ಕುಂದಾಪುರ: ಕೊಲ್ಲೂರಿನಿಂದ ಮಂಗಳೂರಿಗೆ ಸಾಗುವ ಬಸ್ಸಿನಲ್ಲಿದ್ದ ದಂಪತಿ ಗುರುವಾರ ಮಧ್ಯಾಹ್ನ ಬಸ್ಸಿನಲ್ಲೇ ವಿಷ ಸೇವಿಸಿದ್ದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ಅಂಬಲಪಾಡಿ ಬೈಪಾಸ್ ಬಳಿ ಟೆಂಟ್‌ನಲ್ಲಿ ವಾಸ ಮಾಡುತ್ತಿರುವ ತಮಿಳುನಾಡು ಮೂಲದ ವಲಸೆ ಕಾರ್ಮಿಕ ರಾಜಕುಮಾರ್ (35), ಪತ್ನಿ ಸಂಗೀತಾ (28) ವಿಷ ಸೇವಿಸಿದ್ದು ಅವರೊಂದಿಗಿದ್ದ ಒಂದೂವರೆ ವರ್ಷದ ಗಂಡು ಮಗುವಿಗೆ ವಿಷ ಪ್ರಾಶನವಾಗಿದೆಯೇ ಎಂಬುವ ಗುಮಾನಿ ಮೇರೆಗೆ ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಕುಮಾರ್ ತಮಿಳಿನಲ್ಲಿ ಡೆತ್ ನೋಟ್ ಬರೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ರಾಜಕುಮಾರ್ ಹಾಗೂ ಸಂಗೀತ ಮಗುವಿನ ಜೊತೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದರು. ದೇವರ ದರ್ಶನ ಪಡೆದು, ಅನ್ನ ಪ್ರಸಾದ ಸ್ವೀಕರಿಸಿದ ನಂತರ ಕೊಲ್ಲೂರು ಮಂಗಳೂರು ಬಸ್ ಏರಿದ್ದರು. ಬಸ್ ಏರದ ನಂತರವೋ ಬಸ್ ಏರುವ ಮುನ್ನಾ ವಿಷ ಸೇವಿಸಿದ್ದರ ಎನ್ನೋದು ಸ್ಪಷ್ಟವಾಗಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪತಿ,ಪತ್ನಿ ಸೀಟಿನಲ್ಲಿ ನರಳಾಡುತ್ತಿರುವುದು ನಿರ್ವಾಕ ಗಮನಿಸಿದ್ದಾರೆ. ವಂಡ್ಸೆ ದಾಟಿದ ನಂತರ ವಿಷದ ಪ್ರಭಾವ ಹೆಚ್ಚಾಗಿ ಪತಿ,ಪತ್ನಿ ನರಾಳಾಟ ಹೆಚ್ಚಾಗಿದೆ. ಕಟ್‌ಬೆಲ್ತೂರು ಬಳಿ ಸೀಟಿನಲ್ಲಿ ಒದ್ದಾಡುತ್ತಿದ್ದು ಇಬ್ಬರನ್ನು ನಿರ್ವಾಹಕ ನೋಡಿದ್ದು, ಬಾಯಲ್ಲಿ ನೊರೆ ಬರುವುದ ಕಂಡು ವಿಷ ಸೇವಿಸಿದ್ದಾರೆ ಎಂದು ಗೊತ್ತಾಗಿದೆ. ತಕ್ಷಣ ನಿರ್ವಾಹಕ ಚಾಲಕ್ ಇಕ್ಬಾಲ್ ಗಮನಕ್ಕೆ ತಂದಿದ್ದು, ಅಲ್ಲಿಂದ ಬಸ್ ನೇರ ಕುಂದಾಪುರ ಸರ್ಕಾರಿ ಆಸ್ಪತ್ರೆ ತಂದಿದ್ದಾರೆ. ಬಸ್ಸಿನಲ್ಲಿ ಪತಿ ಪತ್ನಿ ವಿಷ ಕುಡಿದ ಬಗ್ಗೆ ಸಹಾಯವಾಣಿ ತಿಳಿಸಿದ್ದರಿಂದ ಅವರೂ ಆಸ್ಪತ್ರೆ ಬಳಿ ಆಗಮಿಸಿದ್ದು, ತಕ್ಷಣ ಬಸ್ಸಿಂದ ದಂಪತಿ ಇಳಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಬಸ್ ಚಾಲಕ, ನಿರ್ವಾಹಕನ ಮಾನವೀಯತೆ….
ನಿರ್ವಾಹಕ ತಕ್ಷಣ ಚಾಲಕ ಇಕ್ಬಾಲ್ ಗಮನಕ್ಕೆ ತಂದಿದ್ದಾರೆ. ಚಾಲಕ ಬಸ್ಸನ್ನು ನಿಲ್ಲಿಸದೆ ನೇರ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ತಂದಿದ್ದಾರೆ. ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.ಬಸ್ ಚಾಲಕ ಇಕ್ಬಾಲ್ ಮತ್ತು ನಿರ್ವಾಹಕ ಸತೀಶ್ ಸಮಯಪ್ರಜ್ಞೆಗೆ ವೈದ್ಯರು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…