Featured

ಉಡುಪಿ, ದಕ್ಷಿಣಕನ್ನಡ : ನಾಲ್ವರು ಅಧಿಕಾರಿ, ಸಿಬಂದಿಗೆ ಮುಖ್ಯಮಂತ್ರಿ ಪದಕ – Vishwanews24

ಉಡುಪಿ, ದಕ್ಷಿಣಕನ್ನಡ : ನಾಲ್ವರು ಅಧಿಕಾರಿ, ಸಿಬಂದಿಗೆ ಮುಖ್ಯಮಂತ್ರಿ ಪದಕ

ನವೀನ್‌ಚಂದ್ರ ಜೋಗಿ
ಸುಳ್ಯ: ಇಲ್ಲಿ ವೃತ್ತ ನಿರೀಕ್ಷಕರಾಗಿದ್ದ ನವೀನ್‌ ಚಂದ್ರ ಜೋಗಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಗುಪ್ತವಾರ್ತೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದ ಇವರು 3 ವರ್ಷಗಳ ಹಿಂದೆ ಸುಳ್ಯ ಪೊಲೀಸ್‌ ವರ್ಗಾವಣೆಗೊಂಡು ಆಗಮಿಸಿದ್ದರು. ಸುಳ್ಯದಲ್ಲಿ ಹಲವಾರು ಪ್ರಕರಣಗಳನ್ನು ಬೇದಿಸಿದ್ದರು. ಉಡುಪಿ -ಕಾಪು ಮೂಲದವರಾದ ಅವರನ್ನು ಚುನಾವಣೆ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾಯಿಸಲಾಗಿದೆ.

ರಾಜೇಂದ್ರ ನಾಯ್ಕ
ಮಲ್ಪೆ: ರಾಜೇಂದ್ರ ನಾಯ್ಕ ಎಂ.ಎನ್‌. ಹೆಜಮಾಡಿ ಕರಾವಳಿ ಕಾವಲು ಪೊಲೀಸ್‌ ಠಾಣೆಯ ಉಪ ನಿರೀಕ್ಷಕರು. 12 ವರ್ಷಗಳ ಹಿಂದೆ ಪೊಲೀಸ್‌ ಇಲಾಖೆಗೆ ಸೇರಿದ ಅವರು ಹೊಸನಗರ ಠಾಣೆಯಿಂದ 6 ತಿಂಗಳ ಹಿಂದೆ ಹೆಜಮಾಡಿಗೆ ವರ್ಗಾವಣೆಗೊಂಡಿದ್ದರು. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಮಂಡಿಕೊಪ್ಪದವರು.

ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪೊಲೀಸ್‌ ಉಪನಿರೀಕ್ಷಕರಾಗಿರುವ ಸಂತೋಷ್‌ ಕುಮಾರ್‌ ಕೆ. ಮತ್ತು ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಆಗಿರುವ ಮಣಿಕಂಠ ಅವರು 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಸಂತೋಷ್‌ ಕುಮಾರ್‌ ಕೆ.
ಬಜಾಲ್‌ ಪಳ್ಳಕೆರೆ ನಿವಾಸಿ ಸಂತೋಷ್‌ 1993ರಲ್ಲಿ ಸೇವೆಗೆ ಸೇರ್ಪಡೆಗೊಂಡು ಹಿಂದೆ ಕುಂದಾಪುರ, ಬರ್ಕೆ, ಪುತ್ತೂರು, ಬರ್ಕೆ, ಪಾಂಡೇಶ್ವರ, ಕದ್ರಿಯಲ್ಲಿ ಸೇವೆ ಸಲ್ಲಿಸಿದ್ದರು. ಡಿಸಿಐಬಿಯಲ್ಲಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಹಲವು ಬಾರಿ ಪುರಸ್ಕಾರ ಪಡೆದುಕೊಂಡಿದ್ದರು.

ಮಣಿಕಂಠ
ಮಣಿಕಂಠ ಮಂಗಳೂರಿನ ಮಂದಾರಬೈಲು ನಿವಾಸಿ. 2000ರಲ್ಲಿ ಸೇವೆಗೆ ಸೇರ್ಪಡೆಗೊಂಡು ಪುತ್ತೂರು ಗ್ರಾಮಾಂತರ, ಬಂದರು, ಪಾಂಡೇಶ್ವರ, ಉರ್ವ ಠಾಣೆ, ಸಂಚಾರ ಪಶ್ಚಿಮ, ಬರ್ಕೆ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Vishwa News 24

Recent Posts

ಕಸದ ಚೀಲ – ವಿಭಿನ್ನ ಕಥೆಯ ಮೂಲಕ ಗಮನ ಸೆಳೆದ ಉಡುಪಿಯ ಯುವ ಬರಹಗಾರ ಸುಮಂತ್ ಗಾಣಿಗ – vishwanews24

‘ಕಸದ ಚೀಲ’ದ ಮೂಲಕ ವಿಭಿನ್ನ ಕಥನ – ಉಡುಪಿಯ ಸುಮಂತ್ ಗಾಣಿಗ ಅವರ ಬರವಣಿಗೆಗೆ ಮೆಚ್ಚುಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ…

18 minutes ago

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ – vishwanews24

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ "ರಕ್ತ, ಬೆವರು ಹರಿಸಿ ಸೇವೆ ಸಲ್ಲಿಸಿದ್ದೇನೆ" : ಸಾಮಾಜಿಕ ಜಾಲತಾಣದಲ್ಲಿ…

52 minutes ago

ಉಡುಪಿ: ಅ.8 ರಂದು ನೇರ ಸಂದರ್ಶನ – vishwanews24

ಉಡುಪಿ: ಅ.8 ರಂದು ನೇರ ಸಂದರ್ಶನ      ಉಡುಪಿ: ನಗರದ ಶಾಂತ ಎಲೆಕ್ಟಿçಕಲ್ಸ್ ಪ್ರೆöÊ.ಲಿ., ಆಭರಣ ಜುವೆರ‍್ಸ್ ಹತ್ತಿರ, ಕಾರ್ಪೋರೇಶನ್ ಬ್ಯಾಂಕ್…

1 hour ago

ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ – vishwanews24

ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ ಕಾರವಾರ  ಇಳಕಲ್ ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ  ಕಡವಾಡ…

1 hour ago

ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳ ಸಾಗಾಟ ; ಓರ್ವ ಅರೆಸ್ಟ್‌, ಇಬ್ಬರು ಪರಾರಿ – vishwanews24

ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳ ಸಾಗಾಟ ; ಓರ್ವ ಅರೆಸ್ಟ್‌, ಇಬ್ಬರು ಪರಾರಿ ಪುತ್ತೂರು: ಯಾವುದೇ ಪರವಾನಿಗೆಯಿಲ್ಲದೆ…

2 hours ago

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

15 hours ago