Featured

ಉಡುಪಿ: ಡಿ. 21ರಂದು ಮಿಸ್ಟರ್ ಕರ್ನಾಟಕ-2024 ಹಾಗೂ ಮಿಸ್ಟರ್ ಉಡುಪಿ-2024 ದೇಹದಾರ್ಡ್ಯ ಸ್ಪರ್ಧೆ – vishwanews24

ಉಡುಪಿ: ಡಿ. 21ರಂದು ಮಿಸ್ಟರ್ ಕರ್ನಾಟಕ-2024″ ಹಾಗೂ ಮಿಸ್ಟರ್ ಉಡುಪಿ-2024″ ದೇಹದಾರ್ಡ್ಯ ಸ್ಪರ್ಧೆ

ಉಡುಪಿ: ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ವತಿಯಿಂದ “ಮಿಸ್ಟರ್ ಕರ್ನಾಟಕ-2024″ ಹಾಗೂ ಮಿಸ್ಟರ್ ಉಡುಪಿ-2024” ದೇಹದಾರ್ಡ್ಯ ಸ್ಪರ್ಧೆಯನ್ನು ಇದೇ ಡಿ. 21ರಂದು ಅಂಬಲಪಾಡಿಯ ಶಾಮಿಲಿ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೇಸನ್ ಡಯಾಸ್ ಹೇಳಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ದೇಹದಾರ್ಡ್ಯ ಸ್ಪರ್ಧೆಯು ಮಿ. ಕರ್ನಾಟಕ, ಬೆಸ್ಟ್ ಪೊಸರ್, ದಿವ್ಯಾಂಗ, ಮಾಸ್ಟರ್, ಮೈಕಟ್ಟು ಹಾಗೂ ಮಿ. ಉಡುಪಿ ವಿಭಾಗದಲ್ಲಿ ನಡೆಯಲಿದೆ. ಮಿ. ಕರ್ನಾಟಕ ಸ್ಪರ್ಧೆಯು 55, 60, 65, 70, 75, 80, 85 ಹಾಗೂ 85 ಕೆ.ಜಿ. ಕ್ಕಿಂತ ಮೇಲ್ಪಟ್ಟ ತೂಕದ ವಿಭಾಗದಲ್ಲಿ ನಡೆಯಲಿದ್ದು, ಮಿ. ಕರ್ನಾಟಕ ಟೈಟಲ್ ಪ್ರಶಸ್ತಿ ವಿಜೇತರಿಗೆ 55,555 ನಗದು ಮತ್ತು ಟ್ರೋಫಿ, ರನ್ನರ್ ಅಪ್ ಪ್ರಶಸ್ತಿ ವಿಜೇತರಿಗೆ 22,222 ನಗದು ಬಹುಮಾನ ನೀಡಲಾಗುವುದು. ಪ್ರತಿ ವಿಭಾಗದಲ್ಲಿ ವಿಜೇತರಾಗುವ ಮೊದಲ ಐದು ಸ್ಪರ್ಧಿಗಳಿಗೆ ಕ್ರಮವಾಗಿ 10 ಸಾವಿರ, 8 ಸಾವಿರ, 6 ಸಾವಿರ, 4 ಸಾವಿರ ಹಾಗೂ 2 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.

ಬೆಸ್ಟ್ ಪೊಸರ್ ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗೆ 5,555 ರೂ. ನಗದು ಬಹುಮಾನ ಹಾಗೂ ದಿವ್ಯಾಂಗ ವಿಭಾಗದಲ್ಲಿ ವಿಜೇತರಾಗುವ ಮೊದಲ ಐದು ಸ್ಪರ್ಧಿಗಳಿಗೆ ಕ್ರಮವಾಗಿ 10 ಸಾವಿರ, 8 ಸಾವಿರ, 6 ಸಾವಿರ, 4 ಸಾವಿರ ಹಾಗೂ 2 ಸಾವಿರ ನಗದು ಹಾಗೂ ಭಾಗವಹಿಸುವ ಎಲ್ಲ ದಿವ್ಯಾಂಗ ಸ್ಪರ್ಧಿಗಳಿಗೆ 1,500 ಸಾವಿರ ನಗದು ಬಹುಮಾನ ನೀಡಲಾಗುವುದು.

ಮಾಸ್ಟರ್ ವಿಭಾಗದಲ್ಲಿ 40, 50 ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ವಯೋಮಿತಿಯಲ್ಲಿ ಸ್ಪರ್ಧೆ ನಡೆಯಲಿದ್ದು, ಟೈಟಲ್ ಪ್ರಶಸ್ತಿ ಪಡೆಯುವ ಸ್ಪರ್ಧಿಗೆ 10 ಸಾವಿರ ನಗದು ಹಾಗೂ ಟಾಪ್ 5 ಸ್ಪರ್ಧಿಗಳಿಗೆ ಕ್ರಮವಾಗಿ 5 ಸಾವಿರ, 4 ಸಾವಿರ, 3 ಸಾವಿರ, 2 ಸಾವಿರ ಹಾಗೂ 1 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಪುರುಷರ ಮೈಕಟ್ಟು ವಿಭಾಗದಲ್ಲಿ ಟೈಟಲ್ ಪ್ರಶಸ್ತಿ ಪಡೆಯುವ ಸ್ಪರ್ಧಿಗೆ 22,222 ಸಾವಿರ ನಗದು, ಉಳಿದಂತೆ ದ್ವಿತೀಯ,‌ ತೃತೀಯ, ಚತುರ್ಥ, ಪಂಚಮ ಸ್ಥಾನ ಪಡೆಯುವ ಸ್ಪರ್ಧಿಗಳಿಗೆ ಕ್ರಮವಾಗಿ 11,111 ಸಾವಿರ ನಗದು, 7,777 ಸಾವಿರ ನಗದು, 5,555 ಸಾವಿರ ನಗದು ಹಾಗೂ 3,333 ಸಾವಿರ ನಗದು ಬಹುಮಾನ ನೀಡಲಾಗುವುದು. ಮಿ. ಉಡುಪಿ ಸ್ಪರ್ಧೆಯು 55, 60, 65, 70, 75, 80, 85 ಹಾಗೂ 85 ಕೆ.ಜಿ. ಕ್ಕಿಂತ ಮೇಲ್ಪಟ್ಟ ತೂಕದ ವಿಭಾಗದಲ್ಲಿ ನಡೆಯಲಿದ್ದು, ಟೈಟಲ್ ಪ್ರಶಸ್ತಿ ಪಡೆಯುವ ಸ್ಪರ್ಧಿಗೆ 15 ಸಾವಿರ ನಗದು ಮತ್ತು ಟ್ರೋಫಿ, ರನ್ನರ್ ಅಪ್ ಪ್ರಶಸ್ತಿ ವಿಜೇತರಿಗೆ 7,777 ನಗದು ಹಾಗೂ ಬೆಸ್ಟ್ ಪೊಸರ್ ಗೆ 5,555 ನಗದು ಬಹುಮಾನ ನೀಡಲಾಗುವುದು.

ಪ್ರತಿ ವಿಭಾಗದಲ್ಲಿ ವಿಜೇತರಾಗುವ ಮೊದಲ ಐದು ಸ್ಪರ್ಧಿಗಳಿಗೆ ಕ್ರಮವಾಗಿ 5 ಸಾವಿರ, 4 ಸಾವಿರ, 3 ಸಾವಿರ, 2 ಸಾವಿರ ಹಾಗೂ 1 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಅಂದು ಮಧ್ಯಾಹ್ನ 1.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉದ್ಯಮಿಗಳಾದ ಜೆರ್ರಿ ವಿನ್ಸೆಂಟ್ ಡಯಾಸ್, ಜಿ. ಶಂಕರ್ ಹಾಗೂ ಪುರುಷೋತ್ತಮ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 2 ಗಂಟೆಯಿಂದ ಸ್ಪರ್ಧೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಾಮತ್, ಕೋಶಾಧಿಕಾರಿ ಮಾರುತಿ ಜಿ. ಬಂಗೇರ, ರಾಷ್ಟ್ರೀಯ ತೀರ್ಪುಗಾರರಾದ ಜಾನ್ಸನ್ ಅರುಣ್ ಡಿಸೋಜ, ರಾಘವೇಂದ್ರ ಇದ್ದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago