ಉಡುಪಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಟೋಲ್ ಗದ್ದಲ,ಆಡಳಿತ ಪಕ್ಷದ ಸದಸ್ಯರಿಂದ ಸಭತ್ಯಾಗ.
ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್‍ನ 14 ನೇ ಸಾಮಾನ್ಯ ಸಭೆಯು ಟೋಲ್ ಹಾಗೂ ಮರುಳುಸಮಸ್ಯೆಗೆ ಬಲಿಯಾಯಿತು.
ಕೋರಂ ಇಲ್ಲದೆ ಅರ್ಧಗಂಟೆ ತಡವಾಗಿ ಆರಂಭವಾದ ಸಭೆಯು ಪ್ರಶ್ನಾವಳಿಯ ಸಮಯದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರು ಸಾಸ್ತಾನ ಮತ್ತು ಹೆಜಮಾಡಿಯ ಟೋಲ್ ಗೇಟ್‍ಗಳಲ್ಲಿ ಸ್ಥಳಿಯ ವಾಹನಗಳಿಗೆ ಟೋಲ್ ಸಂಗ್ರಹಿಸುವ ವಿರುದ್ಧ ಮಾತನಾಡಿದರು.ಅದಕ್ಕೆ ಧ್ವನಿಗೂಡಿಸಿದ ಗೀತಾಂಜಲಿ ಎಂ ಸುವರ್ಣ ಹೆಜಮಾಡಿ ಟೋಲ್‍ನಲ್ಲಿ ಪೋಲಿಸರನ್ನ ಹಾಕಿ ಸ್ಥಳಿಯ ವಾಹನಗಳಿಗೆ ಟೋಲ್ ಸಂಗ್ರಹಿಸುತ್ತಾರೆ ಪ್ರತಿಭಟನೆ ಮಾಡಿದವರರನ್ನ ಬಂಧನ ಮಾಡುತ್ತಾರೆ ಇದು ಎಷ್ಟು ಸರಿ ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೂಡ ಕೈಗೊಂಡಿಲ್ಲ ಎಂದರು.
ಈ ವಿಚಾರವಾಗಿ ರೇಶ್ಮಾ ಉದಯ ಶೆಟ್ಟಿ ಹಾಗೂ ಪ್ರತಾಪ್ ಶೆಟ್ಟಿ ಮಾರಾಡಿ ಧ್ವನಿಗೂಡಿಸಿ ಸರಿಯಾದ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಲ್ಲ, ಪೂರ್ತಿ ಹೆದ್ದಾರಿ ಕಾಮಗಾರಿ ಮುಗಿಯದೇ ಸ್ಥಳಿಯ ವಾಹನಗಳಿಗೆ ಟೋಲ್ ಸಂಗ್ರಹಿಸುತ್ತಿರುವುದು ಹಗಲು ದರೋಡೆ ಎಂದು ಬೇಸರ ವ್ಯಕ್ತ ಪಡಿಸಿದರು.
ಒಟ್ಟಾರೆಯಾಗಿ ಇಂದಿನ ಜಿಲ್ಲಾ ಪಂಚಾಯತ್‍ನ ಸಾಮಾನ್ಯ ಸಭೆಯು ಟೋಲ್ ಗಲಾಟೆಯೊಂದಿಗೆ ಅರ್ಧಕ್ಕೆ ಮೊಟಕುಗೊಂಡಿತು.
ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…
ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…
ವಿಧಾನ ಪರಿಷತ್ ಸಭಾ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್ ಕಲಾಪ…
ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…
ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…
ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…