ಉಡುಪಿ: ಖಾಸಗಿ ಬಸ್ ಚಾಲಕ ಹಾಗೂ ಆತನ ಪ್ರಿಯತಮೆಯ ನಡುವೆ ವಾಗ್ವಾದ ಉಂಟಾಗಿ ಆತ ಬಸ್ ಅನ್ನು ನಿಲ್ಲಿಸಿ ಪರಾರಿಯಾದ ಘಟನೆ ನಡೆದಿದೆ. ಉಡುಪಿಯಿಂದ ಸಂತೆಕಟ್ಟೆ ಭಾಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ನಿಟ್ಟೂರು ಬಳಿ ಬಸ್ ಚಾಲಕನ ಪ್ರೇಯಸಿ ಬಸ್ ಹತ್ತಿದ್ದಾಳೆ.
ಅಲ್ಲಿಂದಲೇ ಅವರ ನಡುವೆ ವಾಗ್ಯುದ್ಧ ನಡೆದಿದೆ. ನಿರ್ವಾಹಕ ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪ್ರೇಯಸಿಯ ಕಿರಿಕಿರಿಯಿಂದ ರೋಸಿ ಹೋದ ಚಾಲಕ ಆಶೀರ್ವಾದ್ ಚಿತ್ರಮಂದಿರದ ಸ್ವಲ್ಪ ಮುಂದಕ್ಕೆ ಬಸ್ ನಿಲ್ಲಿಸಿ ಹೋಗಿದ್ದಾನೆ. ಪ್ರೇಯಸಿ ಮತ್ತೊಂದು ದಾರಿ ಹಿಡಿದರು.
ಪ್ರಯಾಣಿಕರು ಇದನ್ನೆಲ್ಲ ನೋಡಿಯೇ ಬಾಕಿಯಾಗಿದ್ದಾರೆ. ಸಂಜೆ ವೇಳೆ ಈ ಘಟನೆ ನಡೆದಿದ್ದು, ಬಳಿಕ ಬಸ್ ನಿರ್ವಾಹಕನೇ ಬಸ್ ಅನ್ನು ಚಲಾಯಿಸಿಕೊಂಡು ಹೋದ ಘಟನೆ ನಡೆಯಿತು. ಬಸ್ ನಿಲ್ಲಿಸಿ ತೆರಳಿದ ಚಾಲಕನ ನಿರ್ಲಕ್ಷ್ಯತನಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…