Featured

ಉಡುಪಿ: ಜಿಲ್ಲೆಯ ವಿವಿಧೆಡೆ ದನ ಕಳ್ಳತನ ಪ್ರಕರಣ – 8 ಮಂದಿಯ ಬಂಧನ: ಆರೋಪಿಗಳಿಂದ ವಾಹನಗಳ ವಶ : ಎಸ್‌ಪಿ – vishwanews24

ಉಡುಪಿ: ಜಿಲ್ಲೆಯ ವಿವಿಧೆಡೆ ದನ ಕಳ್ಳತನ ಪ್ರಕರಣ – 8 ಮಂದಿಯ ಬಂಧನ: ಆರೋಪಿಗಳಿಂದ ವಾಹನಗಳ ವಶ : ಎಸ್‌ಪಿ

ಉಡುಪಿ: ಜಿಲ್ಲಾದ್ಯಂತ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಲ್ಲಿ ನಡೆದ ದನ ಕಳ್ಳತನ ಪ್ರಕರಣದಲ್ಲಿ 8 ಮಂದಿ ಆರೋಪಿಯನ್ನು ಬಂಧಿಸಿ ಅವರು ಬಳಸಿದ್ದ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಓರ್ವ ಆರೋಪಿ ಮೇಲೆ 35 ಹಾಗೂ ಇನ್ನೊರ್ವ ಆರೋಪಿ ಮೇಲೆ 14 ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ.

ಇತ್ತೀಚೆಗೆ ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿದ್ಕಲಕಟ್ಟೆ ಜಂಕ್ಷನ್‌ನಲ್ಲಿ ದನಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಒಂದು ಕಾರು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಆರೋಪಿ ಇಮ್ರಾನ್‌ ಮೇಲೆ ರಾಜ್ಯದ ವಿವಿಧ ಠಾಣೆ ವ್ಯಾಪ್ತಿಯಲ್ಲಿ ದನ ಕಳ್ಳತನಕ್ಕೆ ಸಂಬಂಧಿಸಿದ 35 ಪ್ರಕರಣ, ಇರ್ಷಾದ್‌ ಮೇಲೆ 14 ಪ್ರಕರಣ ದಾಖಲಾಗಿದೆ.

ಬೈಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ದನ ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ, ಮೂರು ವಾಹನ ವಶಕ್ಕೆ ಪಡೆಯಲಾಗಿದೆ. ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಒಂದು ವಾಹನ ವಶಪಡಿಸಿಕೊಳ್ಳಲಾಗಿದೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ, ಒಂದು ಕಾರು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಗೋ ಕಳ್ಳತನ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕಳ್ಳತನ ಪ್ರಕರಣ ಭೇದಿಸಲು ವಿವಿಧ ತಂಡಗಳನ್ನು ರಚನೆ ಮಾಡಿದ್ದೇವೆ. ಆಗದಂತೆಯೂ ಹಲವು ಕ್ರಮ ತೆಗೆದುಕೊಂಡಿದ್ದೇವೆ ಎಂದರು.

Vishwa News 24

Recent Posts

ಉಡುಪಿ: ಕಾಕ್ರೋಚ್ ಹೆಸರಿನಲ್ಲಿ ಯುವ ಸಮುದಾಯವನ್ನು ಪ್ರಚೋದಿಸುವ ಕೆಲಸ  ನಡೆಯುತ್ತಿದೆ: ಸುನಿಲ್ ಕುಮಾರ್ ಆರೋಪ – vishwanews24

ಉಡುಪಿ: ಕಾಕ್ರೋಚ್’ ಹೆಸರಿನಲ್ಲಿ ಯುವ ಸಮುದಾಯವನ್ನು ಪ್ರಚೋದಿಸುವ ಕೆಲಸ  ನಡೆಯುತ್ತಿದೆ: ಸುನಿಲ್ ಕುಮಾರ್ ಆರೋಪ ಉಡುಪಿ: ಚಳವಳಿಯ ಹೆಸರಿನಲ್ಲಿ ದೇಶದಲ್ಲಿ…

3 hours ago

ಕಾಪು : ಉದ್ಯಮಿ ಸಖೇಂದ್ರ ಬಿ. ಸುವರ್ಣ ಹೃದಯಾಘಾತದಿಂದ ನಿಧನ – vishwanews24

ಕಾಪು : ಉದ್ಯಮಿ ಸಖೇಂದ್ರ ಬಿ. ಸುವರ್ಣ ಹೃದಯಾಘಾತದಿಂದ ನಿಧನ ಕಾಪು : ಕಾಪುವಿನ ಹಿರಿಯ ಉದ್ಯಮಿ, ಧಾರ್ಮಿಕ, ಸಾಮಾಜಿಕ…

3 hours ago

ಜು.29ರಂದು ಕಿನ್ನಿಮುಲ್ಕಿಯಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್‌ನ ನೂತನ ಶಾಖೆ ಉದ್ಘಾಟನೆ – vishwanews24

ಜು.29ರಂದು ಕಿನ್ನಿಮುಲ್ಕಿಯಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್‌ನ ನೂತನ ಶಾಖೆ ಉದ್ಘಾಟನೆ ಉಡುಪಿ: ನಗರದ ಕಿನ್ನಿಮುಲ್ಕಿಯ ಶಾಂತಾ ಬಿಲ್ಡಿಂಗ್‌ನಲ್ಲಿ ಕಿದಿಯೂರು ಕ್ರೆಡಿಟ್…

5 hours ago

ಪಡುಬಿದ್ರಿ : ಆ.1ರಂದು ಹೆಜಮಾಡಿ ಟೋಲ್ ವಿರುದ್ದ ಬೃಹತ್ ಹೋರಾಟ: ಪೋಸ್ಟರ್ ಬಿಡುಗಡೆ – vishwanews24

ಪಡುಬಿದ್ರಿ : ಆ.1ರಂದು ಹೆಜಮಾಡಿ ಟೋಲ್ ವಿರುದ್ದ ಬೃಹತ್ ಹೋರಾಟ: ಪೋಸ್ಟರ್ ಬಿಡುಗಡೆ ಪಡುಬಿದ್ರಿ : ಹೆಜಮಾಡಿ ಟೋಲ್ನಲ್ಲಿ ಸ್ಥಳೀಯ…

5 hours ago

ಲಾವಣ್ಯ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಆರೋಪಿ ಪೊಲೀಸ್ ವಶಕ್ಕೆ – vishwanews24

ಲಾವಣ್ಯ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಆರೋಪಿ ಪೊಲೀಸ್ ವಶಕ್ಕೆ ಮಂಗಳೂರು: ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜುಲೈ…

5 hours ago

ಮಂಗಳೂರು : ಮೀನುಗಾರ ಮುಖಂಡನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ – vishwanews24

ಮಂಗಳೂರು : ಮೀನುಗಾರ ಮುಖಂಡನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮಂಗಳೂರು : ನಗರ ಹೊರವಲಯದ ಬೈಕಂಪಾಡಿಯ…

6 hours ago