ಉಡುಪಿ

ಉಡುಪಿ: ತೌಕ್ತೆ ಚಂಡಮಾರುತದಿಂದ ಆಗಿರುವ ಅನಾಹುತಗಳ ಪರಿಶೀಲನೆಗೆ ಕೇಂದ್ರದ ತಂಡ ಆಗಮನ -Vishwanews24

ಉಡುಪಿ: ತೌಕ್ತೆ ಚಂಡಮಾರುತದಿಂದ ಆಗಿರುವ ಅನಾಹುತಗಳ ಪರಿಶೀಲನೆಗೆ ಕೇಂದ್ರದ ತಂಡ ಆಗಮನ -Vishwanews24

ಕುಂದಾಪುರ: ತೌಕ್ತೆ ಚಂಡಮಾರುತದಿಂದ ಆಗಿರುವ ಅನಾಹುತಗಳ ಪರಿಶೀಲನೆಗೆ ಕೇಂದ್ರ ಸರಕಾರದ ಐಎಂಸಿ ಟಿ ತಂಡ ಉಡುಪಿ ಜಿಲ್ಲೆಯಾದ್ಯಂತ ಸರ್ವೇಕ್ಷಣೆ ಕಾರ್ಯವನ್ನು ಗುರುವಾರ ಆರಂಭಿಸಿದೆ.

ತಿಂಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವುಂಟಾಗಿ ತೌಕ್ತೆ ಚಂಡಮಾರುತ ಎದ್ದಿತ್ತು. ಸುಮಾರು ನಾಲ್ಕು ದಿನಗಳ ಕಾಲ ಉಡುಪಿ ಜಿಲ್ಲೆಯ ಉದ್ದಕ್ಕೂ ಭಾರಿ ಗಾಳಿ-ಮಳೆ ಉಂಟಾಗಿತ್ತು. ಸಮುದ್ರ ಕೊರೆತದ ಜೊತೆ ಅಪಾರ ಪ್ರಮಾಣದ ಆಸ್ತಿಪಾಸ್ತಿ, ರಸ್ತೆ , ಕೃಷಿ ಬೆಳೆಗಳು ಹಾನಿಗೀಡಾಗಿದ್ದವು. ಮನೆ ಮೀನುಗಾರಿಕಾ ಶೆಡ್ ಗಳ ಮೇಲೆ ಮರ ಬಿದ್ದು ಹಾನಿ ಉಂಟಾಗಿತ್ತು. ಎಲ್ಲಾ ಅನಾಹುತಗಳ ಪರಿಶೀಲನೆಗಾಗಿ ಕೇಂದ್ರ ಸರಕಾರದ ಐಎಂಸಿ ಟಿ ತಂಡ ಉಡುಪಿ ಜಿಲ್ಲೆಯಾದ್ಯಂತ ಸರ್ವೇಕ್ಷಣೆ ನಡೆಸಿದೆ.

ಶೀರೂರು, ಯಡ್ತರೆ, ಮರವಂತೆ ,ಬೈಂದೂರು ಉಪ್ಪುಂದ ಕಂಚಿಗೋಡ್ ಉಡುಪಿ ಕಾಪು ಪಡುಬಿದ್ರೆ ಭಾಗಗಳಲ್ಲಿ ತೆರಳಿ ಕೇಂದ್ರ ಗ್ರಹ ಇಲಾಖೆಯ ಸುಶೀಲ್ ಪಾಲ್ ನೇತೃತ್ವದ ತಂಡ ಎರಡು ದಿನಗಳ ಕಾಲ ಕರಾವಳಿ ಪ್ರವಾಸ ನಡೆಸಲಿದೆ.

ಕರಾವಳಿಯ ಮೂರು ತಾಲೂಕುಗಳಲ್ಲಿ ಈ ತಂಡ ಅಧ್ಯಯನ ನಡೆಸಿ ವರದಿಯನ್ನು ತಯಾರುಮಾಡಿ ದೆಹಲಿಯಲ್ಲಿ ಗೃಹ ಸಚಿವಾಲಯಕ್ಕೆ ನೀಡಲಿದೆ. ಆನಂತರ ಕೇಂದ್ರ ವಿಶೇಷ ಪರಿಹಾರ ಘೋಷಣೆ ಮಾಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಜಿ ಜಗದೀಶ್, ಎಸಿ ಕೆ. ರಾಜು, ಕೆಎಸ್ಪಿ ಕುಮಾರ ಚಂದ್ರ ಸೇರಿದಂತೆ ಜಿಲ್ಲೆಯ ಕಂದಾಯ ಅಧಿಕಾರಿಗಳು ತಹಶೀಲ್ದಾರ್ ಪರಿಶೀಲನೆ ಸಂದರ್ಭ ಇದ್ದರು.

Vishwa News 24

Recent Posts

ಉದ್ಯಾವರ : ರಸ್ತೆ ದಾಟುತ್ತಿದ್ದಾಗ ಕ್ರೇನ್  ಢಿಕ್ಕಿ ; ಮಹಿಳೆ ಸಾವು – vishwanews24

ಉದ್ಯಾವರ : ರಸ್ತೆ ದಾಟುತ್ತಿದ್ದಾಗ ಕ್ರೇನ್  ಢಿಕ್ಕಿ ; ಮಹಿಳೆ ಸಾವು ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಗುರುವಾರ…

25 minutes ago

ಉಡುಪಿ: ಮಹಾವೀರ ಜಯಂತಿ – ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  – vishwanews24

ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…

21 hours ago

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ – vishwanews24

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ  ಮಾ.31ಕ್ಕೆ ಮುಂದೂಡಿಕೆ…

22 hours ago

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ – vishwanews24

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…

22 hours ago

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ – vishwanews24

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…

23 hours ago

ಬಂಟ್ವಾಳ: ಯುವತಿ ನಾಪತ್ತೆ ; ಪ್ರಕರಣ ದಾಖಲು – vishwanews24

ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…

23 hours ago