Featured

ಉಡುಪಿ : ಪೊಲೀಸ್ ಸೇವೆ ಎನ್ನುವುದು ಒಂದು ಅತ್ಯುನ್ನತ ಸೇವೆಯಾಗಿದ್ದು ರಾಷ್ಟ್ರ ಕಟ್ಟುವ ಕಾಯಕದಲ್ಲಿ ಕೈಜೋಡಿಸುವ ಪೊಲೀಸರಿಗೆ ಅಭಿನಂದನೆಗಳು :  ಜಿಲ್ಲಾಧಿಕಾರಿ ಜಿ ಜಗದೀಶ್ -Vishwanews24

ಉಡುಪಿ: ಪೊಲೀಸ್ ಕಾನ್ಸ್ಟೇಬಲ್ ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ..

ಪೊಲೀಸ್ ಸೇವೆ ಎನ್ನುವುದು ಒಂದು ಅತ್ಯುನ್ನತ ಸೇವೆಯಾಗಿದ್ದು ರಾಷ್ಟ್ರ ಕಟ್ಟುವ ಕಾಯಕದಲ್ಲಿ ಕೈಜೋಡಿಸುವ ಪೊಲೀಸರಿಗೆ ಅಭಿನಂದನೆಗಳು :  ಜಿಲ್ಲಾಧಿಕಾರಿ ಜಿ ಜಗದೀಶ್ -Vishwanews24

ಉಡುಪಿ: ಕರ್ತವ್ಯದ್ಲಲಿ ಶೇಷ್ಠತೆಯನ್ನು ಕಂಡುಕೊಳ್ಳುವ ಮೂಲಕ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

ಅವರು ಬುಧವಾರ ನಗರದ ಚಂದು ಮೈದಾನದಲ್ಲಿ 12ನೇ ಪೊಲೀಸ್ ಕಾನ್ಸ್ಟೆಬಲ್ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪೊಲೀಸ್ ಸೇವೆ ಎನ್ನುವುದು ಒಂದು ಅತ್ಯುನ್ನತ ಸೇವೆಯಾಗಿದ್ದು ರಾಷ್ಟ್ರ ಕಟ್ಟುವ ಕಾಯಕದಲ್ಲಿ ಕೈಜೋಡಿಸುವ ಪೊಲೀಸರಿಗೆ ಅಭಿನಂದನೆಗಳು. ಸೇವೆಗೆ ಸೇರಿದ ಮೇಲೆ ಹಿಂದೆ ಇದ್ದ ಮನೋವೃತ್ತಿಯನ್ನು ಬದಲಾಯಿಸದೆ ಜನರ ನೋವಿಗೆ ದನಿಯಾಗುವಂತೆ ಅವರು ಕರೆ ನೀಡಿದರು.

 

ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ವರದಿ ವಾಚಿಸಿ ಒಳಾಂಗಣ ವಿಷಯಕ್ಕೆ ಸಂಬಂಧಿಸಿದಂತೆ ಈ ಘಟಕದಲ್ಲಿರುವ ಅಧಿಕಾರಿಗಳೊಗೊಂಡಂತೆ ಹೊರಗಿನ ಅತಿಥಿ ಉಪನ್ಯಾಸಕರನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿಕೊಂಡು ಬೋಧನೆ ನೀಡಲಾಗಿದೆ. ಹೊರಾಂಗಣ ವಿಷಯಗಳಿಗೆ ಸಂಬಂಧಿಸಿದಂತೆ ಕೋವಿಡ್ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಯೋಗ, ಧ್ಯಾನ, ಕರಾಟೆ, ಶಾರೀರಿಕ ವ್ಯಾಯಾಮ, ಒನ್ ಮಿನಿಟ್ ಡ್ರಿಲ್, ರೋಡ್ ವಾಕ್ ಅಂಡ್ ರನ್, ಅಡೆತಡೆಗಳ ಜಿಗಿತ, ಅಯುಧಗಲ ಜೊತೆ ಕವಾಯತು, ಅಯುಧಗಳ ಇಲ್ಲದೆ ಮಾಡುವ ಕವಾಯತು, ಫೈರಿಂಗ್ ಅಭ್ಯಾಸ, ಕ್ರೌಡ್ ಕಂಟೋಲ್, ಫೈರಿಂಗ್ ಹಾಗೂ ಅಶ್ರುವಾಯುಗಳ ಬಗ್ಗೆ ಬೋಧನೆ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗಿದೆ. ಪ್ರಶಿಕ್ಷಣಾರ್ಥಿಗಳಿಗೆ ಮನೋರಂಜನೆ ಮತ್ತು ಮನೋವಿಕಾಸಕ್ಕಾಗಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ತರಬೇತಿ ಬಿಡುವಿನ ಸಮಯದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಸ್ವಾಗತಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಕಾರ್ಕಳ ಉಪ ವಿಭಾಗದ ಅಧಿಕ್ಷಕರಾದ ಭರತ್ ರೆಡ್ಡಿ ವಂದಿಸಿದರು. ಡಿ ಎ ಆರ್ ಡಿವೈಎಸ್ಪಿ ರಾಘವೇಂದ್ರ ಪ್ರಮಾಣ ವಚನ ಭೋದಿಸಿದರು, ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಪರೇಡ್ ಕಮಾಂಡರ್ ಸಂತೋಷ್ ಕಪ್ಪಲಗುದ್ದಿ ನೇತೃತ್ವದಲ್ಲಿ ನಿರ್ಗಮನ ಪಥಸಂಚಲನ ಆಕರ್ಷಕವಾಗಿ ಮೂಡಿಬಂದಿತು.

Vishwa News 24

Recent Posts

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ -vishwanews24

ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…

9 hours ago

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ – vishwanews24

ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್‌ಟ್ರಿಮ್ ಡ್ಯಾನ್ಸ್ ಅಕಾಡೆಮಿ…

18 hours ago

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ – vishwanews24

ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…

18 hours ago

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು – vishwanews24

ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…

18 hours ago

`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ – vishwanews24

`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…

18 hours ago

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

2 days ago