Featured

ಉಡುಪಿ: ನನ್ನದೇ ಚುನಾವಣೆ ಎಂಬ ರೀತಿಯಲ್ಲಿ ಯಶ್‌ಪಾಲ್  ಜೊತೆ ಪ್ರಚಾರ ಕಾರ್ಯ ನಡೆಸುತ್ತೇನೆ : ರಘುಪತಿ ಭಟ್ – Vishwanews24

ಉಡುಪಿ: ನನ್ನದೇ ಚುನಾವಣೆ ಎಂಬ ರೀತಿಯಲ್ಲಿ ಯಶ್‌ಪಾಲ್ ಜೊತೆ ಪ್ರಚಾರ ಕಾರ್ಯ ನಡೆಸುತ್ತೇನೆ : ರಘುಪತಿ ಭಟ್

ಉಡುಪಿ: ಯಶಪಾಲ್ ಸುವರ್ಣ ಅವರ ಜೊತೆಯಲ್ಲಿ ನಾನು ಚುನಾವಣೆಯ ದಿನದವರೆಗೂ ನನ್ನದೇ ಚುನಾವಣೆ ಎಂಬ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.

ಯಶಪಾಲ್ ಸುವರ್ಣ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 60,000 ಮತಗಳ ಅಂತರದಲ್ಲಿ ಯಶಪಾಲ ಸುವರ್ಣ ಗೆಲ್ಲುತ್ತಾರೆ. ಇವತ್ತಿನಿಂದ ಸಂಘಟನಾತ್ಮಕ‌ ಕಾರ್ಯ ಚಟುವಟಿಕೆ ಪ್ರಾರಂಭ. ಪ್ರತಿ ಮಟ್ಟದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುತ್ತೇನೆ. ಎಲ್ಲರೂ ಕೂಡ ಒಂದೇ ಮನಸ್ಸಿನಿಂದ ಕೆಲಸ ಮಾಡುತ್ತೇವೆ. ಎಲ್ಲಾ ಗೊಂದಲಗಳನ್ನು ಮರೆತು ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಇನ್ನು ನಿನ್ನೆ ನಾನು ಭಾವನಾತ್ಮಕವಾಗಿ ಬೇಸರದಿಂದ ಮಾತನಾಡಿದ್ದೆ. ಅಪ್ಪ ಅಮ್ಮ ಬೈದಾಗ ಬೇಸರ ಆಗುತ್ತೆ, ಅಮ್ಮನಿಗೆ ವಾಪಸ್ ಬೈತೇವೆ. ಬಳಿಕ ಅವರ ಜೊತೆಯಾಗಿ ಮಲಗುತ್ತೇನೆ. ನನ್ನ ಅಭಿಮಾನಿಗಳು ಬಿಜೆಪಿ ಅಭಿಮಾನಿಗಳಲ್ಲಿ ವಿನಂತಿ ಏನೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಬೇಡ ನಿಲ್ಲಿಸೋಣ. ಇನ್ನು ಮುಂದೆ ಸುವರ್ಣರನ್ನು ಗೆಲ್ಲಿಸುವ ವಾಟ್ಸಪ್ ಮೆಸೇಜ್ ಮಾಡೋಣ.ನೂರಕ್ಕೆ ನೂರು ಉಡುಪಿ ವಿಧಾನಸಭಾ ಕ್ಷೇತ್ರ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ನನಗೆ ಕರೆ ಮಾಡಿದ್ದರು. ಸಿಎಂ ಮಾತನಾಡಿ ಸರಿಪಡಿಸುವ ವಿಷಯ ಏನು ಇಲ್ಲ. ಯಾವುದೇ ಟ್ರಬಲ್ ಇಲ್ಲ ಟ್ರಬಲ್ ಶೂಟರ್ ಕೂಡ ಇಲ್ಲ. ಪಕ್ಷ ಕೊಟ್ಟ ಅಭ್ಯರ್ಥಿಯ ಜೊತೆ ಕೆಲಸ ಮಾಡುವ ಎರಡನೇ ಅವಕಾಶ ಸಿಕ್ಕಿದೆ. ನಾನು ಅಭ್ಯರ್ಥಿಯಾದರೆ ಎಷ್ಟು ಸ್ಪೀಡ್ ನಲ್ಲಿ ಕೆಲಸ ಮಾಡುತ್ತೇನೋ ಅದೇ ರೀತಿ ಕೆಲಸ ಮಾಡುತ್ತೇನೆ. ಪಕ್ಷ ನಮಗೆ ಒಳ್ಳೆಯ ಅಭ್ಯರ್ಥಿ ಕೊಟ್ಟಿದ್ದಾರೆ. ಪಕ್ಷ ನನಗೆ ಮೂರು ಬಾರಿ ಶಾಸಕನಾಗುವ ಅವಕಾಶ ಕೊಟ್ಟಿದೆ. ಸಾಮಾನ್ಯ ಕುಟುಂಬದಿಂದ ಬಂದವ ಮೂರು ಬಾರಿ ಶಾಸಕನಾಗಿದ್ದು ದೊಡ್ಡ ವಿಷಯ. ಇನ್ನು ಮುಂದೆ ನಾನು ಅಸಮಾಧಾನದ ಮಾತನಾಡುವುದು ಸರಿಯಲ್ಲ ಎಂದರು.

ಯಡಿಯೂರಪ್ಪ ಅವರು ಕರೆಮಾಡುವ ಮುಂಚೆ ನಾನು ಕೆಲಸ ಆರಂಭಿಸಿದ್ದೆ. ನೀನು ಒಳ್ಳೆ ಕಾರ್ಯಕರ್ತ, ನಿನಗೆ ಒಳ್ಳೆ ಭವಿಷ್ಯ ಇದೆ ಎಂದು ಭರವಸೆ ನೀಡಿದ್ದಾರೆ. ಬಿ ಎಲ್ ಸಂತೋಷ್ ಟ್ವೀಟ್ ಮೂಲಕ ನನ್ನ ನಡೆಯನ್ನು ಪ್ರಶಂಶಿಸಿದ್ದಾರೆ. ಇದು ನನಗೆ ತುಂಬಾ ಹೆಮ್ಮೆಯ ವಿಷಯ ಎಂದರು.

Vishwa News 24

Recent Posts

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…

3 hours ago

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು – vishwanews24

ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…

5 hours ago

ಹಜ್ ಯಾತ್ರೆ – 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ – vishwanews24

ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…

5 hours ago

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  – vishwanews24

ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್‌ ಅಲರ್ಟ್ ಘೋಷಣೆ  ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…

6 hours ago

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ – vishwanews24

ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್‌: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…

6 hours ago

ಬ್ರಹ್ಮಾವರ : ಭೀಕರ ರಸ್ತೆ ಅಪಘಾತ ; ಖ್ಯಾತ ಹುಲಿ ವೇಷ ಕಲಾವಿದ ಸಾವು – vishwanews24

ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…

6 hours ago