Featured

ಉಡುಪಿ : ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವಿವಿಧೆಡೆ ದಾಳಿ – vishwanews24

ಉಡುಪಿ : ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವಿವಿಧೆಡೆ ದಾಳಿ

ಉಡುಪಿ : ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಯನ್ನು ತಡೆಯುವ ಉದ್ದೇಶದೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿವಿಧೆಡೆ ಧಿಡೀರ್ ದಾಳಿ ಹಾಗೂ ತಪಾಸಣೆ ಕೈಗೊಂಡು ಕ್ಲಿನಿಕ್ ಹಾಗೂ ಲ್ಯಾಬ್‌ಗಳ ನ್ಯೂನ್ಯತೆ ಕಂಡು ಬಂದ ಹಿನ್ನೆಲೆ, ನಕಲಿ ವೈದ್ಯ ತಡೆ ಹಾಗೂ ಕೆ.ಪಿ.ಎಂ.ಇ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಲ್ಯಾಬ್ ಹಾಗೂ ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗಿದೆ.

ಉಡುಪಿ ತಾಲೂಕು ಪ್ರಾಧಿಕಾರ ಹಾಗೂ ಆರೋಗ್ಯ ಅಧಿಕಾರಿಗಳ ನೇತೃತ್ವದ ತಂಡವು ಆದಿ ಉಡುಪಿಯ ಧನ್ವಂತರಿ ಕ್ಲಿನಿಕ್‌ನಲ್ಲಿ ಡಾ. ಎ.ಆರ್ ಆಚಾರ್ಯ ರವರು ಆಯುರ್ವೇದ ಕ್ಲಿನಿಕ್‌ನ ನೋಂದಣಿ ಹೊಂದಿ ಅಲೋಪತಿಕ್ ಪದ್ಧತಿಯ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿದೆ.

ಕುಂದಾಪುರ ತಾಲೂಕು ಪ್ರಾಧಿಕಾರ ಮತ್ತು ಆರೋಗ್ಯ ಅಧಿಕಾರಿಗಳ ತಂಡವು ನಾವುಂದದ ನಂಬಿಯಾರ್ ಕ್ಲಿನಿಕ್ ನಲ್ಲಿ ಡಾ. ಪ್ರಜೀತ್ ಎಸ್ ನಂಬಿಯಾರ್ ಅವರು, ಆಯುರ್ವೇದಿಕ್ ಪದ್ಧತಿಯಲ್ಲಿ ನೋಂದಾವಣೆ ಹೊಂದಿ ಅಲೋಪತಿಕ್ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿರುವುದು ಕಂಡುಬAದಿರುವ ಹಿನ್ನೆಲೆ, ಪ್ರಕರಣ ದಾಖಲಿಸಲಾಗಿದೆ.

ಕುoದಾಪುರ ತಾಲೂಕು ಪ್ರಾಧಿಕಾರ ಹಾಗೂ ಆರೋಗ್ಯ ಅಧಿಕಾರಿಗಳ ತಂಡವು ಉಪ್ಪುಂದದ ಸುಷ್ಮಾ ಕ್ಲಿನಿಕಲ್ ಲ್ಯಾಬ್ ಅನ್ನು ಲತಾ ಸುನೀಲ್ ಕೆ ಅವರು ಪರವಾನಿಗೆ ಇಲ್ಲದೇ ನಡೆಸುತ್ತಿರುವುದು ಕಂಡು ಬಂದ ಹಿನ್ನೆಲೆ, ಲ್ಯಾಬ್ ಅನ್ನು ಸೀಝ್ ಮಾಡಿ, ಪ್ರಕರಣ ದಾಖಲಿಸಲಾಗಿದೆ.

ಉಡುಪಿ ತಾಲೂಕು ಪ್ರಾಧಿಕಾರ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದ ತಂಡವು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಗಳೊಂದಿಗೆ ಜಂಟಿ ತಪಾಸಣೆ ನಡೆಸಿ, ಆರೂರಿನಲ್ಲಿ ಸಂದೇಶ್ ರಾವ್ ರವರು ತಜ್ಙತೆ ಹಾಗೂ ಪರವಾನಿಗೆ ಇಲ್ಲದೆ ಕ್ಲಿನಿಕ್‌ನ್ನು ನಡೆಸುತ್ತಿರುವುದು ಕಂಡು ಬಂದ ಹಿನ್ನೆಲೆ, ಕ್ಲಿನಿಕ್‌ನ್ನು ಸೀಜ್ ಮಾಡಿ, ಪ್ರಕರಣ ದಾಖಲಾಗಿದೆ.

ಕುಂದಾಪುರ ತಾಲೂಕು ಪ್ರಾಧಿಕೃತ ಹಾಗೂ ಆರೋಗ್ಯ ಅಧಿಕಾರಿಗಳ ತಂಡವು ಕುಂದಾಪುರದ ಬಯೋಲಿನ್ ಲ್ಯಾಬ್ ನಲ್ಲಿ ರಾಜ್ಯದ ನೋಂದಾವಣೆ ಪ್ರಮಾಣ ಪತ್ರವನ್ನು ಹೊಂದಿರದವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಕಂಡುಬAದಿರುವ ಹಿನ್ನೆಲೆ, ಎಫ್.ಐ.ಆರ್ ದಾಖಲಿಸಲಾಗಿದೆ.

ಸಾರ್ವಜನಿಕರು ಜಾಗೃತೆ ವಹಿಸಿ ಕೆ.ಪಿ.ಎಂ.ಇ ಕಾಯ್ದೆ ಅಡಿಯಲ್ಲಿ ನೊಂದಾವಣೆಯಾಗಿರದ ಅಥವಾ ನಕಲಿ ವೈದ್ಯರುಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಾರದು. ನಕಲಿ ವೈದ್ಯರ ಬಗ್ಗೆ ಮಾಹಿತಿ ಇದ್ದಲ್ಲಿ ಕುಂದಾಪುರ ಮೊ.ನಂ. 8277505911, ಕಾರ್ಕಳ ಮೊ.ನಂ. 8277505892 ಅಥವಾ ಉಡುಪಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ದೂ.ಸಂಖ್ಯೆ: 0820-2525566, 2536650 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

Vishwa News 24

Recent Posts

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? – vishwanews24

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? ಕ್ಯಾಲಿಫೋರ್ನಿಯಾ :…

52 minutes ago

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ – vishwanews24

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ ಬೆಂಗಳೂರು: ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ…

1 hour ago

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ – vishwanews24

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ  - ಫಲ್ಗುಣಿ ನದಿಯಲ್ಲಿ ಶೋಧ…

1 hour ago

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ – vishwanews24

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ…

2 hours ago

ನಾಗುರಿ ದುರಂತ – ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ – vishwanews24

ನಾಗುರಿ ದುರಂತ - ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ಮಂಗಳೂರು: ನಾಗುರಿಯಲ್ಲಿ ಮನೆ…

2 hours ago

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ – vishwanews24

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ ಬೆಂಗಳೂರು: ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ…

2 hours ago