ಉಡುಪಿ : ಪ್ಲಾಸ್ಟಿಕ್‌ ಮುಕ್ತ ಶ್ರೀ ಕೃಷ್ಣ ಮಠದ ಪರ್ಯಾಯ -Vishwanews24

ಉಡುಪಿ: ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹೋಗಲಾಡಿಸುವುದು ಹೇಗೆಂದು ಅದನ್ನು ಉತ್ಪಾದಿಸಲು ಹಸಿರುನಿಶಾನೆ, ಅನುಮತಿ, ಸಬ್ಸಿಡಿ ಒದಗಿಸಿದ ಸರಕಾರವೇ ತರಬೇತಿ, ಸ್ವಚ್ಛತಾ ಅಭಿಯಾನ, ಮರುಬಳಕೆ ಚಿಂತನೆ ಹೀಗೆ ಬಗೆ ಬಗೆಯ ನಿರ್ಮೂಲನ ಯೋಜನೆಗಳನ್ನು ಆಯೋಜಿಸುತ್ತಿದೆ.

ಒಟ್ಟಾರೆ ಉತ್ಪಾದಿಸುವಾಗಲೂ, ನಿರ್ಮೂಲನಗೊಳಿಸುವಾಗಲೂ ಸಾಕಷ್ಟು ಹಣ ಖರ್ಚು ಜನರ ತಲೆಗೇ ಬೀಳುವುದು ಜನರಿಗೇ ಗೊತ್ತಿಲ್ಲ. ಮುಂಬರುವ ಅದಮಾರು ಮಠದ ಪರ್ಯಾಯದಲ್ಲಿ ಅನಿವಾರ್ಯವೆನಿಸಿದ ಪ್ಲಾಸ್ಟಿಕ್‌ಗಳನ್ನು ಬಳಸುವಾಗಲೇ ಹೊರಗಿಡುವ ಪ್ರಯತ್ನ ಮಾಡಲಾಗಿದೆ.

ಪ್ಲಾಸ್ಟಿಕ್‌ ಅಗ್ರಮಾನ್ಯ ಸ್ಥಾನಗಳಲ್ಲಿ ಅಲಂಕರಿಸುತ್ತಿದ್ದ ಫ್ಲೆಕ್ಸ್‌ ಬ್ಯಾನರ್‌, ಸ್ವಾಗತ ಕಮಾನುಗಳು ಅದಮಾರು ಮಠ ಪರ್ಯಾಯದಲ್ಲಿ ಪ್ಲಾಸ್ಟಿಕ್‌ರಹಿತವಾಗಿ, ದೇಸೀತನದಿಂದ ಎದ್ದು ನಿಂತಿವೆ. 10 ದೊಡ್ಡ ಕಮಾನುಗಳು, 22 ಸಣ್ಣ ಕಮಾನುಗಳು ಸೇರಿದಂತೆ 43 ಕಮಾನುಗಳ ರಚನೆಯಾಗಿವೆ. ಉಡುಪಿ ಜೋಡುಕಟ್ಟೆಯಿಂದ ತೆಂಕುಪೇಟೆ ದಾರಿಯಾಗಿ ರಥಬೀದಿಯನ್ನು ಪ್ರವೇ ಶಿಸುವ ದಾರಿಯಲ್ಲಿ ಹಾಕಿದ ಕಮಾನುಗಳಲ್ಲಿ ಅದಮಾರು ಮಠದ ಹಿಂದಿನ 32 ಗುರುಗಳ ಹೆಸರುಗಳನ್ನು ಬರೆದು ಗುರುಸ್ಮರಣೆ ಬರುವಂತೆ ಮಾಡಲಾಗಿದೆ.

ಜೋಡುಕಟ್ಟೆ, ಕಲ್ಪನಾ, ಕಲ್ಸಂಕ, ಅಂಬಾಗಿಲು, ಸಂಸ್ಕೃತ ಕಾಲೇಜು ಸರ್ಕಲ್‌, ಕಡಿಯಾಳಿ, ಬನ್ನಂಜೆ, ಕಿನ್ನಿಮೂಲ್ಕಿ ಬಳಿ ಪ್ರವೇಶ ತಾಣ, ಅಂಬಲಪಾಡಿ ಜಂಕ್ಷನ್‌ ಮೊದಲಾದೆಡೆ ದೊಡ್ಡ ಕಮಾನುಗಳು ನಿಂತಿವೆ. ನಗರದ ವಿವಿಧ ಪ್ರದೇಶಗಳಲ್ಲಿ ಸಣ್ಣ ಕಮಾನುಗಳನ್ನು ರಚಿಸಲಾಗಿದೆ.

ಉಡುಪಿ ರಥಬೀದಿಯಿಂದ ಜೋಡು ಕಟ್ಟೆವರೆಗೆ 400 ಕಂಬಗಳಲ್ಲಿ 800 ಗೂಡು ದೀಪಗಳನ್ನು ಅಳವಡಿ ಸಲಾಗುತ್ತದೆ. ಅದರೊಳಗೆ ಬಲೂನ್ಗಳು ಇರುತ್ತವೆ. ಇದು ಪ್ರಾಚೀನತೆಯನ್ನು ನೆನಪಿಗೆ ಬರುವಂತೆ ಮಾಡದಿರದು. 100 ದೊಡ್ಡ ಬ್ಯಾನರ್‌ಗಳನ್ನು ಉಡುಪಿ ಸುತ್ತಮುತ್ತ, 70 ದೊಡ್ಡ ಬ್ಯಾನರ್‌ಗಳು ಮಂಗಳೂರಿನಿಂದ ಕುಂದಾಪುರದ ವರೆಗೆ, 200 ಸಣ್ಣ ಬ್ಯಾನರ್‌ಗಳು ಮಂಗಳೂರಿನಿಂದ ಕುಂದಾಪುರ, ಉಡುಪಿಯಿಂದ ಕಾರ್ಕಳದವರೆಗೆ ಕಟ್ಟಲಾಗಿದೆ. ಕಮಾನುಗಳ ಸುತ್ತ ಪ್ಲಾಸ್ಟಿಕ್‌ನಿಂದ ತಯಾರಿಸಿದ ಬಣ್ಣದ ಹೊದಿಕೆಯನ್ನು ಹೊದಿಸಲಾಗುತ್ತಿತ್ತು. ಈ ಸ್ಥಾನದಲ್ಲಿ ಈಗ ಬಟ್ಟೆಗಳನ್ನೇ ಬಳಸಲಾಗಿದೆ. ಜನಪದ, ದೇಸೀ ಶೈಲಿ ಕಮಾನುಗಳಲ್ಲಿ ಎದ್ದು ಕಾಣುತ್ತಿದೆ.

 

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago