Featured

ಉಡುಪಿ : ಪರ್ಯಾಯ ಮಹೋತ್ಸವದ ಸುಗಮ ವಾಹನ ಸಂಚಾರಕ್ಕೆ ಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆ – vishwanews24

ಉಡುಪಿ : ಪರ್ಯಾಯ ಮಹೋತ್ಸವದ ಸುಗಮ ವಾಹನ ಸಂಚಾರಕ್ಕೆ ಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆ

ಉಡುಪಿ: ಪುತ್ತಿಗೆ ಮಠದ ಪರ್ಯಾಯದ ಸಂದರ್ಭದಲ್ಲಿ ಬೇರೆ ಬೇರೆ ಕಡೆಗಳಿಂದ ಆಗಮಿಸುವ ಭಕ್ತಾದಿಗಳಿಗೆ ಹಾಗೂ ನಾಗರಿಕರಿಗೆ ಸುಗಮ ಸಂಚಾರ ಮತ್ತು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆಯನ್ನು ಈ ಬಾರಿ ಪರಿಚಯಿಸಿದೆ.

ಹೊಸಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆಯಲ್ಲಿ ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಹಾಯವಾಗುವ ನಿಟ್ಟಿನಲ್ಲಿ ನಗರದ 25 ಕಡೆಗಳಲ್ಲಿ ಕ್ಯೂ ಆರ್ ಕೋಡ್ ಸ್ಯಾನರ್ ಗಳನ್ನು ಆಳವಡಿಸಲಾಗುತ್ತಿದ್ದು ಇದನ್ನು ಸ್ಕ್ಯಾನ್ ಮಾಡುವುದ ರಿಂದ ಭಕ್ತರು ಶ್ರೀಕೃಷ್ಣ ಮಠಕ್ಕೆ ತಲುಪುವ ವಿವರಗಳು ಹಾಗೂ ಪಾರ್ಕಿಂಗ್ ಸ್ಥಳದ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಪರ್ಯಾಯಕ್ಕೆ ಆಗಮಿಸುವ ಹೊರ ರಾಜ್ಯ ಮತ್ತು ಜಿಲ್ಲೆಗಳ ಭಕ್ತರಿಗೆ ಸರಿಯಾದ ಮಾಹಿತಿ ಇಲ್ಲದೆ ಒಳರಸ್ತೆಗಳಿಂದ ನಗರಕ್ಕೆ ಪ್ರವೇಶ ಪಡೆದಾಗ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ’ ಅರುಣ್ ಕೆ ಹೊಸ ಪ್ರಯೋಗವನ್ನು ಮಾಡಿದ್ದಾರೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಹೊರರಾಜ್ಯ ಹಾಗೂ ಜಿಲ್ಲೆಗಳ ಭಕ್ತರು ನಿಗ ದಿತ ಪ್ರದೇಶಕ್ಕೆ ಸುಲಭವಾಗಿ ತಲುಪಬಹುದಾಗಿದೆ.

ಇದಲ್ಲದೆ ಕ್ಯೂಆರ್ ಕೋಡ್ ಸ್ಕ್ಯಾನ್ ತಮ್ಮ ಮೊಬೈಲ್ಗಳಲ್ಲಿ ಸ್ಕ್ಯಾನ್ ಮಾಡಿದಾಗ ಪರ್ಯಾಯ ಮಹೋತ್ಸವ ಸಂಬಂಧ ಈಗಾಗಲೇ ನಿಗದಿಪಡಿಸಿದ ವಿವಿಐಪಿ ಪಾರ್ಕಿಂಗ್, ವಿಐಪಿ ಪಾರ್ಕಿಂಗ್, ಕಾರು, ದ್ವಿಚಕ್ರ ವಾಹನ ಪಾರ್ಕಿಂಗ್ ಮಾಹಿತಿಗಳು ಫೋಟೋ ಸಮೇತ ಪಡೆಯಬಹುದಾಗಿದೆ.

ಅಲ್ಲದೆ ನಗರದಲ್ಲಿನ ಪರ್ಯಾಯ ಮೆರವಣಿಗೆ ಮಾರ್ಗ, ಪೊಲೀಸ್ ಔಟ್ಪೋಸ್ಟ್, ಪೊಲೀಸ್ ಹೆಲ್ಪ್ಲೈನ್, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೊಬೈಲ್ ಟಾಯ್ಲೆಟ್ಗಳು, ಸಾರ್ವಜನಿಕರಿಗೆ ಕಳ್ಳರ ಬಗ್ಗೆ ಎಚ್ಚರಿಕೆ ಕೊಡುವ ಪೊಲೀಸ್ ನೋಟೀಸ್ ಅಳವಡಿಸಿರುವ ಸ್ಥಳಗಳು, ಬ್ಯಾರಿಕೇಡ್ ಅಳವಡಿಸಿರುವ ಸ್ಥಳಗಳ ಸಂಪೂರ್ಣ ಮಾಹಿತಿ ಈ ವ್ಯವಸ್ಥೆಯಿಂದ ಪಡೆಯಬಹುದಾಗಿದೆ.

ಪರ್ಯಾಯ ಮಹೋತ್ಸವಕ್ಕೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆಯನ್ನು ಮಾಡಿದ್ದು ಇರಿಸಲು ಉಡುಪಿ, ದ.ಕ., ಚಿಕ್ಕಮಗಳೂರು, ಉತ್ತರಕನ್ನಡ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಜಿಲ್ಲೆಯ 4 ಮಂದಿ ಹಾಗೂ ಹೊರಜಿಲ್ಲೆಯ 5 ಮಂದಿ ಡಿವೈಎಸ್ಪಿಗಳು, ಜಿಲ್ಲೆಯ 10 ಹಾಗೂ ಹೊರಜಿಲ್ಲೆಯ 12 ಮಂದಿ ಪೊಲೀಸ್ ನಿರೀಕ್ಷಕರು, ಜಿಲ್ಲೆಯ 40 ಹಾಗೂ ಹೊರಜಿಲ್ಲೆಯ 25 ಮಂದಿ ಉಪನಿರೀಕ್ಷಕರು, ಜಿಲ್ಲೆಯ 550 ಹಾಗೂ ಹೊರಜಿಲ್ಲೆಯ 400 ಮಂದಿ ಸಿಬಂದಿ, ಎರಡು ಕೆಎಸ್ಆರ್ಪಿ, 10 ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಗಳನ್ನು ನಿಯೋಜಿಸಲಾಗಿದೆ.

PARYAYA DARBAR – 2024 TRAFFIC & PARKING MANAGEMENT SYSTEM

https://goo.gl/maps/VpRpr6uu1ZAdqZLX7

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

11 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

11 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

12 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

12 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

12 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

12 hours ago