ಪುಟ್ಟ ಬಾಲಕ ಭವಿತ್ ಗೆ ಬೇಕಾಗಿದೆ ಮಾನವೀಯತೆಯ ಸಹಾಯ ಹಸ್ತ.. ಉಡುಪಿ ಪರ್ಯಾಯ ಮಹೋತ್ಸವದಲ್ಲಿ ತಮ್ಮ ಕೈಲಾದ ಸಹಾಯ ನೀಡಿ ಭವಿತ್ ಕುಟುಂಬದ ಜೊತೆ ಕೈ ಜೋಡಿಸಿ..
ಎಲ್ಲಾ ಮಕ್ಕಳಂತೆ ಕಲಿಕೆಯತ್ತ ಹೆಜ್ಜೆ ಹಾಕುತ್ತಾ, ಅಕ್ಕಪಕ್ಕದ ಸಹಪಾಠಿಗಳೊಂದಿಗೆ ಆಟೋಟಗಳಲ್ಲಿ ಭಾಗವಹಿಸಿ ನಕ್ಕುನಲಿದಾಡ ಬೇಕಾದ ಬರೀ ಒಂಭತ್ತು ವಯಸ್ಸಿನ ಭವಿತ್, ಇಂದು ಪರಿಸರದ ಪ್ರಜ್ಞೆಯಿಲ್ಲದ ನಿಸ್ತೇಜನಾಗಿ ಮಲಗಿಕೊಂಡಿದ್ದಾನೆ.
ದೃಷ್ಟಿ ಮತ್ತು ಆಲಿಸುವ ಶಕ್ತಿಯನ್ನು ಕಳೆದುಕೊಂಡು, ಅಡ್ರಿನೊಮೈಲೋನ್ಯೂರೋಪತಿ ಎಂಬ ಅಪರೂಪದ ಮಾರಕ ಖಾಯಿಲೆಯ ಭಯಾನಕ ನೋವನ್ನನುಭವಿಸಿ ಮೌನ ಮತ್ತು ದೀನವಾಗಿ ರೋಧಿಸುವ ಆ ದೃಶ್ಯವಂತೂ ಕರುಣಾಜನಕವಾದುದು.
ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿ ರಸ್ತೆಯ ಕೆನರಾ ಅಪಾರ್ಟ್‌ಮೆಂಟ್‌ಲ್ಲಿ ಸದ್ಯಕ್ಕೆ ಬಾಡಿಗೆ ಮನೆಯಲ್ಲಿ ತಂಗಿರುವ *ಭವಿತ್ ಕುಟುಂಬ* ಈಗಾಗಲೇ ತನ್ನ ಏಕೈಕ ಪುತ್ರನ ಚಿಕಿತ್ಸೆಗಾಗಿ ಸುಮಾರು ಹನ್ನೆರಡು ಲಕ್ಷ ರೂಪಾಯಿಯಷ್ಟು ಖರ್ಚು ಮಾಡಿದೆ. ಇದ್ದುದ್ದಲ್ಲೆವನ್ನೂ ಕಳೆದುಕೊಂಡು, ಬಹಳಷ್ಟು ಸಾಲಗಳ ಮೂಟೆಯನ್ನೂ ಹೊತ್ತುಕೊಂಡು ಅಸಹಾಯಕರಾಗಿ ಪರಿತಪಿಸಿದೆ. ಮುಂದಿನ ಚಿಕಿತ್ಸೆಗೂ ಹಣವಿಲ್ಲದೆ ಕಂಗಾಲಾಗಿದೆ. ಭವಿತ್‌ಗಂತೂ ಪ್ರತಿ ತಿಂಗಳಿಗೆ ಸುಮಾರು ಅರವತ್ತು ಸಾವಿರದಷ್ಟು ಚಿಕಿತ್ಸೆಗೆ ಖರ್ಚಿದೆ. ಇವನ ಚಿಕಿತ್ಸೆಗೆ ಅಂದಾಜು ವೆಚ್ಚ 13 ಲಕ್ಷ ಆಗುವುದೆಂದು ವೈದ್ಯರು ತಿಳಿಸಿರುತ್ತಾರೆ..
ಬದುಕುವುದು ಪ್ರತಿಯೊಬ್ಬರ ಹಕ್ಕು. ಆದರೆ ವಾಸ್ತವ ಬೇರೆಯದೇ ಆಗಿರುತ್ತದೆ . ಭವಿಷ್ಯದ ಕನಸುಗಳನ್ನು ಕಾಣಲು ಅನಾರೋಗ್ಯದ ಸವಾಲು ಎದುರಿಸುತ್ತಿರುವ ಈ ಪುಟ್ಟ ಬಾಲಕನಿಗಾಗಿ ನಿಮ್ಮಲ್ಲಿ ನಮ್ರತೆಯ ವಿನಂತಿ ನಮ್ಮ ತಂಡ ಶಕ್ತಿ ಮೀರಿ ಈ ಬಾಲಕನಿಗೆ ತಮ್ಮಿಂದಾಗುವ ಧನ ಸಹಾಯವನ್ನು ಸಂಗ್ರಹಿಸಿ ನೀಡುವ ಭರವಸೆಯನ್ನು ಕುಟುಂಬಕ್ಕೆ ನೀಡಿದೆ.
ಅದಲ್ಲದೆ ನಾಳೆ *ಉಡುಪಿ ಪರ್ಯಾಯ ಮಹೋತ್ಸವದಲ್ಲಿ* ಧನ ಸಂಗ್ರಹಿಸಿ ನಮ್ಮಿಂದ ಆಗುವ ಸಹಾಯವನ್ನು ಮಾಡಬೇಕು ಎಂದು ಇಚ್ಚಿಸಿದ್ದೇವೆ.
ನಮಗೆಲ್ಲರಿಗೂ ಸಮಸ್ಯೆ ಇದ್ದದ್ದೆ ಆದರೆ ಕಮರಿದ ಕನಸುಗಳಿಗೆ ಮತ್ತೆ ರೆಕ್ಕೆ ಕಟ್ಟಿ ಹಾರಿಸುವ ಸಣ್ಣ ಪ್ರಯತ್ನವನ್ನು ಮಾಡಬಹುದು. ದಯವಿಟ್ಟು ತಮ್ಮ ಕೈಲಾದಷ್ಟು ಧನ ಸಹಾಯವನ್ನು ನೀಡಿ.
ದೇವರು ಕೊಟ್ಟ ಈ ಬಣ್ಣದ ಬದುಕು ಎಷ್ಟು ದಿನ, ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಬನ್ನಿ
ನಿಮ್ಮ ಪ್ರೀತಿಯ ಸಹಕಾರದ ನಿರೀಕ್ಷೆಯಲ್ಲಿ….
Karavali Youth Club (R) Udupi*
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…