ಉಡುಪಿ: ಸ್ವಯಂ ಚಾಲಿತ ವಾಹನ ನೋಂದಣಿ ಸಂಖ್ಯೆ ಗುರುತಿಸುವ(ಎಎನ್‌ಪಿಆರ್) ಕ್ಯಾಮೆರಾಗಳನ್ನು ಜಿಲ್ಲೆಯ ಆರು ಕಡೆಗಳಲ್ಲಿ ಅಳವಡಿಸಿದ್ದು, ಇದರಿಂದ ಜಿಲ್ಲೆಯಾದ್ಯಂತ ಪ್ರಮುಖ ಎಲ್ಲಾ ಸಂಚಾರ ನಿಯಮ ಉಲ್ಲಂಘನೆಗಳಲ್ಲಿ ಶೇ.40ರಿಂದ ಶೇ.70ರವರೆಗೆ ಇಳಿಕೆ ಕಂಡು ಬಂದಿದೆ.
ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರವನ್ನು ಪರಿಣಾಮಕಾರಿಯಾಗಿ ನಿರ್ವ ಹಿಸಲು ಹಾಗೂ ತಂತ್ರಜ್ಞಾನದ ಮೂಲಕ ಸಂಚಾರ ನಿಯಮಗಳ ಜಾರಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ದಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಉಡುಪಿ ಜಿಲ್ಲೆಯ ಪಡುಬಿದ್ರಿ- ಉಚ್ಚಿಲ, ಕಾಪು-ದಂಡತೀರ್ಥ, ಕೋಟ- ತೆಕ್ಕಟ್ಟೆ, ಗಂಗೊಳ್ಳಿ- ತ್ರಾಸಿ, ಬೈಂದೂರು- ಕೆರ್ಗಾಲ್ ಮತ್ತು ಕಾರ್ಕಳ- ದೂಪದಕಟ್ಟೆಗಳಲ್ಲಿ ಒಟ್ಟು ಆರು ಎಎನ್‌ಪಿಆರ್ ಕ್ಯಾಮೆರಾಗಳನ್ನು ಅಳವಡಿಸಿ, ಮೇ 21ರಂದು ಅನುಷ್ಠಾನ ಮಾಡಲಾಗಿತ್ತು.
ಇದನ್ನೂ ಓದಿ :
ಇಲ್ಲಿನ ಕ್ಯಾಮೆರಾಗಳು ವಾಹನದ ನೋಂದಣಿ ಸಂಖ್ಯೆಯನ್ನು ಸ್ವಯಂ ಚಾಲಿತವಾಗಿ ಗುರುತಿಸಿ, ವಾಹನದ ಮಾಲಕರ ವಿವರಗಳು ಹಾಗೂ ನಡೆದಿರುವ ಸಂಚಾರ ನಿಯಮ ಉಲ್ಲಂಘನೆಯ ಮಾಹಿತಿಯನ್ನು ದಾಖಲಿಸುತ್ತದೆ. ದಾಖಲಾದ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ಇ-ಚಲನ್ ನೋಟಿಸ್‌ಗಳನ್ನು ಸ್ವಯಂಚಾಲಿತವಾಗಿ ಸಿದ್ಧಪಡಿಸಿ, ಸಂಬಂಧಿತ ವಾಹನದ ಮಾಲಕರಿಗೆ ಕಳುಹಿಸಲಾಗುತ್ತದೆ. ಈವರೆಗೆ ಒಟ್ಟು 2,700 ಇ-ಚಲನ್‌ಗಳನ್ನು ಜಾರಿ ಮಾಡಲಾಗಿದೆ.
ಈ ಯೋಜನೆ ಜಾರಿಯಾದ ಮೊದಲ ವಾರ ಹಾಗೂ ಇತ್ತೀಚಿನ ವಾರದ ಸಂಚಾರ ನಿಯಮ ಉಲ್ಲಂಘನೆಗಳ ಹೋಲಿಕೆ ಮಾಡಿದರೆ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಸಾಕಷ್ಟು ಇಳಿಮುಖವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ :
ಕೋಳಿ ಫಾರ್ಮ್ ಹೆಸರಲ್ಲಿ ಡ್ರಗ್ಸ್ ಫ್ಯಾಕ್ಟರಿ : ಮೂರು ರಾಜ್ಯಗಳಿಗೆ ಸಪ್ಲೈ ಮಾಡ್ತಿದ್ದ 7 ಮಂದಿ ಪೊಲೀಸರ ವಶಕ್ಕೆ ಬೆಳಗಾವಿ:…
ಮಂಗಳೂರು: ಅಕ್ರಮ ಗೋ ಸಾಗಾಟ : 23 ಗೋವುಗಳ ರಕ್ಷಣೆ ಮಂಗಳೂರು: ನಗರದ ಕುಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಕ್ರಮವಾಗಿ…
ಬ್ರಹ್ಮಾವರ: ತಂದೆ-ತಾಯಿಯನ್ನೇ ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಮಗ ಬ್ರಹ್ಮಾವರ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆಗೈದಿರುವ…
ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಕುಖ್ಯಾತ ಗ್ಯಾಂಗ್‌ಸ್ಟರ್ ಬಂಧನ ; ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು ಉಡುಪಿ:…
ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ ಕರ್ನಾಟಕ ಸರ್ಕಾರದ ಯೋಜನೆಗಳಾದ ಭಾರತ್ ಜೋಡೋ ಮತ್ತು…
ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್ ಬೀದರ್: ‘ದೇಶ ವಿರೋಧಿ ಚಟುವಟಿಕೆ ಮಾಡಿದಾಗ…