ಉಡುಪಿ ಜಿಲ್ಲೆಯಲ್ಲಿನ ನೈರ್ಮಲ್ಯ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲು ಮನೆ ಮನೆಗಳ ನೈರ್ಮಲ್ಯ ಗಣತಿ ನಡೆಸಲಾಗುತ್ತಿದ್ದು, ಈ ಗಣತಿಯ ಆಧಾರದಲ್ಲಿ ಜಿಲ್ಲೆಯ ನೈರ್ಮಲ್ಯ ಸ್ಥಿತಿಗತಿಗಳ ಸುಧಾರಣೆಗೆ ಯೋಜನೆ ರೂಪಿಸಲು ಉದ್ದೇಶಿಸಲಾಗಿದ್ದು, ಈ ನೈರ್ಮಲ್ಯ ಗಣತಿಯು ರಾಜ್ಯದಲ್ಲೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದೆ.
ಅಕ್ಟೋಬರ್ ೨ ರಿಂದ ಆರಂಭವಾಗಿರುವ ಈ ಗಣತಿ ಕಾರ್ಯಕ್ರಮವನ್ನು ಅಕ್ಟೋಬರ್ ೧೨ gಕ್ಕೆ ಮುಕ್ತಾಯಗೊಳಿಸುವ ಗುರಿ ಹೊಂದಿದ್ದು, ಈ ಸರ್ವೇಯಲ್ಲಿ ಜಿಲ್ಲೆಯ ೧೫೫ ಗ್ರಾಮಗಳ ೨.೪೧ ಲಕ್ಷ ಮನೆಗಳನ್ನು ಸಂದರ್ಶಿಸಿ, ಆ ಮನೆಗಳ ನೈರ್ಮಲ್ಯ ಸ್ಥಿತಿಗತಿ ಬಗ್ಗೆ ಸಮಗ್ರ ವರದಿ ಪಡೆಯಲಾಗುತ್ತಿದೆ. ಇದಕ್ಕಾಗಿ ಪ್ರತೀ ೧೦೦೦ ಜನಸಂಖ್ಯೆಗೆ ೪ ಜನ ಗಣತಿದಾರರಂತೆ ಒಟ್ಟು ೮೦೦ ಜನರನ್ನು ನಿಯೋಜಿಸಿದ್ದು , ಅವರಿಗೆ ಸಂಪೂರ್ಣ ತರಬೇತಿ ನೀಡಲಾಗಿದೆ.
ಈ ಗಣತಿಯಲ್ಲಿ ಕುಟುಂಬಗಳ ವೈಯಕ್ತಿಕ ಶೌಚಾಲಯದ ಬಳಕೆ, ಶೌಚಾಲಯ ತುಂಬಿದಾಗ ವಿಲೇವಾರಿ ವಿಧಾನದ ಬಗ್ಗೆ, ತ್ಯಾಜ್ಯವನ್ನು ಕುಟುಂಬ ಹಂತದಲ್ಲಿ ವಿಂಗಡಣೆ ಹಾಗೂ ಅದರ ವಿಲೇವಾರಿ ವಿಧಾನ, ದ್ರವತ್ಯಾಜ್ಯ ನಿರ್ವಹಣೆಯ ವಿಧಾನ ಮಾಡುತ್ತಿರುವುದು ಸೇರಿದಂತೆ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಲಾಗುವುದು.
ಇದರೊಂದಿಗೆ ಕುಟುಂಬಗಳಿಗೆ ನೈರ್ಮಲ್ಯತೆ ಬಗ್ಗೆ ಹೆಚ್ಚಿನ ಮಾಹಿತಿ,ಅವಳಿಗುಂಡಿ ಶೌಚಾಲಯದ ಮಹತ್ವ, ಮ್ಯಾನುವಲ್ ಸ್ಯ್ಕಾವೆಂಜರ್ ಕಾಯಿದೆ, ಹಸಿ ತ್ಯಾಜ್ಯ ನಿರ್ವಹಣೆ ವಿಧಾನ, ಒಣತ್ಯಾಜ್ಯ ನಿರ್ವಹಣೆ,
ಋತುಚಕ್ರ ತ್ಯಾಜ್ಯ ನಿರ್ವಹಣೆ, ಬೂದುನೀರು ನಿರ್ವಹಣೆ ಅಗತ್ಯತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
MGNREGA ಯೋಜನೆಯಲ್ಲಿ ಮನೆಯಲ್ಲಿ ಉತ್ಪತ್ತಿಯಾಗುವ ಅಶುದ್ದ ನೀರಿನ ನಿರ್ವಹಣೆಗೆ ಬಚ್ಚಲು ಗುಂಡಿ (ಸೋಕ್ ಪಿಟ್) ನಿರ್ಮಾಣ, ಹಸಿತ್ಯಾಜ್ಯ ನಿರ್ವಹಣೆಗೆ ಪೌಷ್ಠಿಕ ತೋಟಗಳ ನಿರ್ಮಾಣ, ಎರೆಹುಳು ಘಟಕ, ಗೊಬ್ಬರಗುಂಡಿ ನಿರ್ಮಾಣ, ನಿರ್ಮಾಣ ಇತ್ಯಾದಿ ಮಾಹಿತಿಯ ಜೊತೆಯಲ್ಲಿ ಜಲ ಜಿವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಯೋಜನೆಯಡಿ ವರ್ಷ ಪೂರ್ತಿ ಶುದ್ದ ಕುಡಿಯುವ ನೀರು ಒದಗಿಸುವ ಬಗ್ಗೆ ಸಹ ಸಾರ್ವಜನಿಕರಿಗೆ ಮಾಹಿತಿ ನೀಡುವುದರೊಂದಿಗೆ ,ನೀರಿನ ಸಂಪರ್ಕವಿಲ್ಲದ ಮನೆಗಳ ಮಾಹಿತಿ ಸಹ ಸಂಗ್ರಹಿಸಲಾಗುತ್ತಿದ್ದು, ಅಂತಹ ಮನೆಗಳಿಗೆ ನಳ್ಳಿ ಸಂಪರ್ಕ ಒದಗಿಸಲು ಸಹ ಈ ಮಾಹಿತಿ ನೆರವು ನೀಡಲಿದೆ.
ಈ ಗಣತಿಯಲ್ಲಿ ದೊರೆಯುವ ಮಾಹಿತಿಯ ಮೂಲಕ ಜಿಲ್ಲೆಯ ಎಲ್ಲಾ ಗ್ರಾಮಗಳ ಪ್ರತೀ ಮನೆಯಲ್ಲಿ ನೈರ್ಮಲ್ಯ ಮತ್ತು ಕುಡಿಯುವ ನೀರು ಕುರಿತಂತೆ ಇರುವ ಅಗತ್ಯಗಳು, ಸಮಸ್ಯೆಗಳ ಕುರಿತಂತೆ ಸ್ಪಷ್ಟ ಮಾಹಿತಿ ದೊರೆಯಲಿದ್ದು, ಈ ಮಾಹಿತಿಯ ಆಧಾರದಲ್ಲಿ ಇಡೀ ಜಿಲ್ಲೆಗೆ ಸ್ವ÷ಚ್ಛ ಕುಡಿಯುವ ನೀರು ಒದಗಿಸಲು ಮತ್ತು ಶುಚಿತ್ವದ ಕಾರ್ಯಕ್ರಮಗಳನ್ನು ಆಯೋಜಿಸಿ, ಇಡೀ ಜಿಲ್ಲೆಯಲ್ಲಿ ಸಂಪೂರ್ಣ ನೈರ್ಮಲ್ಯ ಮತ್ತು ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಾಗಲಿದೆ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್
ಗಣತಿ ಸಮಯದಲ್ಲಿ ಸಾರ್ವಜನಿಕರಿಗೆ ನೀಡಲು ಮುದ್ರಿಸಲಾಗಿರುವ ಮಾಹಿತಿ ಕೈಪಿಡಿಯಲ್ಲಿ ಪ್ರಥಮ ಬಾರಿಗೆ QR Code ಅಳವಡಿಸಿಲಾಗಿದ್ದು, ಇದನ್ನು ಸ್ಕ್ಯಾನ್ ಮಾಾಡುವ ಮೂಲಕ ಶೌಚಾಲಯ ಬಳಕೆಯ ಮಹತ್ವ,ಅವಳಿ ಗುಂಡಿ ಶೌಚಾಲಯ ನಿರ್ಮಾಣದ ಪ್ರಯೋಜನ, ಘನ ತ್ಯಾಜ್ಯ ನಿರ್ವಹಣೆ ವಿಧಾನ, ಪೈಪ್ ಕಾಂಪೋಸ್ಟ್ ಅಳವಡಿಕೆ, ಋತುಚಕ್ರ ತ್ಯಾಜ್ಯ ನಿರ್ವಹಣೆ, ಇಂಗು ಗುಂಡಿ ನಿರ್ಮಾಣದ ಪ್ರಯೋಜನ, ಜನ ಜೀವನ್ ಮಿಷನ್ ಯೋಜನೆ ಕುರಿತು ೫ ವೀಡಿಯೋಗಳನ್ನು ಅಳವಡಿಸಲಾಗಿದ್ದು, ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…