Featured

ಉಡುಪಿ : ಡಿ.ಎ.ಪಿ ಬದಲು ಪರ್ಯಾಯ ರಸಗೊಬ್ಬರ ಬಳಸಿ -Vishwanews24

ಉಡುಪಿ : ಡಿ.ಎ.ಪಿ ಬದಲು ಪರ್ಯಾಯ ರಸಗೊಬ್ಬರ ಬಳಸಿ -Vishwanews24

ಉಡುಪಿ : ಡಿ.ಎ.ಪಿ. ರಸಗೊಬ್ಬರದ ಕೇವಲ ಸಾರಜನಕ ಹಾಗೂ ರಂಜಕ ಒದಗಿಸುವ ಒಂದು ಕಾಂಪ್ಲೆಕ್ಸ್ ಗೊಬ್ಬರವಾಗಿದ್ದು, ಡಿ.ಎ.ಪಿ ಇಲ್ಲದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಪರ್ಯಾಯ ರಸಗೊಬ್ಬರ ಬಳಸಿ ಸಾರಜನಕ ಹಾಗೂ ರಂಜಕ ಪೋಷಕಾಂಶಗಳನ್ನು ಬೆಳೆಗಳಿಗೆ ನೀಡಬಹುದು.

ರೈತರು ಕೇವಲ ಡಿ.ಎ.ಪಿ ಮೇಲೆ ಅವಲಂಭಿತರಾಗದೆ, ಬದಲಾಗಿ ಪೋಷಕಾಂಶಗಳನ್ನು ಒದಗಿಸುವ, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ದರ್ಜೆಯ ರಸಗೊಬ್ಬರಗಳನ್ನು ಸಂಯೋಜಸಿ ಬಳಕೆ ಮಾಡಬಹುದು. ನೇರ ರಸಗೊಬ್ಬರಗಳಾದ ಯೂರಿಯಾ ಹಾಗೂ ರಾಕ್ ಫಾಸ್ಟೇ್ಟಟ್ ಸಂಯೋಜಿಸಿ ಅಥವ ಕಾಂಪ್ಲೆಕ್ಸ್ ಗೊಬ್ಬರಗಳಾದ 20:20:0:13 ಹಾಗೂ 10:26:26 ಗಳನ್ನು ಸಂಯೋಜಿಸಿ ಡಿ.ಎ.ಪಿ ಗೆ ಪರ್ಯಾಯವಾಗಿ ಬಳಸಬಹುದು.

100 ಕೆ.ಜಿ ಡಿ.ಎ.ಪಿ. ಪೋಷಕಾಂಶ ಒದಗಿಸಲು ಈ ಕೆಳಗಿನ ಯಾವುದೇ ಸಂಯೋಜನೆ ಬಳಸಬಹುದು:

ಮೊದಲ ಸಂಯೋಜನೆ (ನೇರ ರಸಗೊಬ್ಬರ ಬಳಸಿ) ಯೂರಿಯಾ : 40 ಕೆ. ಜಿ ಹಾಗೂ ರಾಕ್ ಫಾಸ್ಪೇಟ್ : 255 ಕೆ.ಜಿ. ಎರಡನೇ ಸಂಯೋಜನೆ (ನೇರ ಹಾಗೂ ಎನ್.ಪಿ ಕಾಂಪ್ಲೆಕ್ಸ್ ಗೊಬ್ಬರ ಬಳಸಿ) ರಾಕ್ ಫಾಸ್ಪೇಟ್ : 150 ಕೆ.ಜಿ. ಹಾಗೂ 20:20:0:13 : 90 ಕೆ.ಜಿ ಮತ್ತು ಮೂರನೇ ಸಂಯೋಜನೆ (ನೇರ ಹಾಗೂ ಎನ್.ಪಿ ಹಾಗೂ ಎನ್.ಪಿ.ಕೆ ಕಾಂಪ್ಲೆಕ್ಸ್ ಗೊಬ್ಬರ ಬಳಸಿ) ರಾಕ್ ಫಾಸ್ಪೇಟ್ : 90 ಕೆ.ಜಿ, 20:20:0:13 : 50 ಕೆ.ಜಿ ಹಾಗೂ 10:26:26 : 75 ಕೆ.ಜಿ. ರಸಗೊಬ್ಬರಗಳ ಸಂಯೋಜನೆಯನ್ನು ಬಳಸಬಹುದು.

ರೈತರು ಯಾವುದೇ ರೀತಿಯ ಆತಂಕಕ್ಕೊಳಗಾಗದೇ ಮೇಲೆ ನೀಡಿರುವ ಪರ್ಯಾಯ ರಸಗೊಬ್ಬರಗಳ ಸಂಯೋಜನೆ ಮೂಲಕ ಬದಲಿ ವ್ಯವಸ್ಥೆ ಮಾಡಿಕೊಳ್ಳಬಹುದು. ಈ ಸಂಯೋಜನೆ ಮೂಲಕ ಗೊಬ್ಬರ ಬಳಸುವುದರಿಂದ ಇಳುವರಿ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲವೆಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

18 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

18 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

19 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

19 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

19 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

20 hours ago