Featured

ಉಡುಪಿ: ನಾರಾಯಣ ಗುರುಗಳ ಬಗೆಗಿನ ಪಠ್ಯ ಪುಸ್ತಕ ಕೈ ಬಿಡುವುದು ಬಿಜೆಪಿ ಡೋಂಗಿ ಎಂದು ತೋರಿಸುತ್ತದೆ : ದೀಪಕ್‌ ಕೋಟ್ಯಾನ್ – Vishwanews24

ದೀಪ ಆರುವ ಮುಂಚೆ ಜೋರಾಗಿ ಉರಿಯುವ ರೀತಿ ಬಿಜೆಪಿ ಪರಿಸ್ಥಿತಿ ..

ಬಿಲ್ಲವರ ಬಗ್ಗೆ ಬರೇ ಭಾಷಣ ಮಾಡಿದ ಕಾರ್ಕಳ ದ ಬಿಲ್ಲವ ಹಾಗೂ ಬಿಜೆಪಿಯ ಬಿಲ್ಲವ ಮುಖಂಡರು ಈಗ ಮಾತನಾಡಲಿ

ಉಡುಪಿ: ದೀಪ ಆರುವ ಮುಂಚೆ ಜೋರಾಗಿ ಉರಿಯುವ ರೀತಿ ಬಿಜೆಪಿ ಪರಿಸ್ಥಿತಿ ಯಾಗಿದೆ. ನಾರಾಯಣ ಗುರುಗಳ ಪಠ್ಯ ವನ್ನು ಕೈ ಬಿಟ್ಟಿರುವುದು ಬಿಜೆಪಿ ಯದ್ದು ವಿನಾಶಕಾಲೆ ವಿಪರೀತ ಬುದ್ದಿ ಎಂದು ತೋರಿಸುತ್ತದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್‌ ಕೋಟ್ಯಾನ್‌ ಅವರು ಹೇಳಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಅವರು, ದೇಶದಲ್ಲಿ ತೀವ್ರವಾದ ಅಸ್ಪೃಶ್ಯ , ಶೋಷಣೆ ಇದ್ದ ಸಮಯದಲ್ಲಿ ಪೆರಿಯರ್ ಹಾಗೂ ನಾರಾಯಣ ಗುರುಗಳಂತವರು ಕ್ರಾಂತಿ ಮಾಡಿದ್ದರು. ಆ ಸಮಯದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ ಮಾಡುವುದು ಕಷ್ಟದ ಕೆಲಸ ವಾಗಿತ್ತು. ಶೋಷಣೆ ಗೆ ಒಳಗಾಗಿದ್ದ ಬಿಲ್ಲವ ಸಮಾಜವನ್ನು ಮುಖ್ಯವಾಗಿ ಸಿಕೊಂಡು ಅಸ್ಪೃಶ್ಯ ತೆಯಿಂದ ನೊಂದಿದ್ದ ಇತರ ಸಮುದಾಯಕ್ಕೂ ದಾರಿ ದೀಪವಾದವರು. ಆದ್ದರಿಂದ ಅವರ ಬಗೆಗಿನ ಪಠ್ಯ ಪುಸ್ತಕ ಕೈ ಬಿಡುವುದು ಬಿಜೆಪಿ ಡೋಂಗಿ ಎಂದು ತೋರಿಸುತ್ತದೆ ಎಂದರು.

ಅಂದು ನಾರಾಯಣ ಗುರುಗಳ ಟ್ಯಾಬ್ಲೋ ಧಿಕ್ಕರಿಸಿ ದವರು ಇಂದು ಪಠ್ಯ ಕೈಬಿಟ್ಟಿದ್ದಾರೆ ಎಂದ ಅವರು, ಬಿಲ್ಲವರ ಬಗ್ಗೆ ಬರೇ ಭಾಷಣ ಮಾಡಿ ಹೋಟೆಲ್ ಕೇಳಿದ ಕೆಲವು ಕಾರ್ಕಳ ದ ಬಿಲ್ಲವ ನಾಯಕರು ಹಾಗೂ ಬಿಜೆಪಿಯ ಬಿಲ್ಲವ ಮುಖಂಡರು ಈಗ ಮಾತನಾಡಲಿ ಎಂದು ಸವಾಲು ಹಾಕಿದರು.

ಶಿವಮೊಗ್ಗ ದ ವಿಮಾನ ನಿಲ್ದಾಣ ಕ್ಕೆ ಯಡಿಯೂರಪ್ಪ ಹೆಸರು ಸೂಚಿಸುವ ಇವರ ಮಂತ್ರಿ ಮಂಡಲದ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳು ಮತ್ತು ಮಂಗಳೂರು ವಿಮಾನ ನಿಲ್ದಾಣ ಕ್ಕೆ ಕೋಟಿ ಚೆನ್ನಯ್ಯ ಹೆಸರಿಡಲು ಕೇಳಲು ಮಾತು ಬರುವುದಿಲ್ಲವೇ ಎಂದು ಕೇಳಬೆಕಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಹಿಂದುಳಿದ ವರ್ಗದವರನ್ನು ಮುಗಿಸುವ ಹಾಗೂ ಮೇಲ್ವರ್ಗದ ವರನ್ನು ಜೀವಂತ ಇಡುವ ಉದ್ದೇಶದಿಂದ ಅವರು ಈ ರೀತಿಯಲ್ಲಿ ಬಿಜೆಪಿ ವರ್ತಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago