ಉಡುಪಿ : ಟೊಮೇಟೊ ಫ್ಲೋ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಇದು ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವ ಖಾಯಿಲೆಯಾಗಿದ್ದು, ಕೋವಿಡ್ ಗೂ ಟೊಮೆಟೊ ಫ್ಲೂ ಗೂ ಸಂಬಂಧ ಇಲ್ಲ ಇದೊಂದು ಪ್ರತ್ಯೇಕ ವೈರಸ್ ಎಂದು ಡಿಎಚ್ಒ ಡಾಕ್ಟರ್ ನಾಗಭೂಷಣ್ ಮಾಹಿತಿ ನೀಡಿದ್ದಾರೆ.
ಟೊಮೆಟೊ ಫ್ಲೂ ಚರ್ಮದಲ್ಲಿ ತುರಿಕೆ ಜ್ವರ ಮೈಕೈ ನೋವು ಸುಸ್ತು ಸಾಮಾನ್ಯ ಲಕ್ಷಣಗಳು ಇರಲಿದ್ದು, ಎಲ್ಲಾ ಖಾಸಗಿ ಮತ್ತು ಸರಕಾರಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಿಗೆ ಮುನ್ನೆಚ್ಚರಿಕೆ ನೀಡಿದ್ದೇವೆ. ಇಂತಹ ಪ್ರಕರಣಗಳು ಕಂಡುಬಂದರೆ ಆರೋಗ್ಯ ಇಲಾಖೆಗೆ ಸೂಚಿಸುವಂತೆ ಹೇಳಿದ್ದೇವೆ . ಉಡುಪಿ ಜಿಲ್ಲೆಗೆ ಕೇರಳದ ಗಡಿಭಾಗ ಇಲ್ಲ, ಆದರೆ ಕೇರಳದಿಂದ ಅನೇಕ ಪ್ರಯಾಣಿಕರು ಬರುತ್ತಾರೆ. ಕೊಲ್ಲೂರು ಸೇರಿದಂತೆ ದೇವಾಲಯಗಳಿಗೆ ಜನರು ಬರುತ್ತಾರೆ ಈ ಹಿನ್ನಲೆ ಸೂಕ್ಷ್ಮ ಭಾಗಗಳಲ್ಲಿ ವಿಶೇಷ ಮುತುವರ್ಜಿ ವಹಿಸಲಾಗುವುದು. ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮಕ್ಕಳ ಕ್ಲಿನಿಕ್ ಗಳು ಇಂತಹ ಪ್ರಕರಣ ಕಂಡುಬಂದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಎಂದು ತಿಳಿಸಲಾಗಿದ್ದು, ಪೋಷಕರು ಆತಂಕ ಪಡದೆ ಲಕ್ಷಣ ಕಂಡುಬಂದರೆ ವೈದ್ಯರಿಗೆ ತಿಳಿಸಿ ಎಂದು ಡಿಎಚ್ ಓ ತಿಳಿಸಿದ್ದಾರೆ.
ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…
ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…
ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…