತು ಸಹೋದರಿಯರಿಗೆ ನೋಟಿಸ್‌ ಜಾರಿ ಮಾಡಿದ್ದರು. ಈ ಬಗ್ಗೆ ರಾಮಣ್ಣ ಫಿರ್ಯಾದುದಾರರನ್ನು ಉದ್ದೇಶಿಸಿ ಜಾಗ ಕೊಡುವುದಿಲ್ಲ, ನಿನಗೆ ಮೋಸ ಮಾಡುವ ಉದ್ದೇಶದಿಂದಲೆ ಅಗ್ರಿಮೆಂಟ್‌ ಮಾಡಿಸಿದ್ದು ಎಂದು ಬೈದರಲ್ಲದೇ ಜಾಗದ ಬಗ್ಗೆ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

21 hours ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

2 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

2 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

2 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

2 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

2 days ago