Featured

ಉಡುಪಿ: ಪರೇಶ್ ಮೇಸ್ತ ಸಹಜ ಸಾವು ಅನ್ನೋದು ತಪ್ಪು , ಈ ವರದಿಯಿಂದ ಹಿಂದೂ ಸಮಾಜಕ್ಕೆ, ಆತನ ಕುಟುಂಬಕ್ಕೆ ತೀರಾ ಅನ್ಯಾಯವಾಗಿದೆ : ಪ್ರಮೋದ್ ಮುತಾಲಿಕ್

ಪರೇಶ್ ಮೇಸ್ತನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ..

ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷಗಳನ್ನು ನಾಶ ಮಾಡಿದೆ..

ಈ ವರದಿಯಿಂದ ಹಿಂದೂ ಸಮಾಜಕ್ಕೆ, ಆತನ ಕುಟುಂಬಕ್ಕೆ ತೀರಾ ಅನ್ಯಾಯವಾಗಿದೆ..

ಪರೇಶ್ ಮೇಸ್ತ ಕೇಸ್‌ನ್ನು ಕೇಂದ್ರ ಸರ್ಕಾರ ರೀ ಓಪನ್ ಮಾಡಬೇಕು..

ಉಡುಪಿಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹ..

ಉಡುಪಿ: ಪರೇಶ್ ಮೇಸ್ತನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷಗಳನ್ನು ನಾಶ ಮಾಡಿದೆ. ಕೇಂದ್ರ ಸರ್ಕಾರ ಕೇಸ್‌ನ್ನು ರೀ ಓಪನ್ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಪರೇಶ್ ಮೇಸ್ತ ಕೊಲೆಯಲ್ಲ ಆಕಸ್ಮಿಕ ಸಾವು ಎಂಬುದಾಗಿ ಸಿಬಿಐ ಸಲ್ಲಿಸಿದ ವರದಿ ವಿಚಾರವಾಗಿ ಉಡುಪಿಯಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಸಹಜ ಸಾವು ಅನ್ನೋದು ತಪ್ಪು. ಈ ಪ್ರಕ್ರಿಯೆಯಲ್ಲಿ ಅನ್ಯಾಯವಾಗಿದೆ. ನಾನು ಇದನ್ನು ಧಿಕ್ಕರಿಸುತ್ತೇನೆ, ವಿರೋಧಿಸುತ್ತೇನ. ಇದು ಅತ್ಯಂತ ಮೋಸ ಮಾಡಿದ ವರದಿಯಾಗಿದ್ದು, ಪರೇಶ್ ಮೇಸ್ತಾನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷಗಳನ್ನು ನಾಶ ಮಾಡಿದೆ ಎಂದು ಆಪಾದಿಸಿದರು.

ಪರೇಶ್ ಮೇಸ್ತ ಕೊಲೆಯಲ್ಲ ಆಕಸ್ಮಿಕವಾಗಿ ನಡೆದ ಸಾವು : ಸಿಬಿಐ – Vishwanews24

ತಪ್ಪತಸ್ಥರು ಮುಸ್ಲಿಂ ಗೂಂಡಾ ಕಿಡಿಗೇಡಿಗಳು. ಈ ವರದಿಯಿಂದ ಹಿಂದೂ ಸಮಾಜಕ್ಕೆ, ಆತನ ಕುಟುಂಬಕ್ಕೆ ತೀರಾ ಅನ್ಯಾಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

2017ರಲ್ಲಿ ಪರೇಶ್ ಮೆಸ್ತ ಹತ್ಯೆಯಾಯಿತು. ಇಡೀ ರಾಜ್ಯಾದ್ಯಂತ ಹಿಂದುಗಳ ಆಕ್ರೋಶ ಪ್ರತಿಭಟನೆ ನಡೆಯಿತು. ಗೃಹ ಸಚಿವ ಅಮಿತ್ ಶಾ ಕೂಡ ಅವರ ಮನೆಗೆ ಭೇಟಿ ಕೊಟ್ಟರು. ಆ ಪ್ರಕರಣ ನಡೆದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಪ್ರಕರಣವನ್ನು 2019ರಲ್ಲಿ ಸಿಬಿಐಗೆ ಒಪ್ಪಿಸಲಾಯಿತು. ಮೂರು ವರ್ಷದ ನಂತರ ಸಿಬಿಐ ಬಿ ರಿಪೋರ್ಟ್ ಹಾಕಿದೆ. ಆದರೆ ಈ ರಿಪೋರ್ಟ್ ಮೋಸದಿಂದ ಕೂಡಿದ್ದು, ಈಗಿನ ಕೇಂದ್ರ ಸರ್ಕಾರ ಕೇಸ್‌ನ್ನು ರೀ ಓಪನ್ ಮಾಡಬೇಕು. ಸಂಪೂರ್ಣವಾಗಿ ತನಿಖೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಶ್ರೀರಾಮ ಸೇನೆ ಹೋರಾಟ ಮಾಡುತ್ತದೆ ಎಂದವರು ಇದೇ ವೇಳೆ ತಿಳಿಸಿದರು.

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

2 days ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

3 days ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

3 days ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

3 days ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

3 days ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

3 days ago