ಉಡುಪಿ: ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾಗುವ ಕುರಿತು ಅಧಿಕೃತ ಮಾಹಿತಿ ಇಲ್ಲ. ಅವರು ಬಿಜೆಪಿಗೆ ಬರುವುದಕ್ಕೆ ನನ್ನದೇನೂ ಅಭ್ಯಂತರ ಇಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು,ಇತ್ತೀಚಿಗೆ ಮುಖ್ಯಮಂತ್ರಿಗಳು ಉಡುಪಿಗೆ ಬಂದಾಗ ಪ್ರಮೋದ್ ಮಧ್ವರಾಜ್ ಅವರು ಸಿಎಂ ಭೇಟಿಯಾಗಿದ್ದರು. ಆಗ ನಾನು ಉಪಹಾರ ಮಾಡುತ್ತಿದ್ದೆ. ಕೈಯಲ್ಲಿ ಯಾವುದೋ ಕವರ್ ಹಿಡಿದುಕೊಂಡಿದ್ದರು. ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಮಯ ಕೇಳಿದ್ದರು. ಹಾಗಾಗಿ ಕಂಟ್ರಿ ಇನ್ ಹೋಟೆಲ್ ಗೆ ಬಂದಿದ್ದರು. ಪಕ್ಷ ಸೇರ್ಪಡೆಯ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ ಎಂದರು.
ಅವರು ಪಕ್ಷ ಸೇರ್ಪಡೆ ಆದಲ್ಲಿ ನನಗೆ ಎದುರಾಳಿ ಅಲ್ಲದಿದ್ದರೂ ಪಕ್ಷದ ಎದುರಾಳಿ ಆಗಬಹುದು. ಹೊಸತನ ಕಾಣುವ ಪಕ್ಷದಲ್ಲಿ ಅವರು ಎದುರಾಳಿ ಆಗಬಹುದು. ರಾಜಕೀಯದಲ್ಲಿ ಎದುರಾಳಿ, ಪಕ್ಷದಲ್ಲೂ ಅಥವಾ ಎದುರಲ್ಲಿ ಇರಬಹುದು ಏನೇ ಬಂದರೂ ನಾವು ಮಾನಸಿಕವಾಗಿ ಸಿದ್ದ ಇರಬೇಕು. ಪಕ್ಷ ನಮಗೆ ಅದನ್ನೇ ಹೇಳಿ ಕೊಡುತ್ತದೆ . ಏನೇ ಆದರೂ ಹೋರಾಟ ಮಾಡುವ ಶಕ್ತಿ ಉಳಿಸಿಕೊಳ್ಳಬೇಕು.
ರಾಜಕೀಯ ಪಕ್ಷದಲ್ಲಿ ಕೊನೆಯ ಕ್ಷಣದಲ್ಲಿ ಟಿಕೆಟ್ ಯಾರಿಗೂ ಸಿಗಬಹುದು. ಆಗಲೇ ಸ್ಪರ್ಧೆಯಲ್ಲಿ ಮಜಾ ಬರುತ್ತದೆ ಎಂದು ರಘುಪತಿ ಭಟ್ ಪ್ರತಿಕ್ರಿಯಿಸಿದರು.
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…