Featured

ಉಡುಪಿ : ಜಿಲ್ಲೆಯ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನ ಪ್ರಯೋಜನ ಒದಗಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ – Vishwanews24

ಉಡುಪಿ : ಜಿಲ್ಲೆಯ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ನ ಪ್ರಯೋಜನ ಒದಗಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ ಜಿಲ್ಲೆಯ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನ ಸದುಪಯೋಗದ ಬಗ್ಗೆ ಅರಿವು ಮೂಡಿಸಿ, ಈ ಕಾರ್ಡ್ ನಿಂದ ಪಡೆಯಬಹುದಾದ
ಸೌಲಭ್ಯಗಳನ್ನು , ಅರ್ಹ ಎಲ್ಲಾ ರೈತರಿಗೂ ಆದ್ಯತೆಯಲ್ಲಿ ವಿತರಿಸುವ ಬಗ್ಗೆ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ “ ಕಿಸಾನ್ ಭಾಗೀದಾರಿ ಪ್ರಾಥಮಿಕ್ತ ಹಮಾರಿ” ವಿಶೇಷ ಕಾರ್ಯಕ್ರಮದ ಸಭೆಯ
ಆಧ್ಯಕ್ಷತೆ ವಹಿಸಿ ಮಾತನಾಡಿದರು.

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು 1,60,000.00 ಗಳ ವರೆಗೆ ಯಾವುದೇ ಗ್ಯಾರಂಟಿ ನೀಡದೇ ಬ್ಯಾಂಕ್ ಗಳಿಂದ ಸಾಲ ಪಡೆಯಬಹುದಾಗಿದ್ದು, ಇದರಿಂದ ಇತರೆ ವಾಣಿಜ್ಯ ಬ್ಯಾಂಕ್ ಗಳು ಮತ್ತು ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ತೊಂದರೆಗೀಡಾಗುವುದು ತಪ್ಪುತ್ತದೆ , ರೈತರನ್ನು ಕಿಸಾನ್ ಕಾರ್ಡ್ ಯೋಜನೆಗೆ ನೊಂದಣಿ ಮಾಡಲು ಏಪ್ರಿಲ್ 24 ರಿಂದ ಮೇ 1 ರವರೆಗೆ ನಡೆಯುವ ಬೃಹತ್ ಆಂದೋಲನದಲ್ಲಿ ಜಿಲ್ಲೆಯ ಎಲ್ಲಾ ರೈತರನ್ನು ಈ ಯೋಜನೆಯಡಿ ನೊಂದಣಿ ಮಾಡಿ,ಸೌಲಭ್ಯ ಒದಗಿಸುವಂತೆ ನಿದೇರ್ಶನ ನೀಡಿದರು.

ಜಿಲ್ಲೆಯಲ್ಲಿ 1,63,439 ರೈತರು ಪ್ರೊಟ್ಸ್ ತಂತ್ರಾAಶದಲ್ಲಿ ನೊಂದಣಿಯಾಗಿದ್ದು, 55164 ಮಂದಿ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ಪಡೆದಿದ್ದು, ಇನ್ನೂ 11,4033 ರೈತರು ಕಾಡ್ ð ಪಡೆಯಲು ಬಾಕಿ ಇದ್ದು, ಈ ರೈತರಿಗೆ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಬ್ಯಾಂಕ್ ಆಧಿಕಾರಿಗಳು ಭಾಗವಹಿಸಿ ಈ ಬಗ್ಗೆ ಮಾಹಿತಿ ನೀಡುವ ಮೂಲಕ, ಬ್ಯಾಂಕ್ ಮಿತ್ರರ ಮೂಲಕ ಮೂಲಕ, ಡಿಜಿ ಪೇ ಸಖಿಯರ ಮೂಲಕ ರೈತರ ಮನೆ ಮನೆಗಳಿಗೆ ಭೇಟಿ ನೀಡಿ, ಯೋಜನೆಯ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು.

ಎಲ್ಲಾ ಬ್ಯಾಂಕ್‌ಗಳು, ಈ ವಿಶೇಷ ಆಂದೋಲದನ ಅವಧಿಯಲ್ಲಿ ತಮ್ಮ ಬ್ರಾಂಚ್ ಗಳನ್ನು ವಾರದಲ್ಲಿ ಕನಿಷ್ಠ 2 ದಿನಗಳ ವಿಸೇಷ ಮೇಳಗಳನ್ನು
ಆಯೋಜಸಿ,ರೈರತನ್ನು ನೊಂದಣಿ ಮಾಡಬೇಕು, ಎಲ್ಲಾ ಕೃಷಿ ಪ್ರಾಥಮಿಕ ಸಹಕಾರ ಸಂಘಗಳು ಮತ್ತು ರೈತಸೇವಾ ಕೇಂದ್ರಗಳ ಮೂಲಕ ಸಹ
ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ಈ ಬಗ್ಗೆ ಅರಿವು ಮೂಡಿಸಬೇಕು, ಪ್ರೂಟ್ಸ್ ತಂತ್ರಾ0ಶದಲ್ಲಿ ನೊಂದಣಿಯಾಗಿರುವ ರೈತರಿಗೆ ಎಸ್.ಎಂ.ಎಸ್
ಸಂದೇಶಗಳನ್ನು ಕಳುಹಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಕಿಸಾನ್ ಕ್ರೆಡಿಟ್ ಕಾರ್ಡ್ ನೊಂದಣಿಗೆ ಬಾಕಿ ಇರುವ ರೈತರ ಪಟ್ಟಿಯನ್ನು ಪರಿಶೀಲಿಸಿ,ಸಂಬAದಪಟ್ಟ ತಾಲೂಕುಗಳ ವ್ಯಾಪ್ತಿಯಲ್ಲಿನ ಬ್ಯಾಂಕ್ ಗಳು, ಎಲ್ಲಾ ರೈತನ್ನು ಯೋಜನೆಗೆ ನೊಂದಣಿ ಮಾಡುವ ಕುರಿತಂತೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅದರಂತೆ ಕಾರ್ಯ ನಿರ್ವಹಿಸಿ ,ನಿಗಧಿತ ಅವಧಿಯೊಳಗೆ ನೊಂದಣಿಯನ್ನು ಮುಕ್ತಾಯಗೊಳಿಸುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ
ಗ್ರಾಮಸಭೆಗಳು ನಡೆಯಲಿದ್ದು, ಸಮೀಪದ ಬ್ಯಾಂಕ್ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನ
ಬಗ್ಗೆ ಮಾಹಿತಿ ನೀಡಿ, ಎಲ್ಲಾ ಗ್ರಾಮ ಪಂಚಾಯತ್ ಪಿಡಿಓ ಗಳಿಗೆ ಸಹ ಈ ಬಗ್ಗೆ ಸೂಚನೆ ನೀಡಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ,
ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಕುಮಾರ್, ಲೀಡ್ ಬ್ಯಾಂಕ್ ಮೆನೇಜರ್ ಪಿಂಜಾರ , ಕೆನರಾ ಬ್ಯಾಂಕ್ ಪ್ರಾದೇಶಿಕ
ಮೆನೇಜರ್ ಶ್ರೀಜಿತ್, ನಬಾಡ್ ð ನ ಪ್ರಾದೇಶಿಕ ಮೆನೇಜರ್ ಸಂಗೀತಾ ಕಾರ್ಥಾ, ಯೂನಿಯನ್ ಬ್ಯಾಂಕ್ ನ ಪ್ರಾದೇಶಿಕ ಮೆನೇಜರ್
ಡಾ.ವಾಸಪ್ಪ,ಕರ್ನಾಟಕ ಪ್ರಾದೇಶಿಕ ಮೆನೇಜರ್ ರಾಜ್ ಗೋಪಾಲ್ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು ಮತ್ತಿತರರು
ಉಪಸ್ಥಿತರಿದ್ದರು.

Vishwa News 24

Recent Posts

ಪಾಟ್ನಾ: ಪ್ಯಾಸೆಂಜರ್​​​​ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ : ತಪ್ಪಿದ ಭಾರೀ ಅನಾಹುತ – vishwanews24

ಪ್ಯಾಸೆಂಜರ್​​​​ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ :ತಪ್ಪಿದ ಭಾರೀ ಅನಾಹುತ ಪಾಟ್ನಾ: ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳಲು…

2 hours ago

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕಾರ – vishwanews24

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕಾರ ತಿರುವನಂತಪುರಂ: ಕೇರಳಂ ಸರಕಾರದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಪ್ರಮಾಣವಚನ ಸ್ವೀಕರಿಸಿದರು.…

2 hours ago

ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ : ನಾಳೆ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಪರಮೇಶ್ವರ್‌ – vishwanews24

ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ : ನಾಳೆ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಪರಮೇಶ್ವರ್‌ ಬೆಂಗಳೂರು: ತುಮಕೂರಿನಲ್ಲಿ ನಾಳೆ…

3 hours ago

ಪಡುಬಿದ್ರಿ : ಚಿನ್ನಾಭರಣವಿದ್ದ ಬ್ಯಾಗ್ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ – vishwanews24

ಪಡುಬಿದ್ರಿ : ಚಿನ್ನಾಭರಣವಿದ್ದ ಬ್ಯಾಗ್ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಪಡುಬಿದ್ರಿ: ಬಸ್ ನಿಲ್ದಾಣದಲ್ಲಿ ದೊರೆತ ಸಾವಿರಾರು…

3 hours ago

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ – vishwanews24

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ ಉಡುಪಿ: ಉಡುಪಿ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್…

2 days ago

ಮಂಗಳೂರು : ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ – vishwanews24

ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್.. ಸುಪ್ರೀಂ ಕೋರ್ಟ್‌ನಲ್ಲಿ ಅಧಿಕೃತ ಕ್ರಮಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ…

2 days ago