ಉಡುಪಿ ಜಿಲ್ಲಾ ಬಿಜೆಪಿ ಎಡವಟ್ಟು-ಮಾಜಿ ಜಿಲ್ಲಾಧ್ಯಕ್ಷನ ಲೆಟರ್ ಹೆಡ್ ನಲ್ಲಿ ಕಾರ್ಯಕರ್ತನಿಗೆ ಉಚ್ಛಾಟನ ಪತ್ರ:vishwanews24.
ಉಡುಪಿ: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಸದಸ್ಯನಿಂದಾದ ಅಶಿಸ್ತು ಮತ್ತು ಪಕ್ಷಕ್ಕೆ ಅಶಿಸ್ತು ತೋರಿರುವ ಕಾರಣಕ್ಕಾಗಿ ಕಾರ್ಯಕರ್ತನಿಗೆ ನೀಡಿದ ಉಚ್ಛಾಟನ ಪತ್ರದಿಂದಾಗಿ ಜಿಲ್ಲಾ ಬಿಜೆಪಿ ಎಡವಟ್ಟು ಮಾಡಿಕೊಂಡಿದೆ.
ಪಂಚಾಯತ್ ಸದಸ್ಯ ಬಿಜೆಪಿ ಕಾರ್ಯಕರ್ತ ಹರೀಶ್ ಸಾಲಿಯಾನ್ ಎಂಬವರಿಂದ ಹಿರಿಯಡಕ ಸೊಸೈಟಿ ಪೂರ್ವ ತಯಾರಿ ಸಭೆಯಲ್ಲಿ ಅಶಿಸ್ತು ತೋರಿದ ಎಂಬ ಕಾರಣಕ್ಕಾಗಿ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯ ಲೆಟರ್ ಹೆಡ್ ನಲ್ಲಿ ನೋಟಿಸ್ ನೀಡುವ ಮುಖೇನ ಹಾಲಿ ಉಡುಪಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಪಹಾಸ್ಯಕ್ಕಿಡಾಗಿದ್ದಾರೆ.
ಪ್ರಸ್ತುತ ಉಡುಪಿ ಬಿಜೆಪಿಗೆ ಕುಯಿಲಾಡಿ ಸುರೇಶ್ ನಾಯಕ್ ಜಿಲ್ಲಾಧ್ಯಕ್ಷರಾಗಿದ್ದು ಉಚ್ಛಾಟನ ಪತ್ರಕ್ಕೆ ಮಾತ್ರ ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯ ಲೆಟರ್ ಹೆಡ್ ಬಳಸಿಕೊಂಡಿರುವುದು “ಕೋಪದಲ್ಲಿಕೊಯ್ದ ಮೂಗು ಮತ್ತೆ ಬಂದಿತೇ” ಎಂಬ ಗಾದೆಮಾತೆಯಂತಾಗಿದೆ ಎಂದು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಮಾಡುತ್ತಿದ್ದಾರೆ.
ಸದ್ಯ ಈ ಲೆಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಾರ್ಯಕರ್ತ ಮತ್ತು ನಾಯಕರ ನಡುವೆ ಭಿನ್ನಮತ ಸೃಷ್ಟಿಸಲು ಈ ರೀತಿಯ ಚಟುವಟಿಕೆ ನಡೆಯುತ್ತಿದೆಂಬ ಮಾತು ಕೂಡ ಕೇಳಿ ಬರುತ್ತಿದೆ.
ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ ಬೆಂಗಳೂರು: ರಾಜ್ಯ ರೈತ…
ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…
ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…
ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …