Featured

ಉಡುಪಿ: ನಾಳೆ (ಶುಕ್ರವಾರ ) ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 5 ಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿ -Vishwanews24

ಉಡುಪಿ: ನಾಳೆ (ಶುಕ್ರವಾರ ) ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 5 ಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿ -Vishwanews24

ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ..

ಉಡುಪಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿ ಮಾಡಿ ಮಾರ್ಗಸೂಚಿ ಯನ್ನು ಪ್ರಕಟಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ ಹಾಗೂ ಪ್ರತೀ ಶುಕ್ರವಾರ ರಾತ್ರಿ 9 ಗಂಟೆಯಿಂದ ಪ್ರತಿ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ನ್ನು ಸೆ.13 ರವರೆಗೆ ಅನ್ವಯವಾಗುವಂತೆ ಜಾರಿ ಮಾಡಿ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಆದೇಶ ಹೊರಡಿಸಿದ್ದಾರೆ.

ಸ್ಪರ್ಧಾತ್ಮಕ ತರಬೇತಿಗಳಿಗೆ ಮಾತ್ರ ಈಜು ಕೊಳಗಳನ್ನು ತೆರೆಯಲು ಅನುಮತಿಸಿದೆ. ಕ್ರೀಡಾಪಟುಗಳ ಅಭ್ಯಾಸಕ್ಕೆ ಮಾತ್ರ ಕ್ರೀಡಾ ಸಂಕೀರ್ಣಗಳನ್ನು/ ಸ್ಟೇಡಿಯಂಗಳನ್ನು ತೆರೆಯಲು ಅನುಮತಿಸಿದೆ. ಆದರೆ ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ.

ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಇತರೆ ಸಭೆಗಳು ಹಾಗೂ ಸಮಾರಂಭಗಳು ಮತ್ತು ಸಾರ್ವಜನಿಕರು ಒಟ್ಟುಗೂಡುವುದನ್ನು ನಿರ್ಬಂಧಿಸಲಾಗಿದೆ.

ಪಬ್‌ ಗಳಿಗೆ ಅನುಮತಿ ಇರುವುದಿಲ್ಲ.

ಮದುವೆ/ ಕೌಟುಂಬಿಕ ಶುಭ ಸಮಾರಂಭಗಳಿಗೆ ಸರ್ಕಾರದ ಹಿಂದಿನ ಮಾರ್ಗಸೂಚಿಯಂತೆ ಈ ಕೆಳಗೆ ನಿಗದಿಪಡಿಸಿದ ಷರತ್ತಿ ಗೊಳಪಟ್ಟು ಸಭಾಂಗಣದ ಸಾಮರ್ಥ್ಯದ ಶೇ 50 ರಷ್ಠು ಮತ್ತು ಗರಿಷ್ಠ 400 ಜನರಿಗೆ ಮೀರದಂತೆ ನಡೆಸಲು ಅನುಮತಿಸಲಾಗಿದೆ. ಮದುವೆ/ ಕೌಟುಂಬಿಕ ಶುಭ ಸಮಾರಂಭಗಳನ್ನು ಆಯೋಜಿಸುವವರು ಆಮಂತ್ರಣ ಪತ್ರ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳೊಂದಿಗೆ ಸಹಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಹಶೀಲ್ದಾರ್ ಅವರಿಗೆ ಸಲ್ಲಿಸಬೇಕು. ಅರ್ಜಿಯ ಸ್ವೀಕೃತಿಯ ಮೇರೆಗೆ, ತಹಶೀಲ್ದಾರರು ಪ್ರತಿ ಮದುವೆ/ ಕೌಟುಂಬಿಕ ಶುಭ ಸಮಾರಂಭ ಕಾರ್ಯಕ್ರಮಕ್ಕೆ 400 ಪಾಸ್‌ಗಳನ್ನು ನೀಡಬೇಕು. ಪಾಸ್ ಹೊಂದಿರುವ ಜನರಿಗೆ ಮಾತ್ರ ಮದುವೆ/ ಕೌಟುಂಬಿಕ ಶುಭ ಸಮಾರಂಭ ಕಾರ್ಯಕ್ಕೆ ಹಾಜರಾಗಲು ಅವಕಾಶವಿರುತ್ತದೆ ಮತ್ತು ಪಾಸ್ ಅನ್ನು ವರ್ಗಾಯಿಸಲು ಅವಕಾಶವಿರುವುದಿಲ್ಲ. ಮದುವೆ/ ಕೌಟುಂಬಿಕ ಶುಭ ಸಮಾರಂಭ ಕಾರ್ಯಕ್ಕೆ ಹಾಜರಾಗುವ ಜನರು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಅವರ ಪಾಸ್‌ಗಳನ್ನು ಅಧಿಕೃತ ಪರಿಶೀಲನಾ ಅಧಿಕಾರಿಗಳಿಗೆ ತೋರಿಸುವುದು.

ಅಂತ್ಯ ಸಂಸ್ಕಾರಕ್ಕೆ 20 ಜನಕ್ಕೆ ಮೀರದಂತೆ ನಡೆಸಲು ಅನುಮತಿಸಲಾಗಿದೆ.

ಪೂಜಾ ಸ್ಥಳಗಳಾದ ದೇವಾಲಯಗಳು, ಮಸೀದಿಗಳು, ಚರ್ಚುಗಳು, ಗುರುದ್ವಾರಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿಸಲಾಗಿದೆ. ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಅನುಮತಿಸಿದೆ. ಆದರೆ, ಸದರಿ ಧಾರ್ಮಿಕ ಸ್ಥಳಗಳಲ್ಲಿ ಜಾತ್ರೆಗಳು, ದೇವಾಲಯ ಉತ್ಸವಗಳು/ಹಬ್ಬಗಳು, ಮೆರವಣಿಗೆಗಳು ಮತ್ತು ಒಟ್ಟುಗೂಡುವುದನ್ನು ನಿರ್ಬಂಧಿಸಲಾಗಿದೆ.

ಕೋವಿಡ್-19 ಮಾರ್ಗ ಸೂಚಿಯಂತೆ ಶೇ. 100 ರಷ್ಟು ಆಸನ ಸಾಮರ್ಥ್ಯದವರೆಗೆ ಸಾರ್ವಜನಿಕ ಸಾರಿಗೆಗಳಿಗೆ ಅನುಮತಿಸಲಾಗಿದೆ.

9.ಎಲ್ಲಾ ಅಂಗಡಿಗಳು, ರೆಸ್ಟೋರೆಂಟ್ ಗಳು, ಮಾಲ್ ಗಳು, ಖಾಸಗಿ ಕಚೇರಿಗಳು ಮತ್ತು ಮುಚ್ಚಿದ ಸ್ಥಳಗಳಲ್ಲಿ, ಕೋವಿಡ್-19 ಸೂಕ್ತ ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ಕ್ರಮ ಕೈಕೊಳ್ಳಲಾಗುವುದು.

ಸಿನೆಮಾ ಹಾಲ್‌ಗಳು / ಮಲ್ಟಿಪ್ಲೆಕ್ಸ್‌ಗಳು / ಚಿತ್ರಮಂದಿರಗಳು / ರಂಗಮಂದಿರಗಳು / ಸಭಾಂಗಣಗಳಲ್ಲಿ ಶೇ. 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿಯನ್ನು ನೀಡಲಾಗಿದೆ.

ಅಮ್ಯೂಸ್‌ ಮೆಂಟ್‌ ಪಾರ್ಕ್‌ ಮತ್ತು ಅಂತಹ ಇತರ ಸ್ಥಳಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಈ ಪೈಕಿ ಜಲ ಕ್ರೀಡೆ/ಜಲ ಸಂಬಂಧಿತ ಸಾಹಸ ಚಟುವಟಿಕೆ (water sports/water related adventure activities) ಗಳಿಗೆ ಅನುಮತಿ ಇರುವುದಿಲ್ಲ.

ವಿದ್ಯಾಭ್ಯಾಸದ ಸಲುವಾಗಿ ಕೇರಳ ರಾಜ್ಯದಿಂದ ಉಡುಪಿ ಜಿಲ್ಲೆಗೆ ಆಗಮಿಸುವ ನರ್ಸಿಂಗ್‌, ಮೆಡಿಕಲ್‌, ಇಂಜಿನಿಯರಿಂಗ್‌, ಪ್ಯಾರಾ ಮೆಡಿಕಲ್‌ ಒಳಗೊಂಡಂತೆ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರವೇಶಿಸುವ ಪೂರ್ವದಲ್ಲಿ 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್‌ -19 RTPCR ನೆಗೆಟಿವ್‌ ವರದಿಯನ್ನು ಹೊಂದಿರುವುದು. ಮತ್ತು 7 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ ಒಳಪಡುವುದು ಹಾಗೂ ಕೊನೆಯ ದಿನ RTPCR ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವುದು.

ಉಡುಪಿ ಜಿಲೆಯಲ್ಲಿ ಉದ್ಯೋಗ ಹೊಂದಿದ್ದು, ಕೇರಳ ರಾಜ್ಯದಿಂದ ಉಡುಪಿ ಜಿಲ್ಲೆಗೆ ಆಗಮಿಸುವ ಅಥವಾ ಉಡುಪಿಗೆ ಪ್ರವೇಶಿಸುವ ಹಿಂದಿನ 7 ದಿನಗಳಲ್ಲಿ ಕೇರಳ ರಾಜ್ಯಕ್ಕೆ ಭೇಟಿ ನೀಡಿದ ಎಲ್ಲಾ ಉದ್ಯೋಗಿಗಳಿಗೆ ಮೇಲಿನ 12ನೇ ವಾಕ್ಯವೃಂದದ ಮಾರ್ಗಸೂಚಿಗಳು ಅನ್ವಯವಾಗುತ್ತದೆ. ಇವುಗಳನ್ನು ಜ್ಯಾರಿಗೊಳಿಸುವುದು ಆಯಾ ಆಡಳಿತ ಮಂಡಳಿಗಳು / ಉದ್ಯೋಗದಾತರ ಜವಾಬ್ದಾರಿ ಯಾಗಿರುತ್ತದೆ.

ನೈಟ್‌ ಕರ್ಫ್ಯೂ ಮಾರ್ಗಸೂಚಿಗಳು :

1) ರಾತ್ರಿ 9.00 ರಿಂದ ಮುಂಜಾನೆ 5 ರ ನಡುವೆ ಅಗತ್ಯ ಚಟುವಟಿಕೆಗಳಿಗೆ ಹೊರತುಪಡಿಸಿ ಜನರ ಓಡಾಟಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

2) ರೋಗಿಗಳು ಮತ್ತು ಅವರೊಂದಿಗಿರುವ ಪರಿಚಾರಕರು–ತುರ್ತು ಅಗತ್ಯತೆಗಾಗಿ ವ್ಯಕ್ತಿಗಳನ್ನು ಸ್ಥಳಾಂತರಿಸಲು ಅನುಮತಿಸಿದೆ.

3) ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕೈಗಾರಿಕೆಗಳು / ಕಂಪನಿಗಳಿಗೆ, ರಾತ್ರಿ ಸಮಯದಲ್ಲಿ ಕಾರ್ಯಾಚರಿಸಲು ಅನುಮತಿಯನ್ನು ನೀಡಲಾಗಿದೆ. ಹಾಗೂ ಅಂತಹ ಸಂಸ್ದೆಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರ, ಸಂಸ್ಧೆಯಿಂದ ನೀಡಲಾದ ಸೂಕ್ತ ಗುರುತಿನ ಚೀಟಿ / ಅನುಮತಿಗೆ ಸಂಬಂಧಿಸಿದ ದಾಖಲೆಯನ್ನು ಸಲ್ಲಿಸುವ ಮೂಲಕ ಸಂಚರಿಸಬಹುದಾಗಿದೆ.

4) ದೂರವಾಣಿ ಹಾಗೂ ಅಂತರ್ಜಾಲ ಸೇವೆಯನ್ನು ಒದಗಿಸುವ ನೌಕರರು ಹಾಗೂ ವಾಹನಗಳನ್ನು ತಮ್ಮ ಸಂಸ್ಧೆಯಿಂದ ಪಡೆದಿರುವ ಸೂಕ್ತ ಗುರುತಿನ ಚೀಟಿಯನ್ನು ಸಲ್ಲಿಸಿ ಸಂಚರಿಸಬಹುದಾಗಿದೆ. ಮಾಹಿತಿ ತಂತ್ರಜ್ಜಾನ ಮತ್ತು ಮಾಹಿತಿ ತಂತ್ರಜ್ಜಾನ ಆಧಾರಿತ ಕಂಪನೆ / ಸಂಸ್ದೆ ( IT and ITeS companies /organization) ಗಳಲ್ಲಿ ಕಾರ್ಯ ನಿರ್ವಹಿಸುವ ಅಗತ್ಯ ಸಿಬ್ಬಂದಿ ಹಾಗೂ ಕಾರ್ಮಿಕರನ್ನು ಹೊರತುಪಡಿಸಿ ಇತರೆ ಸಿಬ್ಬಂದಿ ಹಾಗೂ ಕೆಲಸಗಾರರು ಮನೆಗಳಲ್ಲಿಯೇ ಕಾರ್ಯನಿರ್ವಹಿಸುವುದು (work from home)

5) ವೈದ್ಯಕೀಯ, ತುರ್ತು ಹಾಗೂ ಔಷಧಾಲಯಗಳನ್ನು ಒಳಗೊಂಡ ಅವಶ್ಯಕ ಸೇವೆಗಳು ಯಥಾ ರೀತಿಯಲ್ಲಿ ಸರಕಾರದ ನಿಯಮಗಳೊಂದಿಗೆ ಕಾರ್ಯನಿರ್ವಹಿಸವುದು. ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಿದೆ.

6) ಎಲ್ಲಾ ತರಹದ ಟ್ರಕ್ ಗಳಲ್ಲಿ ಸಾಗಿಸುವ ಸರಕಗಳು, ಸರಕು ವಾಹನ ಅಥವಾ ಇತರೆ ಸರಕು ಸಾಗಾಟ ವಾಹನಗಳು , ಖಾಲಿ ವಾಹನಗಳನ್ನು ಒಳಗೊಂಡು ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇ-ಕಾಮರ್ಸ್ ಕಂಪನಿಗಳು ಹಾಗೂ ಹೋಮ್ ಡೆಲಿವರಿ ಕೆಲಸವನ್ನು ಮುಂದುವರೆಸಲು ಅನುಮತಿಸಿದೆ.

7) ಬಸ್ ಸೇವೆಗಳು, ರೈಲುಗಳು ಮತ್ತು ವಿಮಾನ ಪ್ರಯಾಣವನ್ನು ಅನುಮತಿಸಲಾಗಿದೆ .ವಿಮಾನ ನಿಲ್ದಾಣಕ್ಕೆ, ರೈಲ್ವೆ ನಿಲ್ದಾಣಕ್ಕೆ ,ಬಸ್ ನಿಲ್ದಾಣಕ್ಕೆ ಹಾಗೂ ವಿಮಾನ ನಿಲ್ದಾಣಗಳಿಂದ, ರೈಲ್ವೆ ನಿಲ್ದಾಣಗಳಿಂದ , ಬಸ್ ನಿಲ್ದಾಣಗಳಿಂದ ಹೊರಡುವ ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಓಡಾಟವನ್ನು ಅನುಮತಿಸಿದೆ. ಪ್ರಯಾಣ ಮಾಡುವ ಸಂಧರ್ಭದಲ್ಲಿ ಪ್ರಯಾಣಿಕರು ಸೂಕ್ತ ಪ್ರಯಾಣದ ದಾಖಲೆಗಳು / ಟಿಕೆಟುಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.”

Vishwa News 24

Recent Posts

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ – vishwanews24

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…

6 hours ago

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ – vishwanews24

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…

7 hours ago

ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ – vishwanews24

ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಉಡುಪಿ:ಮುದರಂಗಡಿ…

8 hours ago

ಟೈಮಿಂಗ್‌ ವಿವಾದ: ಕಾಪು ಸರ್ವಿಸ್ ರಸ್ತೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ – vishwanews24

ಟೈಮಿಂಗ್‌ ವಿವಾದ: ಕಾಪು ಪೇಟೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ ; ಸ್ಥಳೀಯರಲ್ಲಿ ಆತಂಕ ಕಾಪು: ರಾಷ್ಟ್ರೀಯ…

9 hours ago

ಉಡುಪಿ: ‘ಭಗವತಿ ಟೂರಿಸ್ಟ್’ ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ – vishwanews24

ಉಡುಪಿ: 'ಭಗವತಿ ಟೂರಿಸ್ಟ್' ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ…

9 hours ago

ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ – vishwanews24

ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ ಮಂಗಳೂರು: ಇಲ್ಲಿನ ಬಾರ್ ಒಂದರಲ್ಲಿ ತಲವಾರು…

9 hours ago