Featured

ಉಡುಪಿ : ಪೊಲೀಸರ ಮೇಲೆ ಕಲ್ಲೆಸೆಯುತ್ತಾರೆ ಅಂದರೆ ಭಯ ಇಲ್ಲ ಅಂತಾಯ್ತು : ಸರ್ಕಾರದ ವಿರುದ್ಧ ಪೇಜಾವರ ಶ್ರೀ ಆಕ್ರೋಶ – Vishwanews24

ಉಡುಪಿ : ಪೊಲೀಸರ ಮೇಲೆ ಹಲ್ಲೆಯಾದರೂ ಸರ್ಕಾರ ಏನು ಮಾಡುತ್ತಿದೆ? : ಪೇಜಾವರ ಶ್ರೀ ಆಕ್ರೋಶ

ಉಡುಪಿ : ನಿನ್ನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಮನೆಗಳ ಮೇಲೆ ಕಲ್ಲುತೂರಾಟ ಹಾಗೂ ಪೊಲೀಸರು ಹಾಗೂ ಜನರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಡುಪಿಯ ವಿಶ್ವಪ್ರಸನ್ನತೀರ್ಥ ಸ್ವಾಮಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಬಾರಿ ಅಶಾಂತಿ ಸೃಷ್ಟಿ ಆದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಅದರಿಂದ ಕಾನೂನನ್ನು ಯಾರು ಕೈಗೆತ್ತಿಕೊಳ್ಳಬಾರದು. ಪೊಲೀಸರ ಮೇಲೆ ಹಲ್ಲೆಯಾದರೂ ಸರ್ಕಾರ ಏನು ಮಾಡುತ್ತಿದೆ? ಪೊಲೀಸರ ಮೇಲೆ ಕಲ್ಲೆಸೆಸುತ್ತಾರೆ ಅಂದರೆ ಭಯ ಇಲ್ಲ ಅಂತಾಯ್ತು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಶಿವಮೊಗ್ಗದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 60 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮುಂಜಾಗ್ರತಾ ಕ್ರಮವಾಗಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ವೇಳೆ ದುಷ್ಕರ್ಮಿಗಳಿಂದ ಕಲ್ಲೆಸೆತ ಉಂಟಾಗಿದ್ದು ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಗುಗುಡ್ಡ ಪ್ರದೇಶದಲ್ಲಿ 144 ಸೆಕ್ಷನ್‌ ಜಾರಿ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮನಿ ಆದೇಶಿಸಿದ್ದಾರೆ. ಯಾರೋ ಕಿಡಿಗೇಡಿಗಳು ಮನೆಗಳು ಮತ್ತು ಪೊಲಿಸರ ಮೇಲೆ ಕಲ್ಲು ಎಸೆದಿದ್ದರು.ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

Vishwa News 24

Recent Posts

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

14 hours ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

16 hours ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

16 hours ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

16 hours ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

16 hours ago

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

3 days ago