ಉಡುಪಿ, : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಹಾಗೂ ಯಕ್ಷ ರಂಗಾಯಣ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷ ರಂಗಾಯಣದ ಪರಶುರಾಮ ನಾಟಕದ ಪ್ರಥಮ ಪ್ರದರ್ಶನವು ಜನವರಿ 9 ರಿಂದ 11 ರ ವರೆಗೆ ಕಾರ್ಕಳ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ವನರಂಗ ವೇದಿಕೆಯಲ್ಲಿ ನಡೆಯಲಿದೆ.
ಜ. 9 ರಂದು ಸಂಜೆ 6 ಗಂಟೆಗೆ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನಿಲ್ ಕುಮಾರ್ ಅವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದು, ಯಕ್ಷ ರಂಗಾಯಣ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜನ ಸ್ವಾಮಿ, ನಾಟಕಕಾರ ಶಶಿರಾಜ್ ಕಾವೂರು ಭಾಗವಹಿಸಲಿದ್ದಾರೆ.
ಅಂದು ಸಂಜೆ 6.35 ರಿಂದ ಯಕ್ಷ ರಂಗಾಯಣ ಕಾರ್ಕಳ ಸಂಚಾರಿ ರಂಗ ತಂಡ ಅಭಿನಯಿಸುವ ಪರಶುರಾಮ ನಾಟಕದ ಪ್ರಥಮ ಪ್ರದರ್ಶನ ನಡೆಯಲಿದ್ದು, ಶಶಿರಾಜ್ ರಾವ್ ಕಾವೂರು ರಚಿಸಿದ್ದು, ಡಾ.ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದಾರೆ. ಜ. 10 ರಂದು ಸಂಜೆ 6.30 ಕ್ಕೆ ರಂಗಾಯಣ ಶಿವಮೊಗ್ಗ ಅಭಿನಯಿಸುವ ಸ್ವಾತಂತ್ರ್ಯ ಸಂಗ್ರಾಮದ ನೈಜಕತೆಯಾಧಾರಿತ, ಡಾ.ಸಾಸ್ವೆಹಳ್ಳಿ ಸತೀಶ್ ರಚಿಸಿದ, ಶ್ರೀಪಾದ ಮತ್ತು ಶಿವಶಂಕರ ತೀರ್ಥಹಳ್ಳಿ ನಿರ್ದೇಶನದ ಈಸೂರು ಕೊಡೆವು ನಾಟಕ ಪ್ರದರ್ಶನಗೊಳ್ಳಲಿದೆ.
ಜ.11 ರಂದು ಸಂಜೆ 6.30 ಕ್ಕೆ ಶಿವಮೊಗ್ಗ ರಂಗಾಯಣ ಅಭಿನಯಿಸುವ, ನಾ.ಡಿಸೋಜಾ ಅವರ ಕಾದಂಬರಿ ಹಾಗೂ ಎಸ್ ಮಾಲತಿಯವರ ಹಕ್ಕಿ ಕತೆ ಪ್ರದರ್ಶನಗೊಳ್ಳಿದೆ. ಈ ನಾಟಕವನ್ನು ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ನಿರ್ದೇಶಿಸಿದ್ದು, ನಾಟಕೋತ್ಸವಕ್ಕೆ ಪ್ರವೇಶ ಉಚಿತವಾಗಿರುತ್ತದೆ. ಬೈಲೂರಿನಲ್ಲಿ ಲೋಕಾರ್ಪಣೆಗೊಳ್ಳಿರುವ ಪರಶುರಾಮ ಥೀಂ ಪಾರ್ಕ್ ಗೆ ಪೂರಕವಾಗಿ ಪರಶುರಾಮ ನಾಟಕವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರದರ್ಶನ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ .. ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026 ರೂಪಿಸುವ ಕುರಿತು ಸಭೆ…
ಟೋಲ್ ಪ್ಲಾಜಾಗೆ ಎಲ್‌ಪಿಜಿ ಟ್ಯಾಂಕರ್ ಡಿಕ್ಕಿ: ಐವರು ದುರ್ಮರಣ ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ ನವದೆಹಲಿ: ಉತ್ತರ ಪ್ರದೇಶದ ಕೌಶಂಬಿ…
ಕೊಪ್ಪಳ : ಅಂಜನಾದ್ರಿ ದೇಗುಲಕ್ಕೆ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ದಂಪತಿ ಭೇಟಿ ಕೊಪ್ಪಳ: ಖ್ಯಾತ ಕ್ರಿಕೆಟ್ ಆಟಗಾರ, ಟೀಂ…
ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿರುವ…
ಬೆಂಗಳೂರು: ಡೇ ಕೇರ್ ಸೆಂಟರ್ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ ಬೆಂಗಳೂರು: ಇಲ್ಲಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಡೇಕೇರ್ ಸೆಂಟರ್…
ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ…