ಉಡುಪಿ: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೋಗಲಾಡಿಸುವುದು ಹೇಗೆಂದು ಅದನ್ನು ಉತ್ಪಾದಿಸಲು ಹಸಿರುನಿಶಾನೆ, ಅನುಮತಿ, ಸಬ್ಸಿಡಿ ಒದಗಿಸಿದ ಸರಕಾರವೇ ತರಬೇತಿ, ಸ್ವಚ್ಛತಾ ಅಭಿಯಾನ, ಮರುಬಳಕೆ ಚಿಂತನೆ ಹೀಗೆ ಬಗೆ ಬಗೆಯ ನಿರ್ಮೂಲನ ಯೋಜನೆಗಳನ್ನು ಆಯೋಜಿಸುತ್ತಿದೆ.
ಒಟ್ಟಾರೆ ಉತ್ಪಾದಿಸುವಾಗಲೂ, ನಿರ್ಮೂಲನಗೊಳಿಸುವಾಗಲೂ ಸಾಕಷ್ಟು ಹಣ ಖರ್ಚು ಜನರ ತಲೆಗೇ ಬೀಳುವುದು ಜನರಿಗೇ ಗೊತ್ತಿಲ್ಲ. ಮುಂಬರುವ ಅದಮಾರು ಮಠದ ಪರ್ಯಾಯದಲ್ಲಿ ಅನಿವಾರ್ಯವೆನಿಸಿದ ಪ್ಲಾಸ್ಟಿಕ್ಗಳನ್ನು ಬಳಸುವಾಗಲೇ ಹೊರಗಿಡುವ ಪ್ರಯತ್ನ ಮಾಡಲಾಗಿದೆ.
ಪ್ಲಾಸ್ಟಿಕ್ ಅಗ್ರಮಾನ್ಯ ಸ್ಥಾನಗಳಲ್ಲಿ ಅಲಂಕರಿಸುತ್ತಿದ್ದ ಫ್ಲೆಕ್ಸ್ ಬ್ಯಾನರ್, ಸ್ವಾಗತ ಕಮಾನುಗಳು ಅದಮಾರು ಮಠ ಪರ್ಯಾಯದಲ್ಲಿ ಪ್ಲಾಸ್ಟಿಕ್ರಹಿತವಾಗಿ, ದೇಸೀತನದಿಂದ ಎದ್ದು ನಿಂತಿವೆ. 10 ದೊಡ್ಡ ಕಮಾನುಗಳು, 22 ಸಣ್ಣ ಕಮಾನುಗಳು ಸೇರಿದಂತೆ 43 ಕಮಾನುಗಳ ರಚನೆಯಾಗಿವೆ. ಉಡುಪಿ ಜೋಡುಕಟ್ಟೆಯಿಂದ ತೆಂಕುಪೇಟೆ ದಾರಿಯಾಗಿ ರಥಬೀದಿಯನ್ನು ಪ್ರವೇ ಶಿಸುವ ದಾರಿಯಲ್ಲಿ ಹಾಕಿದ ಕಮಾನುಗಳಲ್ಲಿ ಅದಮಾರು ಮಠದ ಹಿಂದಿನ 32 ಗುರುಗಳ ಹೆಸರುಗಳನ್ನು ಬರೆದು ಗುರುಸ್ಮರಣೆ ಬರುವಂತೆ ಮಾಡಲಾಗಿದೆ.
ಜೋಡುಕಟ್ಟೆ, ಕಲ್ಪನಾ, ಕಲ್ಸಂಕ, ಅಂಬಾಗಿಲು, ಸಂಸ್ಕೃತ ಕಾಲೇಜು ಸರ್ಕಲ್, ಕಡಿಯಾಳಿ, ಬನ್ನಂಜೆ, ಕಿನ್ನಿಮೂಲ್ಕಿ ಬಳಿ ಪ್ರವೇಶ ತಾಣ, ಅಂಬಲಪಾಡಿ ಜಂಕ್ಷನ್ ಮೊದಲಾದೆಡೆ ದೊಡ್ಡ ಕಮಾನುಗಳು ನಿಂತಿವೆ. ನಗರದ ವಿವಿಧ ಪ್ರದೇಶಗಳಲ್ಲಿ ಸಣ್ಣ ಕಮಾನುಗಳನ್ನು ರಚಿಸಲಾಗಿದೆ.
ಉಡುಪಿ ರಥಬೀದಿಯಿಂದ ಜೋಡು ಕಟ್ಟೆವರೆಗೆ 400 ಕಂಬಗಳಲ್ಲಿ 800 ಗೂಡು ದೀಪಗಳನ್ನು ಅಳವಡಿ ಸಲಾಗುತ್ತದೆ. ಅದರೊಳಗೆ ಬಲೂನ್ಗಳು ಇರುತ್ತವೆ. ಇದು ಪ್ರಾಚೀನತೆಯನ್ನು ನೆನಪಿಗೆ ಬರುವಂತೆ ಮಾಡದಿರದು. 100 ದೊಡ್ಡ ಬ್ಯಾನರ್ಗಳನ್ನು ಉಡುಪಿ ಸುತ್ತಮುತ್ತ, 70 ದೊಡ್ಡ ಬ್ಯಾನರ್ಗಳು ಮಂಗಳೂರಿನಿಂದ ಕುಂದಾಪುರದ ವರೆಗೆ, 200 ಸಣ್ಣ ಬ್ಯಾನರ್ಗಳು ಮಂಗಳೂರಿನಿಂದ ಕುಂದಾಪುರ, ಉಡುಪಿಯಿಂದ ಕಾರ್ಕಳದವರೆಗೆ ಕಟ್ಟಲಾಗಿದೆ. ಕಮಾನುಗಳ ಸುತ್ತ ಪ್ಲಾಸ್ಟಿಕ್ನಿಂದ ತಯಾರಿಸಿದ ಬಣ್ಣದ ಹೊದಿಕೆಯನ್ನು ಹೊದಿಸಲಾಗುತ್ತಿತ್ತು. ಈ ಸ್ಥಾನದಲ್ಲಿ ಈಗ ಬಟ್ಟೆಗಳನ್ನೇ ಬಳಸಲಾಗಿದೆ. ಜನಪದ, ದೇಸೀ ಶೈಲಿ ಕಮಾನುಗಳಲ್ಲಿ ಎದ್ದು ಕಾಣುತ್ತಿದೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…