ಉಡುಪಿ : ಧರ್ಮಸ್ಥಳ ವಿರುದ್ಧ ಷಡ್ಯಂತ್ತ ನಡೆಯುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿಕೆಶಿ ಅವರ ಮಾತಿಗೆ ದನಿಗೂಡಿಸಿರುವ ಸಚಿವೆ ,ಲಕ್ಷ್ಮೀ ಹೆಬ್ಬಾಳ್ಕರ್ ಎಲ್ಲ ಷಡ್ಯಂತ್ರ ಮತ್ತು ಅಪಪ್ರಚಾರಗಳಿಗೆ ಪೂರ್ಣ ವಿರಾಮ ಬೀಳಲೇಬೇಕು ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾವೆಲ್ಲ ಧರ್ಮಸ್ಥಳದ ಭಕ್ತರು. ಹೆಗ್ಗಡೆಯವರ ಸಾಮಾಜಿಕ ಕೆಲಸ ಮೆಚ್ಚಿಕೊಂಡವರು. ಇದೀಗ ಎಸ್ಐಟಿ ತನಿಖೆ ನಡೆಯುತ್ತಿದೆ. ಷಡ್ಯಂತ್ರದ ಬಗ್ಗೆ ಡಿಸಿಎಂ ಅವರಿಗೆ ಗೊತ್ತಿದೆ. ನಾನು ಅವರ ಹೇಳಿಕೆಗೆ ದನಿಗೂಡಿಸುತ್ತೇನೆ. ಸದನದ ಒಳಗೂ ಡಿಕೆಶಿ ಷಡ್ಯಂತ್ರ ಅಂತ ಹೇಳಿದ್ದಾರೆ. ಎಲ್ಲದಕ್ಕೂ ಪೂರ್ಣವಿರಾಮ ಬೇಕು ಎಂದು ಹೇಳಿದರು.
ಷಡ್ಯಂತ್ರ ಮಾಡಿದವರಿಗೆ ಅಲ್ಲಿ ಏನೂ ಇಲ್ಲ ಎಲ್ಲ ಭೋಗಸ್ ಎಂದು ಗೊತ್ತಾಗಬೇಕು. ಸೋಶಿಯಲ್ ಮೀಡಿಯಾಗಳಲ್ಲೂ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ,ಇದನ್ನು ನೀವೂ ಗಮನಿಸಿರಬಹುದು. ಸೌಜನ್ಯ ವಿಚಾರದಲ್ಲಿ ಒಬ್ಬ ಹೆಣ್ಣುಮಗಳಾಗಿ ನಾನು ಅವಳ ನ್ಯಾಯಕ್ಕೆ ಒತ್ತಾಯಿಸುತ್ತೇನೆ. ಆದರೆ ಈ ಅನಾಮಿಕ ಯಾರು? ಇವತ್ತು ಇಲ್ಲಿ ತೋರಿಸ್ತಾನೆ , ನಾಳೆ ಅಲ್ಲಿ ಇದೆ ಅಂತಾನೆ. ಇದಕ್ಕೆಲ್ಲ ಒಂದು ಪೂರ್ಣವಿರಾಮ ಬೇಕು ಎಂದು ಹೆಬ್ಬಾಳ್ಕರ್ ಹೇಳಿದರು.
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…